ವಿಶ್ವರೈತ ಚೇತನ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಖಾಯಂ ಆಹ್ವಾನಿತ ಹೆಗ್ಗವಾಡಿಪುರ ಮಹೇಶ್ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ವಿಶ್ವರೈತ ಚೇತನ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಖಾಯಂ ಆಹ್ವಾನಿತ ಹೆಗ್ಗವಾಡಿಪುರ ಮಹೇಶ್ ಆಗ್ರಹಿಸಿದರು.ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ 90ನೇ ವರ್ಷದ ಜನ್ಮದಿನಾಚರಣೆ ಅಂಗವಾಗಿ ತಾಲೂಕಿನ ಹೊಂಡರಬಾಳು ಅಮೃತ ಭೂಮಿಯಲ್ಲಿರುವ ಅವರ ಸ್ಮಾರಕಕ್ಕೆ ಪುಷ್ಷಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿ ಮಾತನಾಡಿದರು. ‘ಪ್ರೋ.ಎಂಡಿಎನ್ ನಮ್ಮನ್ನಗಲಿ 22 ವರ್ಷಗಳಾಗಿವೆ. ಕೇಂದ್ರ, ರಾಜ್ಯ ಸರ್ಕಾರಗಳು ಅವರ ಬಗ್ಗೆ ಕಿಂಚಿತ್ತೂ ಗಮನಹರಿಸದೆ ಇರುವುದು ಈ ದೇಶದ ದುರಂತವಾಗಿದೆ. ಕೂಡಲೇ ಸರ್ಕಾರಗಳು ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಬೇಕು. ಪಠ್ಯಪುಸ್ತಕದಲ್ಲಿ ಅವರ ವಿಚಾರಗಳನ್ನು ಸೇರಿಸಬೇಕು. ಕೃಷಿ ಪ್ರವಾಸೋದ್ಯಮ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎ.ಎಂ.ಮಹೇಶ್ ಪ್ರಭು ಮಾತನಾಡಿ, ‘ಇಂದು ವಿಶ್ವರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 90ನೇ ವರ್ಷದ ಜನ್ಮದಿನಾಚರಣೆಯ ರಾಜ್ಯದ ಎಲ್ಲ ಕಡೆಗಳಲ್ಲೂ ಆಚರಿಸಲಾಗುತ್ತಿದೆ. ಅದೇ ರೀತಿ ಚಾಮರಾಜನಗರ ಜಿಲ್ಲೆಯಲ್ಲೂ ಆಚರಣೆ ಮಾಡಲಾಗುತ್ತದೆ. ಅವರ ನೆನಪಿನ ಈ ದಿನ ಅವರ ಸ್ಮಾರಕಕ್ಕೆ ರೈತರು ರಾಜ್ಯ ಮತ್ತು ಅನೇಕ ಕಡೆಗಳಿಂದ ಆಗಮಿಸಿ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸುತ್ತಿದ್ದಾರೆ. ರೈತ ಹೋರಾಟಕ್ಕೆ ಎಂದೆಂದಿಗೂ ಜಯ ಇರಲಿ. ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರ ಆದರ್ಶಗಳು ಚಿರಾಯವಾಗಲಿ ಎನ್ನುವುದು ಎಲ್ಲರ ಆಶಯವಾಗಿದೆ’ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ವಿಭಾಗೀಯ ಕಾರ್ಯದರ್ಶಿ ಸಿ. ಸಿದ್ದರಾಜು, ಖಜಾಂಚಿ ಬಾಬು, ಅಲೂರು ಜಯಣ್ಣ, ಮಲ್ಲನಗೌಡ, ಬಾಬು, ಭೂಪತಿ ಚಿನ್ನಸ್ವಾಮಿ ಗೌಂಡರ್, ಯಶವಂತ ಇತರರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.