ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ಸರ್ಕಾರ ರಾಜ್ಯಾದ್ಯಂತ ಪೌತಿ ಖಾತೆ ಆಂದೋಲನ ಆರಂಭಿಸಿದ್ದರೂ ತಾಲೂಕಿನಲ್ಲಿ ಅದು ನಿರೀಕ್ಷಿತ ಗುರಿ ಮುಟ್ಟಿಲ್ಲ. ಪೌತಿ ಖಾತೆ, ಆರ್.ಟಿ.ಸಿ ತಿದ್ದುಪಡಿಗೂ ರೈತರು ಲಂಚ ಕೊಡಬೇಕಾಗಿದೆ. ಸರ್ಕಾರ ಲಂಚ ಕೇಳುವ ನೌಕರರ ವಿರುದ್ಧ ದೂರು ನೀಡಿದರೂ ಯಾವುದೇ ಕ್ರಮ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಶೀಳನೆರೆ ಹೋಬಳಿಯಲ್ಲಿ ಪೌತಿ ಖಾತೆ ಮಾಡುವಾಗ ನೈಜ ಕುಟುಂಬದ ವಾರಸುದಾರರ ಹೆಸರಿಗೆ ಪೌತಿ ಖಾತೆ ಮಾಡದೆ ರೈತ ಕುಟುಂಬಕ್ಕೆ ಸಂಬಂಧವೇ ಇಲ್ಲದ ಮತ್ಯಾರದೋ ಹೆಸರಿಗೆ ಗ್ರಾಮ ಆಡಳಿತಾಧಿಕಾರಿಗಳು ಪೌತಿ ಖಾತೆ ಮಾಡಿದ್ದ ಪ್ರಕರಣವನ್ನು ರೈತಸಂಘ ದಾಖಲೆ ಸಮೇತ ಬೆಳಕಿಗೆ ತಂದರೂ ತಪ್ಪಿತಸ್ಥ ನೌಕರರ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಕಿಡಿಕಾರಿದರು.ಪೌತಿ ಖಾತೆ ಮಾಡಿಸಿಕೊಳ್ಳಲು ರೈತ ಕುಟುಂಬಗಳು ಕಡ್ಡಾಯವಾಗಿ ಗ್ರಾಮ ಆಡಳಿತಾಧಿಕಾರಿಗಳಿಗೆ ಲಂಚ ಕೊಡಬೇಕಿದೆ. ಇಲ್ಲದಿದ್ದರೆ ಉದ್ದೇಶ ಪೂರ್ವಕವಾಗಿ ತಪ್ಪು ಮಾಡಿ ಇದನ್ನು ಸರಿಪಡಿಸಿಕೊಳ್ಳಲು ಎ.ಸಿ ಕೋರ್ಟಿಗೆ ಅಪೀಲು ಹಾಕಿ ಕೊಳ್ಳುವಂತೆ ರೈತರಿಗೆ ಉಚಿತ ಸಲಹೆ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಎಸಿ ಡಾ.ಕೆ.ಆರ್.ಶ್ರೀನಿವಾಸ್ ಅವರು ತಾಲೂಕಿನ ರೈತರ ಸೇವೆಗೆ ಒಂದು ದಿನ ಮೀಸಲಿಡಬೇಕು. ಉದ್ದೇಶ ಪೂರ್ವಕ ತಪ್ಪುಗಳನ್ನು ಎಸಗಿ ಕರ್ತವ್ಯ ಲೋಪ ಮಾಡಿ ರೈತರನ್ನು ಅನಗತ್ಯವಾಗಿ ಎ.ಸಿ.ಕೋರ್ಟಿನ ಮೆಟ್ಟಿಲು ಹತ್ತುವಂತೆ ಮಾಡುವ ಕಂದಾಯ ಇಲಾಖೆ ಸಿಬ್ಬಂದಿ ಮೇಲೂ ಶಿಸ್ತಿನ ಕ್ರಮ ಜರುಗಿಸಿ, ತಪ್ಪಿತಸ್ಥ ನೌಕರರಿಂದಲೇ ವಸೂಲಿ ಮಾಡಿಕೊಡುವಂತೆ ಆಗ್ರಹಿಸಿದರು.