ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದ ಸಿ. ವಿ. ಮಂಜಪ್ಪ ಸಮುದಾಯ ಭವನದಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕುಸುಮಬಾಲಕೃಷ್ಣ ಮಾತನಾಡಿ, ಮಹೇಶ್‌ರವರ ನಿವೃತ್ತಿ ಜೀವನ ಸುಖಕರವಾಗಿರಲಿ, ಅವರ ಸೇವೆ ತಾಲೂಕಿಗೆ ಅನನ್ಯ, ವಸತಿ ಶಾಲೆಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಮಹೇಶ್‌ರವರು ತಮ್ಮ ಅಧಿಕಾರ ಅವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಬರದ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದು ಮಕ್ಕಳು ಹಾಗೂ ಸಿಬ್ಬಂದಿಯ ಜೊತೆ ಉತ್ತಮ ಒಡನಾಟ ಹೊಂದಿದ್ದರು ಎಂದರು.ವಿವಿಧ ಸಂಘಸಂಸ್ಥೆಗಳ ಗೌರವ ಪಡೆದು ಮಾತನಾಡಿದ ಮಹೇಶ್, ಸುಮಾರು 33 ವರ್ಷಗಳ ಸೇವೆ ತಮಗೆ ತೃಪ್ತಿ ತಂದಿದೆ. ಮಕ್ಕಳೇ ದೇವರು ಅವರ ಸೇವೆಗೆ ಅವಕಾಶ ದೊರಕಿದ್ದು ನನ್ನ ಸೌಭಾಗ್ಯ ಎಂದರು.
ಈ ಸಂದರ್ಭದಲ್ಲಿ ಪರಿಸರ ಪ್ರೇಮಿ ಸಿ.ಎನ್ ಅಶೋಕ್, ಸಾಹಿತಿ ಗಿರಿರಾಜ್, ಕಲಾವಿದ ಸೋಮಶೇಖರ್, ದಿಂಡಗೂರು ಗೋವಿಂದರಾಜ್, ಭೂಮಿ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ರಾಜಕುಮಾರ್, ಜಬಿವುಲ್ಲಾ, ಧರ್ಮೇಶ್, ಸಾವಿತ್ರಮ್ಮ ಮುಂತಾದವರಿದ್ದರು.