ತಾಲೂಕಿನ ಕನಕಗಿರಿ, ನವಲಿ, ಹುಲಿಹೈದರ ಹೋಬಳಿಗಳಲ್ಲಿ ಬೀಜೋತ್ಪಾದನೆ ಸಲುವಾಗಿ ಬೆಳೆದ ಕಲ್ಲಂಗಡಿ ಬೆಲೆ ತೀರಾ ಕುಸಿದೆ
ಕನಕಗಿರಿ: ಐದು ಎಕರೆಯಲ್ಲಿ ಬೆಳೆದ ಕಲ್ಲಂಗಡಿಗೆ ಬೆಲೆ ಸಿಗದೆ ರೈತ ಕಂಗಾಲಾಗಿದ್ದು, ಕಲ್ಲಂಗಡಿ ಹಣ್ಣು ತೋಟದಲ್ಲೇ ಕೊಳೆಯುತ್ತಿವೆ.
ಹೌದು, ತಾಲೂಕಿನ ನಿರ್ಲ್ಯೂಟಿ ಸೀಮಾ ವ್ಯಾಪ್ತಿಯ ಐದು ಎಕರೆ ಪ್ರದೇಶದಲ್ಲಿ ಭೂಮಿ ಗುತ್ತಿಗೆ ಪಡೆದ ಜೀ. ಸತ್ಯನಾರಾಯಣ ರೆಡ್ಡಿ ಎನ್ನುವ ರೈತ ಲಕ್ಷಾಂತರ ಖರ್ಚು ಮಾಡಿ ಕಲ್ಲಂಗಡಿ ಬೆಳೆ ಬೆಳೆದಿದ್ದಾರೆ. ಆದರೆ, ಈಗ ಮಾರುಕಟ್ಟೆಯಲ್ಲಿ ಕಲ್ಲಂಗಡಿಗೆ ಬೆಲೆ ಸಿಗುತ್ತಿಲ್ಲ. ಬೆಲೆ ಇಲ್ಲದ್ದರಿಂದ ಹಣ್ಣುಗಳು ತೋಟದಲ್ಲೇ ಕೊಳೆಯುತ್ತಿದ್ದು, ಇದನ್ನು ನೋಡಿದ ರೈತ ನಿತ್ಯ ಕಣ್ಣೀರು ಹಾಕುತ್ತಿದ್ದಾನೆ.
ತಾಲೂಕಿನ ಕನಕಗಿರಿ, ನವಲಿ ಹಾಗೂ ಹುಲಿಹೈದರ ಹೋಬಳಿಗಳಲ್ಲಿ ಬೀಜೋತ್ಪಾದನೆ (ಸಿಡ್ಸ್ ) ಸಲುವಾಗಿ ಬೆಳೆದ ಕಲ್ಲಂಗಡಿ ಬೆಲೆ ತೀರಾ ಕುಸಿದಿದ್ದು, ಇದರಿಂದ ರೈತನಿಗೆ ಐದಾರು ಲಕ್ಷ ನಷ್ಟವಾಗಿದೆ ಎನ್ನಲಾಗಿದೆ.
ಯಾವ ಬೆಳೆಯಾಗಲಿ ಹೆಚ್ಚು ಬೆಳೆಯಬಾರದು. ರೈತ ಎಷ್ಟು ಕಡಿಮೆ ಬೆಳೆಯುತ್ತಾನೆ ಅಷ್ಟು ಒಳ್ಳೆಯದು. ಕಡಿಮೆ ಬೆಳೆಯುವುದರಿಂದ ರೈತನಿಗೆ ನೆಮ್ಮದಿ. ಲಕ್ಷಾಂತರ ನಷ್ಟವಾಗುವುದಿಲ್ಲ. ಹೆಚ್ಚು ಕಲ್ಲಂಗಡಿ ಬೆಳೆದಿದ್ದರಿಂದ ನನಗೆ ನಷ್ಟವಾಗಿದೆ. ಸರ್ಕಾರ ಪರಿಹಾರ ನೀಡಬೇಕು ಎಂದು ರೈತ ಸತ್ಯನಾರಾಯಣ ರೆಡ್ಡಿ ಹೇಳಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.