ಕನ್ನಡಪ್ರಭ ವಾರ್ತೆ ನಾಪೋಕ್ಲು
ಶಾಲೆಯಲ್ಲಿ ಆಯೋಜಿಸಿದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ಎಸ್.ಡಿ ಎಂ.ಸಿ., ವಿದ್ಯಾರ್ಥಿಗಳು, ಮಡಿಕೇರಿ ತಾಲೂಕಿನ ಶಿಕ್ಷಕರ ಸಂಘ, ಬಿ.ಆರ್.ಸಿ.ಇವರು ಕೆ.ಸಿ.ಧರ್ಮೇಂದ್ರ ದಂಪತಿಗೆ ನೆನಪಿನ ಕಾಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ನಿವೃತ್ತಿ ಹೊಂದಿದ ಕೆ.ಸಿ.ಧರ್ಮೇಂದ್ರ ಶಾಲೆಗೆ ಮರದ ಕಪಾಟನ್ನು ಉದಾರವಾಗಿ ನೀಡಿದರು. ಸಮಾರಂಭದಲ್ಲಿ ಪ್ರಭಾರಿ ಮುಖ್ಯ ಶಿಕ್ಷಕರಾದ ಬೋಜಮ್ಮ, ಸಹ ಶಿಕ್ಷಕಿಯರಾದ ಕೆ.ಎ.ಹೇಮಮಾಲಿನಿ, ರಾಧಾ ಕೆ ಜೆ, ಬುಶೀರ ಕೆ ಎಂ, ನಿವೃತ್ತ ದೈಹಿಕ ಶಿಕ್ಷಕಿ ಎಂ ಬಿ ಭಾರತಿ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಮೋಹನ್ ಪೆರಾಜೆ ಮತ್ತು ಸದಸ್ಯರು, ಬಿ ಆರ್.ಸಿ ಮಂಜುಳಾ ಚಿತ್ರಾಪುರ, ಪ್ರಸಾದ್, ಎಸ್ ಡಿ ಎಂ ಸಿ ಪದಾಧಿಕಾರಿ ಸದಸ್ಯರು, ಶಿಕ್ಷಕರು, ಪೋಷಕರು ಹಾಜರಿದ್ದರು.