ಕನ್ನಡಪ್ರಭ ವಾರ್ತೆ, ಕಡೂರು ಸಾಲಬಾಧೆ ತಾಳಲಾರದೆ ರೈತ ಮಹಿಳೆ ಒಬ್ಬರು ಆತ್ಹಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ತಾಲೂಕಿನ ಎಮ್ಮೆ ದೊಡ್ಡಿಯ ರಂಗೇನಹಳ್ಳಿಯಲ್ಲಿ ನಡೆದಿದೆ. ಮೃತ ಮಹಿಳೆ ಹನುಮಮ್ಮ (75) ತನ್ನ ಕೊನೆಯ ಮಗ ಸೋಮಣ್ಣ ರವರೊಂದಿಗೆ ಕೃಷಿ ಕೆಲಸ ಮಾಡಿಕೊಂಡು ವಾಸವಾಗಿದ್ದರು. ಹನುಮಮ್ಮನವರ ಹೆಸರಿನಲ್ಲಿ ಎಮ್ಮೆದೊಡ್ಡಿ ಗ್ರಾಮದ ಸರ್ವೆ ನಂಬರ್ 70 ರಲ್ಲಿ 3 ಎಕರೆ 37 ಗುಂಟೆ ಜಮೀನಿದೆ. ಸದರಿ ಜಮೀನಿನಲ್ಲಿ ಜೋಳ, ರಾಗಿ, ಸೂರ್ಯಕಾಂತಿ, ಎಳ್ಳು ಬೆಳೆ ಬೆಳೆಯಲು ಮತ್ತು ಜಮೀನು ಅಭಿವೃದ್ಧಿಗಾಗಿ ಎಮ್ಮೆದೊಡ್ಡಿ ವ್ಯಾಪ್ತಿಯ ಕೆನರಾ ಬ್ಯಾಂಕಿನಲ್ಲಿ 6 ಲಕ್ಷ ರು. ಸಾಲ ಪಡೆದುಕೊಂಡಿದ್ದರು. ಜಮೀನಿನಲ್ಲಿ ಸರಿಯಾಗಿ ಬೆಳೆ ಬಾರದೆ ಮಾಡಿದ ಸಾಲವನ್ನು ತೀರಿಸಲು ಆಗದೆ, ಮನನೊಂದ ತಮ್ಮ ತಾಯಿ ಹನುಮಮ್ಮ ಗ್ರಾಮದ ಪಕ್ಕದ ಕೆರೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾ ರೆಂದು ಮಗ ದೂರು ಪೊಲೀಸರಿಗೆ ನೀಡಿದ್ದಾರೆ. ದೂರಿನ ಅನ್ವಯ ಕಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತಿದ್ದಾರೆ. -- ಬಾಕ್ಸ್-- ಮಹಿಳೆ ಆತ್ಮಹತ್ಯೆ ಕಡೂರು: ಸಾಲದ ಹಣವನ್ನು ವಾಪಸ್ ಕೇಳುವ ಜೊತೆ ಅವಮಾನಿಸಿದ್ದರಿಂದ ನಮ್ಮ ತಾಯಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆಂದು ಕಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಲೂಕಿನ ತಂಗಲಿ ಗ್ರಾಮದ ದೇವೀರಮ್ಮ (65)ಆತ್ಮ ಹತ್ಯೆಗೆ ಶರಣಾದ ಮಹಿಳೆ. ಮೃತರ ಪುತ್ರ ರಾಘವೇಂದ್ರ ಎಂಬುವರು ಈ ಸಂಬಂಧ ದೂರು ನೀಡಿದ್ದಾರೆ. ನಮ್ಮ ತಾಯಿ ದೇವೀರಮ್ಮಗ್ರಾಮೀಣ ಕೂಟದಲ್ಲಿ ತನ್ನ ಮಗಳು ಮತ್ತು ಅಳಿಯನಿಗೆ 2 ಕಂತುಗಳಲ್ಲಿ 78,000 ಸಾವಿರ ರು.ಗಳನ್ನು ಸಾಲ ಕೊಡಿಸಿದ್ದರು. ಅದನ್ನು ಕೇಳಲು ಉಷಾ, ರುಬೀನಾ ಹಾಗು ಶಂಕರನಾಯ್ಕ ಎಂಬುವರು ತಂಗಲಿ ಗ್ರಾಮದ ನಮ್ಮ ಮನೆಯ ಮುಂದೆ ಬಂದು ಸಾರ್ವಜನಿಕರ ಎದುರಿಗೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿ ನಿಮ್ಮಂತವರಿಗೆ ಸಾಲ ಕೊಡಬಾರದೆಂದು ಹಳಿದಿದ್ದಾರೆ. ಇದರಿಂದ ತೀವ್ರವಾಗಿ ನೊಂದ ನಮ್ಮ ತಾಯಿ ಮನೆಯ ರೂಮ್ ನಲ್ಲಿ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಗ್ರಾಮೀಣ ಕೂಟದ ಮೇಲ್ವಿಚಾರಕರ ಮತ್ತು ಸಿಬ್ಬಂದಿ ನಿರ್ದೇಶನದಂತೆ ಅವಮಾನಿಸಿದ್ದರಿಂದಲೆ ನಮ್ಮ ತಾಯಿ ಅತ್ಮಹತ್ಯೆ ಮಾಡಿಕೊಂಡಿದ್ದು ಇದಕ್ಕೆ ಕಾರಣರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದಾರೆ. ಪೋಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.