ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ರೈತರು ಕೃಷಿಯಲ್ಲಿ ನ್ಯಾನೋ ಟೆಕ್ನಾಲಾಜಿ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಜೊಲ್ಲೆ ಗ್ರುಪ್ ಸಂಸ್ಥಾಪಕ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಸೋಮವಾರ ಆಯೋಜಿಸಲಾದ ಶ್ರೀ ಬೀರೇಶ್ವರ ಕೊ ಆಫ್ ಕ್ರೆಡಿಟ್ ಸೊಸೈಟಿ 34ನೇ ವಾರ್ಷಿಕ ಸರ್ವ ಸಾಧಾರಣಾ ಸಭೆ ಹಾಗೂ ಜೊಲ್ಲೆ ಗ್ರುಪ್‌ನ ಅಂಗ ಸಂಸ್ಥೆಗಳ ವಾರ್ಷಿಕ ಸರ್ವ ಸಾಧಾರಣಾ ಸಭೆಯಲ್ಲಿ ಮಾತನಾಡಿದ ಅವರು, ಹಳ್ಳಿಯಿಂದ ದಿಲ್ಲಿಯವರಿಗೆ ಜೊಲ್ಲೆ ಗ್ರುಪ್ ಬೆಳೆಸುವ ಗುರಿ ನಮ್ಮದಾಗಿದೆ. ಮುಂಬರುವ ದಿನಗಳಲ್ಲಿ ಶೈಕ್ಷಣಿಕ ವ್ಯವಸ್ಥೆಯನ್ನು ದೊಡ್ಡ ಮಟ್ಟದಲ್ಲಿ ಸ್ಥಾಪಿಸಿ ಗಡಿ ಭಾಗದ ಮಕ್ಕಳಿಗೆ ಶಿಕ್ಷಣ ಕೊಡುವ ಸಂಕಲ್ಪದ ಜೊತೆಗೆ ವೈದ್ಯಕೀಯ ಸೇವೆ ನೀಡುವ ಜೊಲ್ಲೆ ಗ್ರುಪ್ ಗುರಿ ಹೊಂದಿದೆ ಎಂದು ತಿಳಿಸಿದರು.ಜೊಲ್ಲೆ ಗ್ರುಪ್‌ದ ಶ್ರೀ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿಯು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದಲ್ಲಿ ಒಟ್ಟು 211 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ರಾಷ್ಟ್ರಿಕೃತ ಬ್ಯಾಂಕುಗಳ ಹಾಗೆ ಬೀರೇಶ್ವರ ಸೊಸೈಟಿ ಹೆಮ್ಮರವಾಗಿ ಬೆಳವಣಿಕೆ ಕಾಣುತ್ತಿದೆ ಎಂದರು.ಜೊಲ್ಲೆ ಗ್ರುಪ್ ಅಂಗಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಯರಿಗೆ ಸೇವಾ ಆಧಾರಾದ ಮೇಲೆ ಪಿಂಚಣಿ ಯೋಜನೆ ಜಾರಿ ಮಾಡಲಾಗಿದೆ. ನಮ್ಮ ಸಂಸ್ಥೆಯಲ್ಲಿ ಮಾಡಿದ ಪಿಂಚಣಿ ವ್ಯವಸ್ಥೆಯನ್ನು ನೋಡಿದ ರಾಜ್ಯದ ಅನೇಕ ಕಡೆಗಳಲ್ಲಿ ಪಿಂಚಣಿ ವ್ಯವಸ್ಥೆ ಜಾರಿಯಾಗುತ್ತಿದೆ. ಜನರ ವಿಶ್ವಾಸ, ಗುಣಮಟ್ಟದ ಸೇವೆ ಕಾಪಾಡಿಕೊಂಡು ಹೋದರೆ ಸಂಸ್ಥೆಗಳು ಪ್ರಗತಿ ಕಾಣುತ್ತದೆ ಎಂದರು.ಸಹಸಂಸ್ಥಾಪಕಿ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ದೇಶಾದ್ಯಂತ ನಮ್ಮ ಸಂಸ್ಥೆ ಹೆಸರುವಾಸಿಯಾಗಿದೆ. ಇದಕ್ಕೆ ನಮ್ಮ ಸಂಸ್ಥೆಗಳ ಸಲಹಾ ಸಮಿತಿ ಮತ್ತು ಸಿಬ್ಬಂದಿಯರ ಪ್ರಾಮಾಣಿಕ ಸೇವೆಯೆ ಕಾರಣ. ಅವರೆಲ್ಲರಿಗೂ ನಾನು ಚಿರಋಣಿ. ಚುನಾವಣೆಯಲ್ಲಿ ನಾವು ಸೋತಿರಬಹುದು. ಆದರೆ, ಸಹಕಾರಿ ಮೂಲಕ ಸಾಮಾಜಿಕ ಸೇವೆ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದರು.ಬೆಂಗಳೂರು ಕೆಒಎಫ್ ಉಪಾಧ್ಯಕ್ಷ ಮಹಾಂತೇಶ ಪಾಟೀಲ, ಶಿವಗೌಂಡ ಪಾಟೀಲ, ರಾಜಣ್ಣ, ಬಿ.ಟಿ.ಬೆನಕಟ್ಟಿ, ಬಸವರಾಜ ತೇಲಿ, ಸುರೇಶ ರೆಡ್ಡಿ, ಮಲಗೊಂಡ ಪಾಟೀಲ, ಆರತಿ ಪೋತದಾರ, ನೇಮಿನಾಥ ಪಟ್ಟಣಕುಡೆ, ಸದಾಶಿವ ಕೋಕನೆ, ಚಂದ್ರಕಾಂತ ಖೋತ, ಮಹೇಶ ಭಾತೆ, ಬಾಬುರಾವ ಮಾಳಿ, ರವಿ ಕುದುರೆ, ಚಂದ್ರಶೇಖರ ಪಾಟೀಲ, ಶಿವು ಹಾಲಪ್ಪನವರ, ಬೀರೇಶ್ವರ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಜಯಾನಂದ ಜಾಧವ, ಉಪಾಧ್ಯಕ್ಷ ಸಿದ್ರಾಮ ಗಡದೆ, ನಿರ್ದೇಶಕ ಅಪ್ಪಾಸಾಹೇಬ ಜೊಲ್ಲೆ, ಪವನ ಪಾಟೀಲ, ಸಿದವೀರ ಖಜ್ಜನ್ನವರ, ಸುಭಾಷ ಕದಮ, ಅನ್ವರ ದಾಡಿವಾಲೆ, ಪ್ರಧಾನ ವ್ಯವಸ್ಥಾಪಕ ರವಿಂದ್ರ ಚೌಗಲಾ, ಉಪಪ್ರಧಾನ ವ್ಯವಸ್ಥಾಪಕ ಮಹಾದೇವ ಮಂಗಾವತೆ, ಸುರೇಶ ಮಾನೆ ಸೇರಿದಂತೆ ನಿರ್ದೇಶಕರು, ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.ಜೊಲ್ಲೆ ಗ್ರುಪ್‌ನ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿದರು. ರಮೇಶ ಪಾಟೀಲ ನಿರೂಪಿಸಿದರು.
ಶಾಖೆಗಳಿಗೆ ಪ್ರಶಸ್ತಿ, ನಗದು ಬಹುಮಾನ ವಿತರಣೆ: ಅತ್ಯುತ್ತಮ ಶಾಖೆಗಳಲ್ಲಿ ನಗರ ಪ್ರದೇಶದಲ್ಲಿ ಪ್ರಥಮವಾಗಿ ನಿಪ್ಪಾಣಿ, 2ನೇ ಸ್ಥಾನ ಗದಗ, 3ನೇ ಸ್ಥಾನ ಬೈಲಹೊಂಗಲ. ಗ್ರಾಮೀಣ ವಿಭಾಗದಲ್ಲಿ ಪ್ರಥಮ ಸ್ಥಾನ ಪರಮಾನಂದವಾಡಿ, 2ನೇ ಸ್ಥಾನ ತೆಲಸಂಗ. 3ನೇ ಸ್ಥಾನ ಹಿರೇಕೊಡಿ ಶಾಖೆಗಳ ಸಿಬ್ಬಂದಿಯರಿಗೆ ಪ್ರಶಸ್ತಿ ಹಾಗೂ ನಗದು ಬಹುಮಾನವನ್ನು ನೀಡಲಾಯಿತು. ಅಪಘಾತದಲ್ಲಿ ಮೃತರಾದ ಸಹಕಾರಿ ಸಂಘದ ಸದಸ್ಯರ ಮತ್ತು ಸಿಬ್ಬಂದಿಗಳ ಸಂಬಂಧಿಕರಿಗೆ ವಿಮಾ ಚೆಕ್ ನೀಡಿದರು.ಸದ್ಯ ಕರ್ನಾಟಕದಲ್ಲಿ 166, ಮಹಾರಾಷ್ಟ್ರ ರಾಜ್ಯದಲ್ಲಿ 43 ಮತ್ತು ಗೋವಾ ರಾಜ್ಯದಲ್ಲಿ 2 ಶಾಖೆಗಳನ್ನು ಸ್ಥಾಪನೆ ಮಾಡಲಾಗಿದೆ. ಸಹಕಾರಿಯು 3.78 ಲಕ್ಷ ಸದಸ್ಯರನ್ನು ಹೊಂದಿದೆ. ₹3,820 ಕೋಟಿಗಳ ಠೇವಣಿ, ₹2887 ಕೋಟಿಗಳ ಸಾಲ ವಿತರಣೆಯೊಂದಿಗೆ ಸಂಸ್ಥೆ ₹40.55 ಕೋಟಿಗಳ ನಿವ್ವಳ ಲಾಭ ಗಳಿಸಿದೆ.-ಅಣ್ಣಾಸಾಹೇಬ ಜೊಲ್ಲೆ,
ಜೊಲ್ಲೆ ಗ್ರುಪ್ ಸಂಸ್ಥಾಪಕ ಹಾಗೂ ಮಾಜಿ ಸಂಸದ.