ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ಹಾಗೂ ಹಿರಿಯ ಹೋರಾಟಗಾರ ಕೆ.ಎಸ್ ನಂಜುಂಡೇಗೌಡ ನೇತೃತ್ವದಲ್ಲಿ ರೈತ ಸದಸ್ಯರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ತಹಸೀಲ್ದಾರ್ ಅವರನ್ನು ತರಾಟೆ ತೆಗೆದುಕೊಂಡರು.
ಕಳೆದ ಮೂರ್‍ನಾಲ್ಕು ತಿಂಗಳಿಂದಲೂ ಪಹಣಿ ಹಾಗೂ ಎಂಆರ್ ಕಾಫಿ ಪಡೆಯಲು ರೈತರು ಹಾಗೂ ಸಾರ್ವಜನಿಕರು ಕಚೇರಿ ಮುಂದೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಚೇರಿಗೆ ಬರುವ ರೈತರಲ್ಲದೆ ಇತರ ಸಾರ್ವಜನಿಕರಿಗೆ ಬೇಕಾಗಿದ್ದ ಪಹಣಿ ನೀಡಲು ಕಚೇರಿಯಲ್ಲಿ ಬಿಳಿ ಪೇಪರ್ ಹಾಗೂ ಇತರೆ ಸ್ಟೇಷನರಿ ವಸ್ತುಗಳಿಲ್ಲದೆ ಪಹಣಿ ನೀಡುವ ಸ್ಥಳವನ್ನು ಬಂದ್ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪಹಣಿಗಾಗಿ ಕಚೇರಿಗೆ ಅಲೆದು ರೈತರು ಹಿಂದಿರುಗಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಪಹಣಿ ಪತ್ರ ಸೇರಿದಂತೆ ಇತರ ದಾಖಲೆಗಳನ್ನು ರೈತರಿಗೆ ನೀಡಬೇಕು ಎಂದು ತಹಸೀಲ್ದಾರ್ ಚೇತನಾ ಅವರಿಗೆ ಮನವಿ ಮಾಡಿದರು.
ಈ ವೇಳೆ ಸಮಿತಿ ಸದಸ್ಯರಾದ ಹುಂಡವಾಡಿ ಮಹದೇವು, ಶಿವಣ್ಣ, ಮೇಳಾಪುರ ಜಯರಾಮ್, ಮಹದೇವಪುರ ಕೃಷ್ಣ, ಶ್ರೀನಿವಾಸ್ ಸೇರಿದಂತೆ ಇತರ ಸದಸ್ಯರು ಇದ್ದರು.