ಕೃಷಿ ಪಧವಿಧರರು ಪ್ರಮುಖ 6 ಬೇಡಿಕೆ ಇಟ್ಟುಕೊಂಡು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕೃಷಿ ಮಹಾವಿದ್ಯಾಲಯ ವಿದ್ಯಾಧಿಕಾರಿ ಮೂಲಕ ರಾಜ್ಯ ಸರ್ಕಾರ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ವಿಜಯಪುರ
ಕೃಷಿ ಪಧವಿಧರರು ಪ್ರಮುಖ 6 ಬೇಡಿಕೆ ಇಟ್ಟುಕೊಂಡು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕೃಷಿ ಮಹಾವಿದ್ಯಾಲಯ ವಿದ್ಯಾಧಿಕಾರಿ ಮೂಲಕ ರಾಜ್ಯ ಸರ್ಕಾರ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಮಾತನಾಡಿ, ಹತ್ತು ವರ್ಷಗಳಿಂದ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈಗ ಅನುಮೊದನೆ ಸಿಕ್ಕಿದ್ದು,
ಈ ನೇಮಕಾತಿ ಹುದ್ದೆಗಳಿಗೆ ಬಿ.ಇ. ಬಯೋಟೆಕ್ನಾಲಜಿ ಪದವಿಧರರಿಗೂ ಅವಕಾಶ ಕಲ್ಪಿಸಿರುವುದು 3-4 ವರ್ಷಗಳ ಕಾಲ ಕೃಷಿ ವಿಶ್ವವಿದ್ಯಾಲಯದಲ್ಲಿ ನಿರಂತರವಾಗಿ ತಜ್ಞ ಹಾಗೂ ಅನುಭವಿ ಪ್ರಾಧ್ಯಾಪಕರಿಂದ ತರಬೇತಿ ಹಾಗೂ ಅಧ್ಯಯನ ಪಡೆದು ಬಂದಿರುವ ಕೃಷಿ ಪದವೀಧರರಿಗೆ ಅನ್ಯಾಯವಾಗುತ್ತಿದೆ.
ರೈತರ ಜಮೀನಿನಲ್ಲಿ ಬರುವ ಸಮಸ್ಯೆಗಳ ಬಗ್ಗೆ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಏನು ಗೊತ್ತಿರಲು ಸಾಧ್ಯ?. ಕೂಡಲೇ ಅವರನ್ನು ಕೈಬಿಡಬೇಕು ಹಾಗೂ ಮತ್ತೊಂದಿಷ್ಟು ಕಾಲಾವಕಾಶ ಮಾಡಿಕೊಡಬೇಕು. ಹಾಗೆಯೇ ಸ್ಪೋರ್ಟ್ಟ್ ಕೋಟಾದಲ್ಲಿ ಕೃಷಿ ಪದವಿಧರರಿಗೂ ಮಿಸಲಾತಿ ನೀಡಬೇಕು. ದೇಶಿ ಕೋರ್ಸ್ ಕೈಬಿಡಬೇಕೆಂದು ಆಗ್ರಹಿಸಿ ನಡೆಸುತ್ತಿರುವ ಹೋರಾಟ ಯಶಸ್ವಿಯಾಗಲಿ. ಮುಂದೆ ನೀವೂ ಕೂಡ ರೈತರ ಸೇವೆ ಯಾವುದೇ ಲಂಚದ ಆಸೆಗೆ ಬೀಳದೆ ಎಲ್ಲ ರೈತರಗೆ ನ್ಯಾಯಯುತ ಕೆಲಸ ಮಾಡಿಕೊಡಿ ರೈತ ಸಂಘ ಯಾವಾಗಲು ನಿಮ್ಮ ಪರವಾಗಿ ನಿಲ್ಲುತ್ತದೆ ಎಂದು ಭರವಸೆ ನೀಡಿದರು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಸಂಗಪ್ಪ ಟಕ್ಕೆ, ಜಿಲ್ಲಾ ಸಂಚಾಲಕ ಮಹಾದೇವ ಬನಸೋಡೆ, ತಾಲೂಕು ಕಾರ್ಯಾಧ್ಯಕ್ಷ ರಾಮಸಿಂಗ ರಜಪೂತ, ತಾಲೂಕು ಉಪಾಧ್ಯಕ್ಷ ಬಸಗೊಂಡ ತೇಲಿ, ಜಂಬಗಿ ಅಧ್ಯಕ್ಷ ಗೋರಕನಾಥ ಗೇರಡೆ, ಸುಭಾಸ ಹಿಟ್ನಳ್ಳಿ, ಶಟ್ಟು ಜಾಧವ, ಪ್ರಕಾಶ ವಂಬಾಸೆ, ಮುದಕಣ್ಣ ಯಂಕಂಚಿ, ರಾಘವೇಂದ್ರ ಗೇರಡೆ, ಮೃತ್ಯುಂಜಯ ನುಚ್ಚಿ, ಬಸವರಾಜ ಉಕ್ಕಲಿ, ಅಂಬಿಕಾ, ಶರಣಬಸು ನಾಯ್ಕಲ, ಈಶ್ವರಿ ಪಾಟೀಲ ಹಾಗೂ ವಿದ್ಯಾರ್ಥಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.