ಬರಗಾಲದಲ್ಲೂ ₹3 ಲಕ್ಷದ ಈರುಳ್ಳಿ ಬೆಳೆದ ರೈತ

KannadaprabhaNewsNetwork |  
Published : Nov 05, 2026, 02:30 AM IST
(3ಎನ್.ಆರ್.ಡಿ4 ಬರಗಾಲದ ಮಧ್ಯವು 1ಎಕರಗೆ 3ಲಕ್ಷದ ಈರಳ್ಳಿ ಬೆಳೆದ ರೈತ.)  | Kannada Prabha

ಸಾರಾಂಶ

ಪ್ರಸಕ್ತ ವರ್ಷ ಬರಗಾಲದದಿಂದ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ಇದರ ನಡುವೆಯೂ ಅಲ್ಪಸ್ವಲ್ಪ ಮಳೆಗೆ ಯುವ ರೈತರೊಬ್ಬರು 1 ಎಕರೆ 20 ಗುಂಟೆ ಜಮೀನಿನಲ್ಲಿ 3 ಲಕ್ಷದ ಈರಳ್ಳಿ ಬೆಳೆದು ಗಮನ ಸೆಳೆದಿದ್ದಾರೆ.

ಉತ್ತಮ ಆದಾಯ ಗಳಿಕೆ । ರೈತನ ಮೊಗದಲ್ಲಿ ನಗು

ಎಸ್.ಜಿ. ತೆಗ್ಗಿನಮನಿ

ಕನ್ನಡಪ್ರಭ ವಾರ್ತೆ ನರಗುಂದ

ಪ್ರಸಕ್ತ ವರ್ಷ ಬರಗಾಲದದಿಂದ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ಇದರ ನಡುವೆಯೂ ಅಲ್ಪಸ್ವಲ್ಪ ಮಳೆಗೆ ಯುವ ರೈತರೊಬ್ಬರು 1 ಎಕರೆ 20 ಗುಂಟೆ ಜಮೀನಿನಲ್ಲಿ ₹3 ಲಕ್ಷದ ಈರಳ್ಳಿ ಬೆಳೆದು ಗಮನ ಸೆಳೆದಿದ್ದಾರೆ.

ಕೃಷಿ ವೆಚ್ಚದ ಏರಿಕೆ ಹಾಗೂ ಬೆಳೆಗಳ ಇಳುವರಿಯ ಅನಿಶ್ಚಿತತೆಯ ನಡುವೆಯೂ ತಾಲೂಕಿನ ಭೈರನಹಟ್ಟಿ ಗ್ರಾಮದ ಯುವ ರೈತ ಜ್ಞಾನೇಶ ಮನನೇಕೊಪ್ಪ ಈರುಳ್ಳಿ ಬೆಳೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ಅಲ್ಪಸ್ವಲ್ಪವಾದ ರೋಹಿಣಿ ಮಳೆಗೆ 6 ಕೆಜಿ ಈರುಳ್ಳಿ ಬೀಜ ಬಿತ್ತನೆ ಮಾಡಿ 50 ಕೆಜಿಯ 2 ಪ್ಯಾಕೇಟ್‌ ಗೊಬ್ಬರ ಹಾಕಿದ್ದಾರೆ. ನಾಲ್ಕು ಬಾರಿ ಕಳೆ ತೆಗಿಸಿ, 3 ಬಾರಿ ಔಷಧ ಸಿಂಪಡಣೆ ಮಾಡಿ ಒಂದು ಬಾರಿ ಮಾತ್ರ ಮಲಪ್ರಭೆ ಕಾಲುವೆ ನೀರನ್ನು ಈ ಬೆಳೆಗೆ ನೀಡಿದ್ದಾರೆ. ಒಟ್ಟು 180 ಚೀಲ ಈರುಳ್ಳಿ ಬೆಳೆದಿದ್ದಾರೆ.

ಉತ್ತಮ ಆದಾಯ:

ಪ್ರತಿ ಚೀಲದಲ್ಲಿ 50ರಿಂದ 55 ಕೆಜಿ ಈರುಳ್ಳಿ ಇರುವುದರಿಂದ ಒಟ್ಟು ಸುಮಾರು 120 ಕ್ವಿಂಟಲ್ ಈರುಳ್ಳಿಯನ್ನು ಮಾರಾಟ ಮಾಡಿ ಬರಗಾಲದ ಮಧ್ಯೆಯೂ ₹3 ಲಕ್ಷ ಆದಾಯ ಗಳಿಸಿದ್ದಾರೆ.

ಉತ್ತಮ ಇಳುವರಿ ಪಡೆಯಲು ರೈತರು ಜಮೀನಿನ ಫಲವತ್ತತೆ ಹೆಚ್ಚಿಸಬೇಕು. ಕೊಟ್ಟಿಗೆ ಗೊಬ್ಬರ ಹಾಗೂ ಎರೆಹುಳು ಗೊಬ್ಬರ ಬಳಸಬೇಕು. ಮಣ್ಣಿನ ಪರೀಕ್ಷೆ ಮಾಡಿಸಿ ಜಮೀನಿಗೆ ಯಾವ ಗೊಬ್ಬರ ಮತ್ತು ಔಷಧ ಅವಶ್ಯವಿರುತ್ತದೆ, ಆ ಗೊಬ್ಬರ ಮಾತ್ರ ಬಳಕೆ ಮಾಡಿದರೆ ಮಾತ್ರ ಉತ್ತಮ ಬೆಳೆ ಪಡೆಯಲು ಸಾಧ್ಯ ಎನ್ನುತ್ತಾರೆ ರೈತ ಜ್ಞಾನೇಶ ಮನನೇಕೊಪ್ಪ.

ಬಂಪರ್‌ ಬೆಲೆ:

ತಾಲೂಕಿನ ಕೆಲವು ರೈತರು ಕೃಷಿ ಹೊಂಡ ಮತ್ತು ಮಲಪ್ರಭಾ ಕಾಲುವೆ ನೀರನ್ನು ಸ್ವಲ್ಪ ಬಳಕೆ ಮಾಡಿಕೊಂಡು ತಮ್ಮ ಶ್ರಮದಿಂದ ಬೆಳೆದ ಈರುಳ್ಳಿಗೆ ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹3500ದಿಂದ 4500ವರೆಗೆ ಬಂಪರ್‌ ಬೆಲೆ ಇರುವುದರಿಂದ ಈರುಳ್ಳಿ ಬೆಳೆದವರು ಖುಷಿಯಾಗಿದ್ದಾರೆ.

ಬರಗಾಲದ ಪರಿಸ್ಥಿತಿಯಲ್ಲಿ ಮಳೆ ಕೊರತೆ, ನೀರಿನ ಅಭಾವ, ಗೊಬ್ಬರ, ಔಷಧ ಹಾಗೂ ಕೂಲಿ ವೆಚ್ಚಗಳು ರೈತರಿಗೆ ಇಂದಿನ ದಿನಗಳಲ್ಲಿ ಸವಾಲಾಗಿವೆ. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಉತ್ತಮ ಇಳುವರಿ ಪಡೆಯುವ ಮೂಲಕ ಈ ರೈತ ಎಲ್ಲರ ಗಮನ ಸೆಳೆದಿದ್ದಾನೆ.ಪ್ರತಿ ವರ್ಷ ನಾನು ಮುಂಗಾರು ಹಂಗಾಮಿನಲ್ಲಿ ಈರಳ್ಳಿ ಬಿತ್ತನೆ ಮಾಡುತ್ತೇನೆ. ಆದರೆ ಕೆಲವು ವರ್ಷಗಳಲ್ಲಿ ಈ ಬೆಳೆಗೆ ಯೋಗ್ಯ ಬೆಲೆ ಸಿಗದೆ ಜಮೀನಿನಲ್ಲಿ ರೋಟರ್‌ ಹೊಡೆದು ಗೊಬ್ಬರ ಮಾಡಿ ಸಾಕಷ್ಟು ನಷ್ಟವಾಗಿತ್ತು. ಆದರೆ ಈ ವರ್ಷ ಬರಗಾಲದ ಮಧ್ಯೆ ಉತ್ತಮ ಇಳುವರಿ ಬಂದಿದ್ದು, ಸಂತೋಷ ತಂದಿದೆ.

ಜ್ಞಾನೇಶ ಮನನೇಕೊಪ್ಪ ರೈತ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳನ್ನು ಲವ್‌ ಮಾಡಿದ್ದಕ್ಕೆ ಕೆಲಸಗಾರನ ಹತ್ಯೆ
ಡೇಟಿಂಗ್‌ ಆ್ಯಪಲ್ಲಿ ಪರಿಚಯವಾದಯುವಕನ ದರೋಡೆ: ನಾಲ್ವರ ಸೆರೆ