ಕೋಲಾರ: ಮುಂಗಾರು ಕೃಷಿ ಬಿತ್ತನೆಗೆ ಅವಶ್ಯವಿರುವ ಯೂರಿಯಾ ಹಾಗೂ ಡಿಎಪಿಯನ್ನು ಸಮರ್ಪಕವಾಗಿ ಸರಭರಾಜು ಮಾಡಬೇಕೆಂದು ಕೇಂದ್ರ- ರಾಜ್ಯ ಸರ್ಕಾರವನ್ನು ಒತ್ತಾಯಿಸಿ ರೈತ ಸಂಘಟನೆಯಿಂದ ಜಾನುವಾರುಗಳ ಸಮೇತ ರೈಲ್ವೆ ಇಲಾಖೆಯ ಮುಂದೆ ಹೋರಾಟ ಮಾಡಿ ರೈಲ್ವೆ ಅಧಿಕಾರಿಗಳ ಮೂಲಕ ಕೇಂದ್ರ ಕೃಷಿ ಸಚಿವರಿಗೆ ಮನವಿ ಸಲ್ಲಿಸಿದರು.
ಕೃಷಿ ಚಟುವಟಿಕೆಗೆ ಅವಶ್ಯಕತೆ ಇರುವ ರಸಗೊಬ್ಬರ ಕೊಡಿ, ಇಲ್ಲವೇ ರೈತರ ಬಾಯಿಗೆ ಮಣ್ಣು ಹಾಕಿ ಪುಣ್ಯ ಕಟ್ಟಿಕೊಳ್ಳಿ. ಅದನ್ನು ಬಿಟ್ಟು ರೈತರ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಕೈಬಿಟ್ಟು ರೈತರ ಸಮಸ್ಯೆಗೆ ಸ್ಪಂದಿಸಬೇಕೆಂದು ಸರ್ಕಾರಗಳ ವಿರುದ್ಧ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎಂಬ ಗಾದೆಯಂತೆ ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿ ಬಿತ್ತನೆ ಮಾಡಲು ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ಜಾತಕ ಪಕ್ಷಿಗಳಂತೆ ಸರ್ಕಾರಿ ಗೋದಾಮುಗಳ ಬಳಿ ಗಂಟೆಗಟ್ಟಲೇ ಕಾದರೂ ಅವಶ್ಯಕತೆಗೆ ತಕ್ಕಂತೆ ಗೊಬ್ಬರ ಸಿಗುತ್ತಿಲ್ಲ ಎಂದು ಸರ್ಕಾರದ ಬೇಜವಾಬ್ದಾರಿ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರು.
ಮನವಿ ಸ್ವೀಕರಿಸಿ ಮಾತಾನಾಡಿದ ರೈಲ್ವೆ ಅಧಿಕಾರಿಗಳು, ಮನವಿಯನ್ನು ಹಿರಿಯ ಅಧಿಕಾರಿಗಳ ಮುಖಾಂತರ ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು.ಹೋರಾಟದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿ ಗೌಡ, ಮರುಗಲ್ ಶ್ರೀನಿವಾಸ್, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ ಕುವಣ್ಣ, ಸುಪ್ರೀಮ್‌ಚಲ, ರಾಜೇಶ್, ಗಿರೀಶ್, ಯಲ್ಲಣ್ಣ ಅಪ್ಪೋಜಿರಾವ್, ರಾಮಸಾಗರ ವೇಣು, ಬಾಬು ತೇರ್ನಹಳ್ಳಿ, ಆಂಜಿನಪ್ಪ ವಕ್ಕಲೇರಿ, ಹನುಮಯ್ಯ, ಶೈಲಜ, ರತ್ನಮ್ಮ, ಗೌರಮ್ಮ, ವೆಂಕಟಮ್ಮ, ಸುಮಿತ್ರ, ಸೌಭಾಗ್ಯ, ರಾಮಕೃಷ್ಣಪ್ಪ ,ಗಣೇಶ್, ರೆಡ್ಡೆಪ್ಪ, ಕೇಶವ, ಹೆಬ್ಬಣ್ಣಿ ಆನಂದ ರೆಡ್ಡಿ ಇದ್ದರು.