ಕನ್ನಡಪ್ರಭ ವಾರ್ತೆ ಕೋಲಾರಸಹಕಾರ ಸಂಘಗಳ ಮೂಲಕ ಮಾತ್ರ ರೈತರನ್ನು ಬಡ್ಡಿಮಾಫಿಯಾದಿಂದ ರಕ್ಷಿಸಲು ಸಾಧ್ಯ, ಈ ನಿಟ್ಟಿನಲ್ಲಿ ೨೦ ಲಕ್ಷದಲ್ಲಿ ಆರಂಭವಾದ ಎಂದು ಗೋಲ್ಡ್‌ಫೀಲ್ಡ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟೀವ್ ಲಿಮಿಟೆಡ್ ಇದೀಗ ೧೦ ಕೋಟಿ ರು.ಗಳ ವಹಿವಾಟು ನಡಸುವ ಗುರಿಯೊಂದಿಗೆ ಮುನ್ನುಗ್ಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ ತಿಳಿಸಿದರು.ನಗರದ ಸಂಸ್ಥೆಯ ಕಚೇರಿಯಲ್ಲಿ ಈ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿ, ಸಹಕಾರ ರಂಗ ಬಲವರ್ಧನೆಯಾದರೆ ಮಾತ್ರವೇ ಸಮಾಜದ ಪ್ರತಿಯೊಬ್ಬರಿಗೂ ಆರ್ಥಿಕ ನೆರವು ಸಿಗಲು ಸಾಧ್ಯ ಎಂದರು.ಸಹಕಾರ ಸಂಘದಲ್ಲಿ ಠೇವಣಿ ಇಡಿ
ಕೋಲಾರ ಜಿಲ್ಲೆ ಉಳಿದಿರುವುದೇ ಸಹಕಾರಿಕ್ಷೇತ್ರದಿಂದ. ಗ್ರಾಮೀಣ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದಾಗಿ ಜಿಲ್ಲೆಯ ರೈತರು ಆರ್ಥಿಕವಾಗಿ ಉಸಿರಾಡುತ್ತಿದ್ದಾರೆ, ಇಲ್ಲವಾದಲ್ಲಿ ಇತರೆ ಜಿಲ್ಲೆಗಳಂತೆ ನಮ್ಮ ಜಿಲ್ಲೆಯಲ್ಲೂ ರೈತರ ಆತ್ಮಹತ್ಯೆ ಕಾಣಬೇಕಾಗಿತ್ತು, ಸಾಲ ಪಡೆದವರು ಸಕಾಲಕ್ಕೆ ಸಾಲ ಮರುಪಾವತಿಸಬೇಕು, ಮತ್ತಷ್ಟು ಮಂದಿಗೆ ಸಾಲ ನೀಡಬೇಕಾದಲ್ಲಿ ಸಾಲ ಮರುಪಾವತಿ ಅತಿ ಮಹತ್ವ ಪಡೆದುಕೊಂಡಿದೆ ಎಂದರು.
ಗೋಲ್ಡ್‌ಫೀಲ್ಡ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟೀವ್ ಲಿ. ನ ಉಪಾಧ್ಯಕ್ಷ ಎನ್.ರಂಗಯ್ಯ, ನಿರ್ದೇಶಕರಾದ ವಿ.ಶ್ರೀರಾಮ್, ಡಿ.ನಾಗರಾಜಪ್ಪ, ಎ.ಎಸ್.ನಂಜುಂಡೇಗೌಡ, ಎಸ್.ಎಂ.ನಾರಾಯಣಸ್ವಾಮಿ, ಕೆ.ಎಂ.ಸುಬ್ಬಾರೆಡ್ಡಿ, ಎಂ.ಲೋಕೇಶಮೂರ್ತಿ,ಸಿ.ನಾಗರಾಜ್, ವೈ.ಎನ್.ವೆಂಕಟರಮಣಪ್ಪ, ಎಸ್.ವಿ.ನಾರಾಯಣರೆಡ್ಡಿ, ಶ್ರೀದೇವಿ, ವರಲಕ್ಷ್ಮಿ ಹೆಚ್.ಎನ್.ನಾಗೇಶ್, ಸಿಬ್ಬಂದಿ ಶಶಿಕಲಾ, ವಿ.ನಾರಾಯಣಸ್ವಾಮಿ, ವೆಂಕಟರಾಮೇಗೌಡ ಇದ್ದರು.