ಧಾರವಾಡ: ಇಲ್ಲಿನ ಕೃಷಿಮೇಳದಲ್ಲಿ ಅರೇಕುರಹಟ್ಟಿಯ ಶ್ರೀನಿವಾಸ್ ಜನರಲ್ ಎಂಜಿನಿಯರಿಂಗ್ ವರ್ಕ್ಸ್‌ನವರು ಅಭಿವೃದ್ಧಿಪಡಿಸಿದ ಬಹುಪಯೋಗಿ ಎಡೆ ಹೊಡೆಯುವ ಯಂತ್ರ ಕೃಷಿಕರ ಗಮನ ಸೆಳೆಯುತ್ತಿದೆ.
ಸಾಮಾನ್ಯವಾಗಿ ರೈತರು ಎತ್ತುಗಳಿಂದ ಒಂದು ದಿನಕ್ಕೆ 2ರಿಂದ 3 ಎಕರೆ ಎಡೆ ಹೊಡೆಯುತ್ತಾರೆ. ಆದರೆ ಶ್ರೀನಿವಾಸ್ ಜನರಲ್ ಎಂಜಿನಿಯರಿಂಗ್ ವರ್ಕ್ಸ್‌ನವರು ಅಭಿವೃದ್ಧಿಪಡಿಸಿದ ಈ ಯಂತ್ರದಿಂದ ಕೇವಲ ಒಂದೇ ಗಂಟೆಯಲ್ಲಿ 6 ಎಕರೆ ಜಮೀನನ್ನು ಎಡೆ ಹೊಡೆಯಬಹುದು. ಅಲ್ಲದೇ ಇದೇ ಅವಧಿಯಲ್ಲಿ ಗೊಬ್ಬರ, ಔಷಧಿಯನ್ನು ಸಿಂಪಡಿಸಬಹುದು.
ದಿಂಡಿನ ಕುಂಟೆಆಳವಾದ ಉಳುಮೆಗೆ ಸುಧಾರಿಸಿದ ದಿಂಡಿನ ಕುಂಟೆಯನ್ನು ಇವರು ಅಭಿವೃದ್ಧಿಪಡಿಸಿದ್ದಾರೆ. ಮೊದಲು ಈ ಯಂತ್ರ 7 ಅಡಿ ಉದ್ದವಿತ್ತು. ಇದೀಗ ಈ ಯಂತ್ರವನ್ನು 13 ಅಡಿಗೆ ವಿಸ್ತರಿಸಲಾಗಿದೆ. ಇದರಿಂದ ಮತ್ತಷ್ಟು ವೇಗವಾಗಿ ಕೃಷಿ ಕೆಲಸವನ್ನು ಮಾಡಬಹುದು. ಜತೆಗೆ ಗಿಡ- ಮರಗಳು ಇದ್ದಲ್ಲಿ ಯಂತ್ರವನ್ನು ಮಡಚಲು ಅನುಕೂಲವಾಗುವಂತೆ ತಯಾರಿಸಲಾಗಿದೆ. ಇದೇ ರೀತಿ ಹತ್ತಾರು ರೈತಸ್ನೇಹಿ ಉಪಕರಣಗಳನ್ನು ತಯಾರಿಸಿದ್ದೇವೆ. ಉತ್ತಮ ಗುಣಮಟ್ಟ ಇರುವುದರಿಂದ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎನ್ನುತ್ತಾರೆ ಮಾಲೀಕರಾದ ಧರ್ಮಾರೆಡ್ಡಿ ಲಕ್ಕಣ್ಣವರ (ಮೊ. 9880197889, 9110657545). ಇವರು ತಯಾರಿಸುವ ಉಪಕರಣಗಳ ಗುಣಮಟ್ಟಕ್ಕೆ ಐಎಸ್‌ಒ 9001 ಸಂಸ್ಥೆ ದೃಢೀಕೃತ ಪ್ರಮಾಣಪತ್ರವೂ ದೊರೆತಿದೆ.ಹೆಚ್ಚಿದ ಬೇಡಿಕೆ
ಧರ್ಮಾರೆಡ್ಡಿ ಲಕ್ಕಣ್ಣವರ, ಶ್ರೀನಿವಾಸ ಜನರಲ್ ಎಂಜಿನಿಯರಿಂಗ್ ವರ್ಕ್ಸ್ ಅರೇಕುರಹಟ್ಟಿ