ಬಸವತತ್ವ ಅಪ್ಪಿಕೊಂಡರೆ ಭಾರತ ವಿಶ್ವಗುರುವಾದಂತೆ

KannadaprabhaNewsNetwork |  
Published : Sep 23, 2024, 01:17 AM IST
ಗ್ರಂಥ ಲೋಕಾರ್ಪಣೆ | Kannada Prabha

ಸಾರಾಂಶ

ಬಸವತತ್ವ ಒಪ್ಪಿರುವ ಎಲ್ಲರೂ ಲಿಂಗಾಯತರಾಗಿದ್ದು, ಬಸವಣ್ಣನವರ ವಚನಗಳನ್ನು ಹಾಗೂ ನೀತಿಗಳನ್ನು ದೇಶ-ವಿದೇಶಗಳು ಅಳವಡಿಸಿಕೊಂಡರೆ ಭಾರತ ವಿಶ್ವಗುರುವಾದಂತೆ ಎಂದು ಶರಣ ಸಾಹಿತಿ, ಪ್ರೊ.ಸಿದ್ದಣ್ಣ ಲಂಗೋಟಿ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಬಸವತತ್ವ ಒಪ್ಪಿರುವ ಎಲ್ಲರೂ ಲಿಂಗಾಯತರಾಗಿದ್ದು, ಬಸವಣ್ಣನವರ ವಚನಗಳನ್ನು ಹಾಗೂ ನೀತಿಗಳನ್ನು ದೇಶ-ವಿದೇಶಗಳು ಅಳವಡಿಸಿಕೊಂಡರೆ ಭಾರತ ವಿಶ್ವಗುರುವಾದಂತೆ ಎಂದು ಶರಣ ಸಾಹಿತಿ, ಪ್ರೊ.ಸಿದ್ದಣ್ಣ ಲಂಗೋಟಿ ಹೇಳಿದರು.

ಶನಿವಾರ ಸಂಜೆ ಪಟ್ಟಣ ಮಹಾಂತೇಶ ನಗರದ ಮಹಾಂತ ಭವನದಲ್ಲಿ ನಡೆದ ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಲಿಂಗಾಯತ ದರ್ಶನ ವಚನಾನುಭವ ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಉದಯವಾಗಿರುವ ೫ ಧರ್ಮಗಳಲ್ಲಿ ಒಂದು ಅದು ಕರ್ನಾಟಕದಲ್ಲಿ ಉಗಮವಾಗಿರುವ ಲಿಂಗಾಯತ ಧರ್ಮ ಬಲಿಷ್ಠವಾಗಲು ಲಿಂಗಾಯತರೆಲ್ಲ ಒಗ್ಗಾಟ್ಟಾಗಿರಬೇಕು ಎಂದರು.ಲಿಂಗಾಯತ ಧರ್ಮ ಕನ್ನಡದ ಧರ್ಮವಾಗಿದೆ ಪ್ರತಿಯೊಬ್ಬರಿಗೆ ತಿಳಿಯುವ ಭಾಷೆ ಕನ್ನಡದಲ್ಲಿ ವಚನ ಸಾಹಿತ್ಯ ಇದ್ದು ಪ್ರತಿ ಮನೆ ಮನೆಗೆ ಮುಟ್ಟಿಸುವ ಕಾರ್ಯ ನಡೆಯಬೇಕಾಗಿದೆ ಪ್ರತಿಯೊಬ್ಬರು ವಿಶ್ವಗುರು ಬಸವಣ್ಣನವರ ತಿಳಿಸಿದ ಮಾರ್ಗದಲ್ಲಿ ನಡೆಯಬೇಕು ಪ್ರತಿಯೊಬ್ಬರು ಬಸವ ಧರ್ಮವನ್ನು ಪಾಲಿಸಬೇಕು ವಿನಃ ಮತ್ತೊಬ್ಬರನ್ನು ನಿಂಧಿಸುವ ಕೆಲಸ ಮಾಡಬಾರದು ಎಂದು ಕಿವಿಮಾತು ಹೇಳಿದರು.ಲಿಂಗಾಯತ ದರ್ಶನ ವಚನಾನುಭವ ಗ್ರಂಥ ಲೋಕಾರ್ಪಣೆ ಮಾಡಿರುವ ಹಿರಿಯ ವೈದ್ಯ ವೈ.ಬಿ. ಕುಲಗೋಡ ಮಾತನಾಡಿ, ಈ ಗ್ರಂಥದಲ್ಲಿ ೫೨ ವಚನಗಳ ವಿವಿರಣೆ ಇದ್ದು, ಪ್ರತಿ ವಾರಕ್ಕೊಂದು ವಚನ ವಿಶ್ಲೇಷಣೆ ಮಾಡುವ ಮೂಲಕ ವರ್ಷ ಪೂರ್ತಿ ಮನೆಯಲ್ಲಿ ಮಹಾಮನೆ ಕಾರ್ಯಕ್ರಮಕ್ಕೆ ಉತ್ತಮ ವಚನ ಸಾಹಿತ್ಯವಾಗಿದೆ. ಜೊತೆಗೆ ಇಷ್ಟಲಿಂಗಪೂಜಾ ವಿಧಾನ, ಲಿಂಗಾಯತ ಧರ್ಮ ತತ್ವಗಳು, ಶ್ರೀಗುರುಬಸವ ಪ್ರಾರ್ಥನೆ ಹಾಗೂ ಬಸವಭಕ್ತಿ ಗೀತೆಗಳ ಸಂಗ್ರವಿದೆ ಪ್ರತಿಯೊಬ್ಬರು ಈ ಪುಸ್ತಕದ ಪ್ರಯೋಜನ ಪಡೆದುಕೊಂಡು ಬಸವ ತತ್ವ ಅನುಸರಿಸಬೇಕು ಎಂದು ತಿಳಿಸಿದರು.ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ನೂತನ ಅಧ್ಯಕ್ಷ ಜಿ.ವಿ.ನಾಡಗೌಡ್ರ ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ಲಿಂಗಾಯತ ಸಮಾಜದ ಸಂಘಟನೆ ಮತ್ತು ಬಸವತತ್ವ ಅನುಷ್ಠಾನಕ್ಕೆ ಶ್ರಮಿಸುವುದಾಗಿ ಭರವಸೆ ನೀಡಿದರು.ಲಿಂಗಾಯತ ದರ್ಶನ ವಚನಾನುಭವ ಗ್ರಂಥ ದಾಸೋಹಿಗಳಾದ ಶರಣ ಗಂಗಾಧರ ಜಿ.ಮಾಳವಾಡ ಅವರನ್ನು ಸನ್ಮಾನಿಸಲಾಯಿತು. ಸಮಾಜದ ನಿಕಟಪೂರ್ವ ಅಧ್ಯಕ್ಷ ಮಹೇಶ ಕಲ್ಯಾಣಿ, ಮಹಾಂತೇಶ ನಗರ ನಿವಾಸಿಗಳ ಸಂಘದ ಅಧ್ಯಕ್ಷ ಮಹಾದೇವಪ್ಪ ಬಿ.ಕಲಹಾಳ, ಹಿರಯರಾದ ಪ್ರೊ.ಎಸ್.ಜಿ. ಚಿಕ್ಕನರಗುಂದ, ಪ್ರೊ.ಎಸ್.ಎಸ್. ಸುಲ್ತಾನಪೂರ, ಎಸ್.ಎಸ್.ಧಡೇದ ಇದ್ದರು.ಪ್ರಧಾನ ಕಾರ್ಯದರ್ಶಿ ಪ್ರೊ.ಎಸ್.ಎಂ.ಸಕ್ರಿ ಸ್ವಾಗತಿಸಿದರು. ಬಸವರಾಜ ಕೋನನ್ನವರ ನಿರೂಪಿಸಿದರು. ಸಹಕಾರ್ಯದರ್ಶಿ ಈರಣ್ಣ ಬುಡ್ಡಾಗೋಳ ಶರಣು ಸಮರ್ಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!