ಇಂದು ಕುರುವತ್ತಿ ಪಾದಯಾತ್ರಿಗಳ ಬೀಳ್ಕೊಡುಗೆ

KannadaprabhaNewsNetwork | Published : Feb 26, 2025 1:02 AM

ಸಾರಾಂಶ

ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಸುಕ್ಷೇತ್ರ ಕುರುವತ್ತಿಯಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ, ಶ್ರೀ ಬಸವೇಶ್ವರ ರಥೋತ್ಸವವು ಫೆ.28ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶ್ರೀ ಕುರುವತ್ತಿ ಬಸವೇಶ್ವರ ಪಾದಯಾತ್ರೆ ಸೇವಾ ಸಮಿತಿಯಿಂದ 21ನೇ ವರ್ಷದ ಪಾದಯಾತ್ರೆ ಬೀಳ್ಕೊಡುಗೆ ಸಮಾರಂಭವ ಫೆ.26ರಂದು ನಗರದ ಶ್ರೀ ಚೌಕಿಪೇಟೆಯ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಸಹ ಸಂಚಾಲಕ ಶಿವಾನಂದಪ್ಪ ಬೆನ್ನೂರು ಹೇಳಿದ್ದಾರೆ.

- 28ರಂದು ನಡೆಯಲಿರುವ ಮಲ್ಲಿಕಾರ್ಜುನ ಸ್ವಾಮಿ, ಬಸವೇಶ್ವರ ರಥೋತ್ಸವ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಸುಕ್ಷೇತ್ರ ಕುರುವತ್ತಿಯಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ, ಶ್ರೀ ಬಸವೇಶ್ವರ ರಥೋತ್ಸವವು ಫೆ.28ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶ್ರೀ ಕುರುವತ್ತಿ ಬಸವೇಶ್ವರ ಪಾದಯಾತ್ರೆ ಸೇವಾ ಸಮಿತಿಯಿಂದ 21ನೇ ವರ್ಷದ ಪಾದಯಾತ್ರೆ ಬೀಳ್ಕೊಡುಗೆ ಸಮಾರಂಭವ ಫೆ.26ರಂದು ನಗರದ ಶ್ರೀ ಚೌಕಿಪೇಟೆಯ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಸಹ ಸಂಚಾಲಕ ಶಿವಾನಂದಪ್ಪ ಬೆನ್ನೂರು ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಫೆ.26ರ ರಾತ್ರಿ 8 ಗಂಟೆಗೆ ಚೌಕಿಪೇಟೆ ಶ್ರೀ ಬಕ್ಕೇಶ್ವರ ದೇವಸ್ಥಾನ ಆವರಣದಿಂದ ಕೊಟ್ಟೂರು ಪಾದಯಾತ್ರಿಗಳಿಗೆ ಬೀಳ್ಕೊಡುಗೆ ಸಮಾರಂಭವು ಕುಮಾರಪಟ್ಟಣಂ ಕೋಡಿಯಾಲ ಹೊಸಪೇಟೆಯ ಅವಿಮುಕ್ತ ತಪೋಕ್ಷೇತ್ರ ಪುಣ್ಯಕೋಟಿ ಮಠದ ಶ್ರೀ ಬಾಲಯೋಗಿ ಪೂಜ್ಯಶ್ರೀ ಜಗದೀಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ ಸಮಿತಿ ಗೌರವಾಧ್ಯಕ್ಷ, ಅಭಿ ಕಾಟನ್ಸ್ ಮಾಲೀಕ ಎನ್.ಬಕ್ಕೇಶ ನ್ಯಾಮತಿ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದರು. ಮಾಜಿ ಉಪ ಮೇಯರ್ ಸೋಗಿ ಶಾಂತಕುಮಾರ, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ, ದೂಡಾ ಸದಸ್ಯರಾದ ಎಂ.ಆರ್.ವಾಣಿ ಬಕ್ಕೇಶ ನ್ಯಾಮತಿ, ಮಾಳಗೇದರ ಎಂ.ಕೆ.ಬಸವರಾಜಪ್ಪ, ಸಮಿತಿ ಅಧ್ಯಕ್ಷ ಕೆ.ಎ.ಸತ್ಯನಾರಾಯಣ, ಉಪಾಧ್ಯಕ್ಷ, ಶ್ರೀ ಬಸವೇಶ್ವರ ಟ್ರಾನ್ಸಪೋರ್ಟ್ ಮಾಲೀಕ ಮಹಾಂತೇಶ ವಿ.ಒಣರೊಟ್ಟಿ ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಫೆ.28ರ ಸಂಜೆ 4.30ಕ್ಕೆ ಕುರುವತ್ತಿ ಸುಕ್ಷೇತ್ರದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ, ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ನಡೆಯಲಿದೆ ಎಂದರು.

ಸಮಿತಿಯ ಬಿ.ಆರ್. ಗಿರೀಶ, ಕೆ.ಎಂ. ಲೋಕೇಶ್ವರಯ್ಯ ಕೊಂಡಜ್ಜಿ ಮಠ, ಎಚ್.ಚನ್ನಬಸಪ್ಪ, ಬಿ.ಎಸ್.ಚೇತನ ಇತರರು ಇದ್ದರು.

- - -

Share this article