ಅವಧಿ ಪೂರ್ಣಗೊಂಡ ಗ್ರಾಪಂ ಸದಸ್ಯರಿಗೆ ಬೀಳ್ಕೊಡುಗೆ

KannadaprabhaNewsNetwork |  
Published : Feb 02, 2026, 02:30 AM IST
ಶಿಗ್ಗಾಂವಿ ತಾಲೂಕಿನ ಕುನ್ನೂರ ಗ್ರಾಮ ಪಂಚಾಯತಿಯಲ್ಲಿ ಜರುಗಿದ ಗ್ರಾ.ಪಂ. ಅಧ್ಯಕ್ಷ ಉಪಾಧ್ಯಕ್ಷ, ಸದಸ್ಯರ ಅಧಿಕಾರ ಅವಧಿಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಿದರು. | Kannada Prabha

ಸಾರಾಂಶ

ಸರ್ಕಾರಿ ಯೋಜನೆಗಳನ್ನು ಗ್ರಾಮೀಣ ಜನರಿಗೆ ತಲುಪಿಸುವುದು ಗ್ರಾಮ ಪಂಚಾಯಿತಿ ಮಹತ್ವದ ಜವಾಬ್ದಾರಿಯಾಗಿರುತ್ತದೆ. ಆದ್ದರಿಂದ ಅಧಿಕಾರಿ, ಸಿಬ್ಬಂದಿಗಳು ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಮಹೇಶ ಚಿಕ್ಕವೀರಮಠ ಹೇಳಿದರು.

ಶಿಗ್ಗಾಂವಿ: ಸರ್ಕಾರಿ ಯೋಜನೆಗಳನ್ನು ಗ್ರಾಮೀಣ ಜನರಿಗೆ ತಲುಪಿಸುವುದು ಗ್ರಾಮ ಪಂಚಾಯಿತಿ ಮಹತ್ವದ ಜವಾಬ್ದಾರಿಯಾಗಿರುತ್ತದೆ. ಆದ್ದರಿಂದ ಅಧಿಕಾರಿ, ಸಿಬ್ಬಂದಿಗಳು ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಮಹೇಶ ಚಿಕ್ಕವೀರಮಠ ಹೇಳಿದರು.ತಾಲೂಕಿನ ಕುನ್ನೂರ ಗ್ರಾಮ ಪಂಚಾಯಿತಿಯಲ್ಲಿ ಜರುಗಿದ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಅಧಿಕಾರ ಅವಧಿಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿ ಹಾಗೂ ಬೀದಿ ದೀಪ, ಗ್ರಾಮಗಳ ಸ್ವಚ್ಛತೆಗೆ ಮುಂದಾಗಿದ್ದು, ಆದರೆ ಚುನಾಯಿತ ಪ್ರತಿನಿಧಿಗಳು ಅಧಿಕಾರದಲ್ಲಿ ಬರುವದು ಹೋಗುವದು ಸಾಮಾನ್ಯ. ಆದರೆ ಅಧಿಕಾರಿ ಸಿಬ್ಬಂದಿಗಳು ಶಾಶ್ವತವಾಗಿದ್ದು, ಸಾರ್ವಜನಿಕರ ಅಹವಾಲನ್ನು ಆಲಿಸಿ ಅವರಿಗೆ ಸ್ಪಂದಿಸಿ ಯಾವುದೇ ಕಾರ್ಯಗಳು ನಿಲ್ಲದಂತೆ ಮುಂದುವರೆಸಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾ ಉಪ್ಪಾರ ವಹಿಸಿದ್ದರು. ಉಪಾಧ್ಯಕ್ಷ ಶ್ರೀಕಾಂತವ್ವ ಮೊರಬದ, ಸದಸ್ಯರಾದ ಡಿ.ಆರ್. ಬೊಮ್ಮನಹಳ್ಳಿ, ಬಸನಗೌಡ ಬ್ಯಾಹಟ್ಟಿ, ಲಕ್ಷ್ಮಣ್ಣಾ ಬೆಂಡಲಗಟ್ಟಿ, ಗಂಗವ್ವ ಲಮಾಣಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಎಸ್.ಎಸ್. ಪಾವೀನ, ಕಾರ್ಯದರ್ಶಿ ಮುಸ್ತಾಕ, ಶಿವಾನಂದ ದೊಡ್ಡಮನಿ ಸೇರಿದಂತೆ ಹಲವರು ಮಾತನಾಡಿದರು.ಸದಸ್ಯರಾದ ಪಿ.ಎಫ್. ಪಾಟೀಲ, ಹನುಮಂತಪ್ಪ ಮಾನೆ, ಮೈಲಾರೆಪ್ಪ ಇಂದೂರ, ಹಸೀನಾಭೀ ಬಂಕಾಪೂರ, ಮಲ್ಲೇವ್ವ ಮಮದಾಪೂರ, ಮರೆವ್ವ ಬಸರಿಕಟ್ಟಿ, ಮಹಾದೇವಿ ಬಡಿಗೇರ, ಕಾರ್ಯಕ್ರಮದ ಸ್ವಾಗತವನ್ನು ಬಸವರಾಜ ಅಣ್ಣಿಗೇರಿ ನೆರವೇರಿಸಿದರು. ಮಹಾದೇವಪ್ಪ ನೀರಲಗಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ
ರಾಜಕ್ಕೆ ಕೇಂದ್ರ ಬಜೆಟ್ಟಲ್ಲಿ ಚೊಂಬು : ಸಿಎಂ ಸಿಡಿಮಿಡಿ