ಕನ್ನಡಪ್ರಭ ವಾರ್ತೆ ಕೊರಟಗೆರೆ
ಇದೆ ವೇಳೆ ಕೊರಟಗೆರೆ ಬೆಸ್ಕಾಂ ಎಇಇ ಪ್ರಸನ್ನ ಕುಮಾರ್ ಮಾತನಾಡಿ ಸಹಾಯಕ ಎಂಜಿನಿಯರ್ ಯೋಗೇಶ್ ಅವರು ಸುಮಾರು ೮ ವರ್ಷಗಳಿಂದ ಬೆಸ್ಕಾಂ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸಾಕಷ್ಟು ಜನಮನ್ನಣೆ ಗಳಿಸಿದ್ದಾರೆ. ಇಂತಹ ಪ್ರಮಾಣಿಕ ಅಧಿಕಾರಿಗಳನ್ನ ಕಳಿಸಿಕೊಡುತ್ತಿರುವುದು ನೋವಿನ ಸಂಗತಿ ಮುಂದಿನ ದಿನಗಳಲ್ಲಿ ಅವರ ಸೇವೆ ಕೊರಟಗೆರೆ ಜನರಿಗೆ ದೊರೆಯಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದರು.
ಸಹಾಯಕ ಎಂಜಿನಿಯರ್ ಯೋಗೇಶ್ ಮಾತನಾಡಿ ಕೊರಟಗೆರೆ ಹಾಗೂ ಹೊಳವನಹಳ್ಳಿ ಹೋಬಳಿಯ ಜನರು ಸಹೃದಯರಾಗಿದ್ದು, ನಾನು ಬಂದು ೮ ವರ್ಷಗಳ ಕಳೆದರೂ ಇಲ್ಲಿನ ಜನ ಪ್ರೀತಿ, ವಿಶ್ವಾಸ, ಸ್ನೇಹದಿಂದ ಇಷ್ಟು ವರ್ಷ ನನ್ನ ನೋಡಿಕೊಂಡಿದ್ದೀರ ಯಾವತ್ತು ನಾನು ಈ ತಾಲೂಕಿನ ಜನರನ್ನ ಮರೆಯುವುದಿಲ್ಲ. ಮತ್ತೆ ನನಗೆ ಅವಕಾಶ ದೊರೆತಲ್ಲಿ ಖಂಡಿತ ನಿಮ್ಮ ಸೇವೆ ಮಾಡಲು ಬರುತ್ತೇನೆ. ಇಷ್ಟು ದಿನ ನನಗೆ ಸಹಕಾರ ನೀಡುತ್ತಿದ್ದ ನನ್ನ ಮೇಲಾಧಿಕಾರಿಗಳು, ಸಹದ್ಯೋಗಿಗಳು, ನನ್ನ ಸಿಬ್ಬಂದಿ ಹಾಗೂ ತಾಲೂಕಿನ ಕೊರಟಗೆರೆ, ಹೊಳವನಹಳ್ಳಿ ಜನತೆ ಧನ್ಯವಾದವನ್ನ ತಿಳಿಸಿದರು.ಇದೆ ಸಂದರ್ಭದಲ್ಲಿ ಬೆಸ್ಕಾಂ ಹಿರಿಯ ಸಹಾಯಕ ನಟರಾಜು, ಶಾಖಾಧಿಕಾರಿ ಮಲ್ಲಯ್ಯ, ಜಬೀವೂಲ್ಲಾ, ಗೋವಿಂದಪ್ಪ ಬೆಸ್ಕಾಂ ಅಧಿಕಾರಿಗಳು ಗುತ್ತಿಗೆದಾರರು ಸೇರಿದಂತೆ ಊರಿನ ಗ್ರಾಮಸ್ಥರು ಹಾಜರಿದ್ದರು.