ಮುಸುಕಿನ ಜೋಳ ತೂಕದಲ್ಲಿ ಅಕ್ರಮ ಕಂಡುಹಿಡಿದ ರೈತ

KannadaprabhaNewsNetwork |  
Published : Sep 20, 2025, 01:00 AM IST
ಮುಸುಕಿನ ಜೋಳ ತೂಕದಲ್ಲಿ ವ್ಯತ್ಯಾಸ ಕಂಡುಹಿಡಿದ ಅನ್ನದಾತ | Kannada Prabha

ಸಾರಾಂಶ

ತೂಕದಲ್ಲಿ ಇದ್ದಕ್ಕಿದ್ದಂತೆ ಕಡಿಮೆ ಆಗೋದನ್ನು ಕಂಡು ಅನುಮಾನಗೊಂಡ ರೈತರು ಇದನ್ನ ಪ್ರಶ್ನೆ ಮಾಡುತ್ತಿದ್ದಂತೆ ದಲ್ಲಾಳಿ ಓಡಿ ಹೋಗಿದ್ದಾನೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕಿನ ರೇಚಂಬಳ್ಳಿ ಗ್ರಾಮದಲ್ಲಿ ಮುಸುಕಿನ ಜೋಳದ ತೂಕದಲ್ಲಿ ಅನ್ಯಾಯ ಮಾಡುತ್ತಿದ್ದ ದಲ್ಲಾಳಿಯನ್ನು ಸ್ಥಳದಲ್ಲೇ ರೈತ ಪ್ರಶ್ನೆ ಮಾಡುತ್ತಿದ್ದಂತೆ ದಲ್ಲಾಳಿಯು ತೂಕದ ಮಿಷನ್, ಜೋಳದ ತುಂಬಿದ ಲಾರಿಯನ್ನು ಬಿಟ್ಟು ಪಾರಾರಿಯಾಗಿರುವ ಘಟನೆ ಇಂದು ನಡೆದಿದೆ.

ಗ್ರಾಮದ ರೈತ ಗುರುಪ್ರಸಾದ್ ಅವರು ಒಂದು ಎಕರೆ ಜಮೀನಿನಲ್ಲಿ ಮುಸುಕಿನ ಜೋಳ ಬೆಳೆದು ಸಿದ್ದರಾಜು ಎಂಬ ದಲ್ಲಾಳಿಗೆ ಒಂದು ಕ್ವಿಂಟಾಲ್‌ಗೆ 2,280 ರು. ಬೆಲೆಗೆ ಮಾರಾಟ ಮಾಡಿದ್ದು, ಇಂದು ಬೆಳಿಗ್ಗೆ 9 ಗಂಟೆ ಜೋಳ ತೂಕ ಮಾಡಲು ಬಂದು ತೂಕ ಆರಂಭಿಸಿದ್ದಾರೆ. ತೂಕದಲ್ಲಿ ಇದ್ದಕ್ಕಿದ್ದಂತೆ ಕಡಿಮೆ ಆಗೋದನ್ನು ಕಂಡು ಅನುಮಾನಗೊಂಡ ರೈತರು ಇದನ್ನ ಪ್ರಶ್ನೆ ಮಾಡುತ್ತಿದ್ದಂತೆ ದಲ್ಲಾಳಿ ಓಡಿ ಹೋಗಿದ್ದಾನೆ.

ಗ್ರಾಮದ ರೈತ ಗುರುಪ್ರಸಾದ್ ಮಾತನಾಡಿ, ನಾನು ಒಂದು ಎಕರೆ ಜಮೀನಿನಲ್ಲಿ ಮುಸುಕಿನ ಜೋಳ ಬೆಳೆದು ಸಿದ್ದರಾಜು ಎಂಬ ದಲ್ಲಾಳಿಗೆ ಒಂದು ಕ್ವಿಂಟಾಲ್‌ಗೆ 2,280 ರು. ಬೆಲೆಗೆ ಮಾರಾಟ ಮಾಡಿದ್ದು, ಇಂದು ಬೆಳಿಗ್ಗೆ 9 ಗಂಟೆ ಜೋಳ ತೂಕ ಮಾಡಲು ಬಂದು ತೂಕ ಆರಂಭಿಸಿದ್ದಾರೆ. ತೂಕ ಪರೀಕ್ಷೆ ಮಾಡಿದೆ. 75 ಕೆಜಿ ಇತ್ತು. ಎರಡು ಬಾರಿ ಎರಡು ಮೂಟೆ ಬಿಟ್ಟು ಬಿಟ್ಟು ಚೆಕ್ ಮಾಡಿದೆ. ಒಂದು ಬಾರಿ ಅನುಮಾನ ಬಂದು ಅವರ ಹತ್ತಿರ ಜೇಬಿನಲ್ಲಿ ಏನಿದೆ ತೆಗೆ ಎಂದೆ ಹೇಳಿದೆ ಆಗ ಅವನು ನನ್ನ ಹತ್ತಿರ ಏನು ಇಲ್ಲ ಎಂದು ಓಡಲು ಶುರು ಮಾಡಿದ ಈ ರಿಮೋಟ್ ಅವನ ಹತ್ತಿರ ಸಿಕ್ಕು ಅ ರಿಮೋಟ್ ಚೆಕ್ ಮಾಡಿದಾಗ 75 ಕೆಜಿ ಇದ್ದದ್ದು 68 ಕೆಜಿ ಬಂತು ಪ್ರತಿ 60 ಕೆಜಿಯಲ್ಲಿ ರೈತರಿಂದ 2 ಕೆಜಿ, ರಿಮೋಟ್ ಪ್ರೆಸ್ ಮಾಡುವ ಮೂಲಕ 6 ಕೆ.ಜಿ ಒಟ್ಟು ರೈತರಿಂದ 8ಕೆಜಿ ಹೊಡೆಯುವ ಮೂಲಕ ರೈತರಿಗೆ ಮೋಸ ಮಾಡುತ್ತಿದ್ದಾನೆ ಎಂದು ಆರೋಪಿಸಿದರು.

ಈ ಭಾಗದಲ್ಲಿ ಸಾವಿರಾರು ಕ್ವಿಂಟಾಲ್ ಜೋಳದ ಖರೀದಿ ಮಾಡಿದ್ದಾನೆ. ಇದನ್ನು ನೋಡಿದರೆ ರೈತರಿಗೆ ಸಾವಿರಾರು ಕೆ.ಜಿ ಮೋಸ ಮಾಡಿ ರೈತರಿಗೆ ಮೊಕ್ಮಲ್ ಟೋಪಿ ಹಾಕಿದ್ದಾನೆ. ಇತನ ವಿರುದ್ಧ ಪೋಲಿಸರಿಗೆ ದೂರು ನೀಡಲಾಗುವುದು. ಆತನನ್ನು ವಿಚಾರಣೆಗೆ ಒಳಪಡಿಸಿ ಪಡೆದು ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಗುರುಪ್ರಸಾದ್ ಒತ್ತಾಯಿಸಿದರು.

ದಲ್ಲಾಳಿ ವಿರುದ್ಧ ಪ್ರಕರಣ ದಾಖಲು:

ರಿಮೊಟ್ ಬಳಸಿ ತೂಕದಲ್ಲಿ ಮೋಸ ಮಾಡಿ ದಲ್ಲಾಳಿ ತಗ್ಲಾಕಿಕೊಂಡ ಘಟನೆ ಚಾಮರಾಜನಗರ ತಾಲೂಕಿನ ರೇಚಂಬಳ್ಳಿಯಲ್ಲಿ ನಡೆದಿತ್ತು. ಈ ಸಂಬಂಧ ದಲ್ಲಾಳಿ ಮತ್ತು ಸಹಚರರ ವಿರುದ್ಧ ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

----------

19ಸಿಎಚ್ಎನ್‌15

PREV

Recommended Stories

ಶಿವಯೋಗಿ ಸೊಸೈಟಿಗೆ 20.97 ಲಕ್ಷ ಲಾಭ
ಯುವಜನತೆಗೆ ರಕ್ತದಾನದ ಮಹತ್ವ ತಿಳಿಸಿಕೊಡಿ