ಅಕ್ರಮ ಸಕ್ರಮದಡಿ ಟಿಸಿ ಕಾಮಗಾರಿ ಪೂರ್ಣಗೊಳಿಸಲು ರೈತರು ಮುತ್ತಿಗೆ

KannadaprabhaNewsNetwork |  
Published : Mar 21, 2025, 12:36 AM IST
  20 ಜೆ.ಜಿ.ಎಲ್.1)‌     ಅಕ್ರಮ ಸಕ್ರಮ ಯೋಜನೆಯಡಿ  ವಿದ್ಯುತ್ ಪರಿವರ್ತಕ ಅಳವಡಿಸಲು ವಿದ್ಯುತ್ ಜಾಲ ಕಾಮಗಾರಿ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ  ಪಟ್ಟಣದ ಬೆಸ್ಕಾಂ ಇಲಾಖೆಗೆ ಗುರುವಾರ ಭಾರತೀಯ ಕಿಸಾಬ್ ಸಭಾ ನೇತೃತ್ವದಲ್ಲಿ ರೈತರು ಮುತ್ತಿಗೆ ಹಾಕಿದ ನಂತರ ಬೆಸ್ಕಾಂಒ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಸುದಾಮಣಿಯವರ ಜೊತೆ ಚರ್ಚಿಸುತ್ತಿರುವ ರೈತರು. | Kannada Prabha

ಸಾರಾಂಶ

ಅಕ್ರಮ ಸಕ್ರಮ ಯೋಜನೆಯಡಿ ವಿದ್ಯುತ್ ಪರಿವರ್ತಕ ಅಳವಡಿಸಲು ವಿದ್ಯುತ್ ಜಾಲ ಕಾಮಗಾರಿಯಲ್ಲಿ ವಿಳಂಬ ನೀತಿ ಅನುಸರಣೆ ಖಂಡಿಸಿ ಪಟ್ಟಣದ ಬೆಸ್ಕಾಂಗೆ ಗುರುವಾರ ಭಾರತೀಯ ಕಿಸಾನ್‌ ಸಭಾ ನೇತೃತ್ವದಲ್ಲಿ ರೈತರು ಮುತ್ತಿಗೆ ಹಾಕಿದರು.

- ಬೇಡಿಕೆ ಈಡೇರಿಕೆ ಬಗ್ಗೆ ಕಿಸಾನ್‌ ಸಭಾಗೆ ಭರವಸೆ

- - - ಜಗಳೂರು: ಅಕ್ರಮ ಸಕ್ರಮ ಯೋಜನೆಯಡಿ ವಿದ್ಯುತ್ ಪರಿವರ್ತಕ ಅಳವಡಿಸಲು ವಿದ್ಯುತ್ ಜಾಲ ಕಾಮಗಾರಿಯಲ್ಲಿ ವಿಳಂಬ ನೀತಿ ಅನುಸರಣೆ ಖಂಡಿಸಿ ಪಟ್ಟಣದ ಬೆಸ್ಕಾಂಗೆ ಗುರುವಾರ ಭಾರತೀಯ ಕಿಸಾನ್‌ ಸಭಾ ನೇತೃತ್ವದಲ್ಲಿ ರೈತರು ಮುತ್ತಿಗೆ ಹಾಕಿದರು.

ರೈತ ಮುಖಂಡ ಕೊರಟಕೆರೆ ಧನಂಜಯ್ ಮಾತನಾಡಿ, ಆಯ್ಕೆಯಾಗಿದ್ದ 341 ಫಲಾನುಭವಿಗಳಲ್ಲಿ 181ಕ್ಕೆ ಕಾರ್ಯಾದೇಶ ನೀಡಿಲ್ಲ. ಯಾವುದೇ ಕಾಮಗಾರಿ ಪೂರ್ಣಗೊಂಡಿಲ್ಲ. ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿದ್ದು, ವರ್ಷದ ಮಾರ್ಚ್‌ ಮಾಹೆಯೊಳಗೆ ಕಾಮಗಾರಿ ಅಂತ್ಯವಾಗಬೇಕು ಎಂದು ಮನವಿ ಮಾಡಿದರು.

ಬೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಸುಧಾಮಣಿ ಮಾತನಾಡಿ, ಒಟ್ಟು ತಾಲೂಕಿನಲ್ಲಿ 1207 ಫಲಾನುಭವಿಗಳಲ್ಲಿ 522 ಕಾಮಗಾರಿ ಪೆಂಡಿಂಗ್ ಇವೆ. ಅಕ್ಟೋಬರ್‌ನಲ್ಲಿ ಕಾರ್ಯಾದೇಶ ನೀಡಿದ್ದು, ಗುತ್ತಿಗೆದಾರ ಕರಿಬಸಪ್ಪ ಅವರಿಗೆ ಸೂಚಿಸಿ, ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ರೈತ ಮುಖಂಡರಾದ ಶರಣಪ್ಪ, ಕೊಟ್ರೇಶ್, ವೀರೇಶ್, ಸ್ವಾಮಿ, ಸಿದ್ದೇಶ್, ಗಂಗಾಧರ, ಹನುಮಂತಪ್ಪ, ಗಂಗಪ್ಪ, ಲೋಹಿತ್ ಮತ್ತಿತರರು ಇದ್ದರು.

- - - -20ಜೆ.ಜಿ.ಎಲ್.1:

ಅಕ್ರಮ ಸಕ್ರಮ ಯೋಜನೆಯಡಿ ವಿದ್ಯುತ್ ಪರಿವರ್ತಕ ಅಳವಡಿಸಲು ವಿದ್ಯುತ್ ಜಾಲ ಕಾಮಗಾರಿ ವಿಳಂಬ ನೀತಿ ಖಂಡಿಸಿ ಜಗಳೂರು ಬೆಸ್ಕಾಂ ಕಚೇರಿ ಬಳಿ ಗುರುವಾರ ಭಾರತೀಯ ಕಿಸಾನ್‌ ಸಭಾ ನೇತೃತ್ವದಲ್ಲಿ ರೈತರು ಮುತ್ತಿಗೆ ಹಾಕಿದ ಸಂದರ್ಭ ಸಹಾಯಕ ಕಾರ್ಯಪಾಲಕ ಅಭಿಯಂತರ ಸುಧಾಮಣಿ ಜೊತೆ ಚರ್ಚೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟ್ರಂಪ್‌ಗೆ ಸಿದ್ದು ಆರ್ಥಿಕ ಸಚಿವರಾಗಲಿ: ಎಚ್ಡಿಕೆ!
‘ನರೇಗಾ’ ಬದಲಾವಣೆ ವಿರುದ್ಧ ಹೋರಾಟ : ಪೈಲಟ್‌