ಸಚಿವ ಸುಧಾಕರ್ ಗೃಹ ಕಚೇರಿಗೆ ರೈತರ ಮುತ್ತಿಗೆ

KannadaprabhaNewsNetwork |  
Published : Apr 27, 2026, 01:15 AM IST
ಸಿಕೆಬಿ-1 ಜಿಲ್ಲೆಯ ಜಂಗಮಕೋಟೆ ಕೈಗಾರಿಕ ವಲಯ ನಿರ್ಮಾಣಕ್ಕೆ ರೈತರ ಕೃಷಿ ಭೂಮಿ ನೀಡುವುದಕ್ಕೆ ವಿರೋಧಿಸಿ ಪ್ರತಿಭಟನಾ ರೈತರು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಸಚಿವ  ಡಾ.ಎಂ ಸಿ ಸುಧಾಕರ್ ಗೃಹ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು | Kannada Prabha

ಸಾರಾಂಶ

ಧರಣಿ ಪ್ರಾರಂಭಿಸಿ 40 ದಿನವಾಗಿದ್ದರೂ ಉಸ್ತುವಾರಿ ಸಚಿವರು ಮಾತ್ರ ಧರಣಿ ನಿತರ ರೈತರನ್ನು ಮಾತನಾಡಿಸಿಲ್ಲ. ಅವರ ಕಷ್ಟ ಸುಖ ಕೇಳಿಲ್ಲ ಎಂದುಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ರೈತರು ಮತ್ತು ರೈತ ಮಹಿಳೆಯರು ತಮ್ಮ ಭೂಮಿಗಾಗಿ ಧರಣಿ ಗೃಹ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

41ನೇ ದಿನಕ್ಕೆ ಕಾಲಿಟ್ಟ ಜಂಗಮಕೋಟೆ ಕೈಗಾರಿಕಾ ವಲಯ ಕೃಷಿ ಭೂಮಿ ಭೂಸ್ವಾಧೀನ ಕೈಬಿಡಲು ಅನಿರ್ದಿಷ್ಟ ಹೋರಾಟ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯ ಜಂಗಮಕೋಟೆ ಕೈಗಾರಿಕಾ ವಲಯ ನಿರ್ಮಾಣಕ್ಕೆ ರೈತರ ಕೃಷಿ ಭೂಮಿ ಬಳಸಬೇಡಿ. ನಮ್ಮ ಭೂಮಿ ನಮ್ಮ ಹಕ್ಕು ಎನೇ ಆದರೂ ಭೂಮಿ ಕೊಡಲ್ಲ ಎಂದು ಜಿಲ್ಲಾಡಳಿತ ಭವನದ ಮುಂದೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತಪರ ಹೋರಾಟಗಾರರ ಅನಿರ್ದಿಷ್ಟ ಹೋರಾಟಕ್ಕೆ 41ನೇ ದಿನಕ್ಕೆ ಕಾಲಿಟ್ಟಿತು.

ಜಿಲ್ಲಾಡಳಿತ ಭವನದ ಮುಂದೆ ಧರಣಿ ನಡೆಸುತಿದ್ದ ರೈತರು ದಿಢೀರನೆ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಗೃಹ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಧರಣಿ ಪ್ರಾರಂಭಿಸಿ 40 ದಿನವಾಗಿದ್ದರೂ ಉಸ್ತುವಾರಿ ಸಚಿವರು ಮಾತ್ರ ಧರಣಿ ನಿತರ ರೈತರನ್ನು ಮಾತನಾಡಿಸಿಲ್ಲ. ಅವರ ಕಷ್ಟ ಸುಖ ಕೇಳಿಲ್ಲ ಎಂದುಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ರೈತರು ಮತ್ತು ರೈತ ಮಹಿಳೆಯರು ತಮ್ಮ ಭೂಮಿಗಾಗಿ ಧರಣಿ ಗೃಹ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಈ ವೇಳೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಸುಮಾರು 40 ದಿನಗಳಿಂದ ಶಿಡ್ಲಘಟ್ಟ ತಾಲೂಕು ಜಂಗಮಕೋಟೆ ಹೋಬಳಿಯ 13 ಹಳ್ಳಿಗಳಲ್ಲಿ 2823 ಎಕರೆ ರೈತರ ಫಲವತ್ತಾದ ಭೂಮಿಯನ್ನು ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ದಲಿತ ಸಂಘರ್ಷ ಸಮಿತಿ, ಕನ್ನಡಪರ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಮಾರ್ಚ್ 16 ರಿಂದ ನಿರಂತರ ಹಗಲೂ- ರಾತ್ರಿ ಅನಿರ್ದಿಷ್ಟಾವಧಿ ಧರಣಿ ಮಾಡುತ್ತಿದ್ದಾರೆ.

ಇದುವರೆಗೂ ಯಾವುದೇ ಜನಪ್ರತಿನಿಧಿಗಳು, ಶಾಸಕರಾಗಲಿ, ಸಚಿವರಾಗಲಿ ರೈತರನ್ನು ಸಂಪರ್ಕ ಮಾಡಲಿಲ್ಲ. ಏ. 06 ರಂದು ರೈತರ ಭೂಮಿಗೆ ಬೆಲೆ ನಿಗದಿ ಮಾಡಲು ನೋಟಿಸ್ ಜಾರಿ ಮಾಡಿರುತ್ತಾರೆ. ಆದ್ದರಿಂದ ರೈತರು ಬೆಳಿಗ್ಗೆ ಹೋರಾಟದ ಜಾಗವಾದ ಜಿಲ್ಲಾಧಿಕಾರಿಗಳ ಕಚೇರಿ ಎದುರು ರಸ್ತೆ ತಡೆಯುವ ಕಾರ್ಯಕ್ರಮವನ್ನು ಹಮ್ಮಿಕೊಂಡು, ರಸ್ತೆ ತಡೆಯನ್ನು ನಡೆಸಿದಾಗ ಜಿಲ್ಲಾಧಿಕಾರಿಗಳು ಆಗಮಿಸಿ ಕೆಐಎಡಿಬಿ ಭೂಮಿ ವಶಪಡಿಸಿಕೊಳ್ಳುವ ಮೊದಲು ರೈತರ ಒಪ್ಪಿಗೆ ಪಡೆದೇ ವಶಪಡಿಸಿಕೊಳ್ಳುತ್ತಾರೆ. ರೈತರ ಒಪ್ಪಿಗೆ ಇಲ್ಲದೇ ಯಾವುದೇ ಭೂಮಿ ವಶಪಡಿಸಿ ಕೊಳ್ಳಲಾಗದು. ಕೆಐಎಡಿಬಿ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ವಿರೋಧಿಸಿ ನ್ಯಾಯಾಲಯದಲ್ಲಿ ದಾವೆ ಇರುವುದರಿಂದ ನ್ಯಾಯಾಲಯದ ತೀರ್ಪಿಗೆ ಕಾಯಬೇಕು ಎಂದು ತಿಳಿಸಿದ್ದರು. ಆದರೆ ಕೆಐಎಡಿಬಿ ಭೂಮಿ ವಶಪಡಿಸಿಕೊಳ್ಳುವ ಭೂಮಿಗೆ ಬೆಲೆ ನಿಗದಿ ಸಹಾ ಮಾಡಿದೆ ಎಂದರು.

ಜಂಗಮಕೋಟೆ ಹೋಬಳಿಯ 13 ಗ್ರಾಮಗಳ ರೈತರು ಅನೇಕ ತಲೆಮಾರುಗಳಿಂದ ಕೃಷಿಯನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಇಂತಹ ರೈತರಿಂದ ಫಲವತ್ತಾದ ಕೃಷಿ ಭೂಮಿಯನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಯಾವ ಕಾರಣಕ್ಕೂ ಒಪ್ಪಲಾಗುವುದಿಲ್ಲ. ಈಗಾಗಲೇ ಕೆಐಎಡಿಬಿ ಬಳಿ ಬಳಸದೆ ಇರುವ ಭೂಮಿ ಸಾಕಷ್ಟು ಇರುವಾಗ ಮತ್ತಷ್ಟು ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವುದು ಯಾಕೆ? ಎಂದು ಪ್ರಶ್ನಿಸಿದರು.ರಾಜ್ಯ ರೈತಸಂಘದ ರಾಜ್ಯ ಕಾರ್ಯಾದ್ಯಕ್ಷ ನೇತ್ವತ್ವದಲ್ಲಿ ನಡೆದ ಈ ಹೋರಾಟದ ಬಗ್ಗೆ ಉಸ್ತುವಾರಿ ಸಚಿವರು ಹೊರರಾಜ್ಯಕ್ಕೆ ಹೋಗಿದ್ದರಿಂದ ಅವರ ಆಪ್ತ ಕಾರ್ಯದರ್ಶಿ ಸಚಿವರಿಗೆ ಮಾಹಿತಿ ನೀಡಿದರು. ಪ್ರತಿಭಟನೆ ಬಗ್ಗೆ ಮಾಹಿತಿ ಪಡೆದ ಸಚಿವರು ನಾನು ಹೊರರಾಜ್ಯದಲ್ಲಿದ್ದೇನೆ. ಅಲ್ಲಿಂದ ಅಲ್ಲಿಂದ ಬಂದ ಕೂಡಲೆ ರೈತರನ್ನ ಸಂಪರ್ಕಿಸುತ್ತೇನೆ. ಅವರೊಟ್ಟಿಗೆ ಮಾತುಕತೆ ನಡೆಸುತ್ತೇನೆ ಎಂದು ದೂರವಾಣಿ ಮೂಲಕ ಸಮಜಾಯಿಸಿ ನೀಡಿದ ಮೇಲೆ ರೈತರು ಗೃಹ ಕಚೇರಿ ಪ್ರತಿಭಟನೆ ವಾಪಸ್ಸು ಪಡೆದರು. ಆ ನಂತರ ಪೊಲೀಸರು ಅವರೆಲ್ಲರನ್ನೂ ಪೊಲೀಸ್ ಠಾಣೆಗೆ ಕರೆದೊಯ್ದು ಎಲ್ಲರಿಂದ ಸಹಿ ಪಡೆದು ವಾಪಸ್ಸು ಕಳಿಸಿಕೊಟ್ಟಿದ್ದಾರೆ.

ಸಿಕೆಬಿ-1 ಜಿಲ್ಲೆಯ ಜಂಗಮಕೋಟೆ ಕೈಗಾರಿಕ ವಲಯ ನಿರ್ಮಾಣಕ್ಕೆ ರೈತರ ಕೃಷಿ ಭೂಮಿ ನೀಡುವುದಕ್ಕೆ ವಿರೋಧಿಸಿ ಪ್ರತಿಭಟನಾ ರೈತರು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಸಚಿವ ಡಾ.ಎಂ ಸಿ ಸುಧಾಕರ್ ಗೃಹ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆವಿಷ್ಕಾರಗಳತ್ತ ಹೆಜ್ಜೆ ಇಡಲು ಅವಕಾಶ ಸದ್ಬಳಸಿಕೊಳ್ಳಿ
ಜನರ ಆಶೋತ್ತರಗಳಿಗೆ ಪಂಚಾಯತ್‌ ವ್ಯವಸ್ಥೆ ದನಿಯಾಗಲಿ