ಅರಣ್ಯ ಇಲಾಖೆಯಲ್ಲಿ ಸೇವೆಗೈದವರಿಗೆ ಬೀಳ್ಕೊಡುಗೆ

KannadaprabhaNewsNetwork | Published : Jul 14, 2024 1:39 AM

ಸಾರಾಂಶ

ಹನೂರು ಪಟ್ಟಣದಲ್ಲಿ ಅರಣ್ಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ವರ್ಗಾವಣೆಯಾದ ಅಧಿಕಾರಿ ಸಿಬ್ಬಂದಿ ವರ್ಗದವರಿಗೆ ಇಲಾಖೆ ವತಿಯಿಂದ ಅಭಿನಂದನೆ ಮತ್ತು ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಹನೂರು

ಅರಣ್ಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಪಡೆದ ಹಾಗೂ ವಿವಿಧಡೆ ವರ್ಗಾವಣೆ ಆಗಿರುವ ಅಧಿಕಾರಿ ಸಿಬ್ಬಂದಿ ವರ್ಗದವರ ಸೇವೆ ಶ್ಲಾಘನಿಯವಾದದ್ದು ಎಂದು ಎಸಿಎಫ್ ಚಂದ್ರಶೇಖರ್ ಅಭಿಮತ ವ್ಯಕ್ತಪಡಿಸಿದರು.

ಹನೂರು ಪಟ್ಟಣದ ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ವಲಯದ ವಿವಿಧಡೆ ಕರ್ತವ್ಯ ನಿರ್ವಹಿಸಿ ವರ್ಗಾವಣೆಯಾದ ಅಧಿಕಾರಿ ಸಿಬ್ಬಂದಿಗೆ ಅಜ್ಜಿಪುರ ರಸ್ತೆಯಲ್ಲಿ ಬರುವ ಸಸ್ಯ ಕ್ಷೇತ್ರದ ಆವರಣದಲ್ಲಿ ಆಯೋಜನೆ ಮಾಡಲಾಗಿದ್ದ ಅಭಿನಂದನೆ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಡಿಆರ್‌ಎಪ್‌ಕೆ ಪ್ರಸಾದ್ ತಾಲೂಕಿನ ವಿವಿಧಡೆ ಅರಣ್ಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಒಳಗಾಗಿ ಇತ್ತೀಚೆಗೆ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಪಡೆದ ಅವರ ಸೇವೆ ಉತ್ತಮವಾಗಿದೆ. ಹೀಗಾಗಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಚಾಮರಾಜನಗರದ ಹುಲಿ ಸಂರಕ್ಷಿತ ಅರಣ್ಯ ವಲಯಕ್ಕೆ ವರ್ಗಾವಣೆ ಆಗಿರುವ ಅವರ ಸೇವೆ ಇಲಾಖೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮತ್ತೋರ್ವ ಡಿಆರ್‌ಎಫ್ ಸಾಲಾನ್ ಸಹ ತಾಲೂಕಿನ ವಿವಿಧ ವಿಭಾಗಗಳಲ್ಲಿ ಉತ್ತಮ ಸೇವೆ ಸಲ್ಲಿಸಿ ಕೊಳ್ಳೇಗಾಲ ಸಾಮಾಜಿಕ ಅರಣ್ಯ ವಲಯಕ್ಕೆ ವರ್ಗಾವಣೆ ಆಗಿರುವ ಅವರು ಇರುವಷ್ಟು ದಿನ ಉತ್ತಮ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಅರಣ್ಯ ಗಸ್ತು ಪಾಲಕ ನಂದೀಶ್ ಪಿಜಿ ಪಾಳ್ಯ ವಲಯಕ್ಕೆ ಪರಶುರಾಮ್ ಭಜಂತ್ರಿ ಅಲಗೂರು ಕಾವೇರಿ ವನ್ಯ ಧಾಮಕ್ಕೆ ವರ್ಗಾವಣೆಯಾಗಿದ್ದಾರೆ. ಹೀಗಾಗಿ ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಅಭಿನಂದಿಸಿದರು.

ವಲಯ ಅರಣ್ಯ ಅಧಿಕಾರಿ ಪ್ರವೀಣ್ ಮಾತನಾಡಿ, ಚಿನ್ನದ ಪದಕ ಪಡೆದ ಹಾಗೂ ವರ್ಗಾವಣೆ ಆಗಿರುವ ಅಧಿಕಾರಿ ಸಿಬ್ಬಂದಿ ವರ್ಗದವರು ಇರುವಷ್ಟು ದಿನ ವಲಯದಲ್ಲಿ ಯಾವುದೇ ಸಮಸ್ಯೆಗಳಿಲ್ಲದಂತೆ ಉತ್ತಮ ಸೇವೆ ಸಲ್ಲಿಸಿ ವರ್ಗಾವಣೆಯಾಗಿರುವ ಅವರು ಇತರರಿಗೂ ಸಹ ಮಾದರಿಯಾಗಿದ್ದಾರೆ. ಜೊತೆಗೆ ಡಿಆರ್‌ಎಫ್‌ಕೆ ಪ್ರಸಾದ್ ಸಹ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಪಡೆದು ಅರಣ್ಯ ಇಲಾಖೆಗೆ ಗೌರವ ತಂದು ಕೊಟ್ಟಿದ್ದಾರೆ. ಉಳಿದಂತ ಸಾಲಾನ್ ಮತ್ತು ಅರಣ್ಯ ರಕ್ಷಕರು ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ ಎಂದು ಬಣ್ಣಿಸಿದರು. ಈ ಸಂದರ್ಭದಲ್ಲಿ ಅರಣ್ಯ ಗಸ್ತು ಪಾಲಕರಾದ ಅಶೋಕ್ ಭೀಮಸಿ ಮತ್ತು ಮುನಿಯಾಳ ಬಾಬು ಚಿನ್ನಸ್ವಾಮಿ ಹಾಗೂ ಕಳ್ಳಬೇಟೆ ಶಿಬಿರಗಳ ಸಿಬ್ಬಂದಿ ವರ್ಗ ಮತ್ತು ಈಟಿಎಫ್ ಸಿಬ್ಬಂದಿಗಳಾದ ಶಿವರಾಜ್ ಕೃಷ್ಣ ಚಾಲಕ ರಾಜೇಶ್ ಉಪಸ್ಥಿತರಿದ್ದರು.

Share this article