ರೈತರು ಸಮಗ್ರ ಕೃಷಿ ಮಾಡಿದರೆ ಆದಾಯದ ಮೂಲ ಅಧಿಕ: ಬಸವೇಗೌಡ

KannadaprabhaNewsNetwork |  
Published : Nov 26, 2026, 01:45 AM IST
25ಕೆಎಂಎನ್ ಡಿ16 | Kannada Prabha

ಸಾರಾಂಶ

ರೈತರು ಒಂದೇ ರೀತಿಯ ಕೃಷಿ ನಂಬಿಕೊಂಡರೆ ಆರ್ಥಿಕವಾಗಿ ಸಬಲರಾಗುವುದು ಕಷ್ಟ. ಇದರಿಂದಾಗಿ ಬಹುತೇಕ ರೈತರು ಮತ್ತು ರೈತರ ಮಕ್ಕಳು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ರೈತರಿಗೆ ಸಾವಯವ ಹಾಗೂ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಗ್ರಾಮೀಣ ಪ್ರದೇಶದ ಬಹುತೇಕ ರೈತರು ಮಳೆಯಾಶ್ರಿತ ಬೇಸಾಯವನ್ನೇ ಅವಲಂಬಿಸಿದ್ದು, ಇದರಿಂದ ಆರ್ಥಿಕ ಸಬಲೀಕರಣ ಕಷ್ಟವಾಗುತ್ತಿದೆ. ರೈತರು ಒಂದೇ ರೀತಿಯ ಬೆಳೆಗಳನ್ನು ಬೆಳೆಯದೆ ಸಮಗ್ರ ಕೃಷಿ ಮಾಡಿದರೆ ಆದಾಯದ ಮೂಲವೂ ಅಧಿಕವಾಗುತ್ತದೆ ಎಂದು ನಾಗಮಂಗಲ ಅಲೈಯನ್ಸ್ ಕ್ಲಬ್ ಅಧ್ಯಕ್ಷ ಖರಡ್ಯ ಬಸವೇಗೌಡ ಅಭಿಪ್ರಾಯಪಟ್ಟರು.

ತಾಲೂಕಿನ ಕೆಂದನಹಳ್ಳಿಯಲ್ಲಿ ನಾಗಮಂಗಲ ಅಲೈಯನ್ಸ್ ಕ್ಲಬ್ ಹಾಗೂ ಅಡ್ವೋಕೇಟ್ ಅಲಯನ್ಸ್ ಕ್ಲಬ್‌ನಿಂದ ಆಯೋಜಿಸಿದ್ದ ಸಾವಯವ ಹಾಗೂ ಸಮಗ್ರ ಕೃಷಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ರೈತರು ಒಂದೇ ರೀತಿಯ ಕೃಷಿ ನಂಬಿಕೊಂಡರೆ ಆರ್ಥಿಕವಾಗಿ ಸಬಲರಾಗುವುದು ಕಷ್ಟ. ಇದರಿಂದಾಗಿ ಬಹುತೇಕ ರೈತರು ಮತ್ತು ರೈತರ ಮಕ್ಕಳು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ರೈತರಿಗೆ ಸಾವಯವ ಹಾಗೂ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಉತ್ತಮ ಪರಿಸರ ವ್ಯವಸ್ಥೆಯನ್ನು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.

ಸಾವಯವ ಮತ್ತು ಸಮಗ್ರ ಕೃಷಿ ಪದ್ಧತಿ ಬೇಸಾಯ ಮಾಡಿರುವ ತಾಲೂಕಿನ ಸಾಧಕರಾದ ನಾಗತಿಹಳ್ಳಿಯ ವಿರೂಪಾಕ್ಷ ಮೂರ್ತಿ, ಹದಮಗೆರೆಯ ರಾಮನಂಜಯ್ಯ, ಬುರುಡಗುಂಟೆಯ ಕವಿತ ನಾಗರಾಜು, ಕೆಂದನಹಳ್ಳಿಯ ಕೆಂಪೇಗೌಡ, ಚೆಲುವರಾಜು ಸೇರಿದಂತೆ ಐವರು ರೈತರಿಗೆ ಸಾವಯವ ಹಾಗೂ ಸಮಗ್ರ ಕೃಷಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳಿಕ ರೈತರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಾಯಿತು.

ಪಟ್ಟಣದ ಎಸ್‌ಎಸಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಬಿ.ಕೆ.ಲೋಕೇಶ್ ಅವರು ಸಾಧಕರನ್ನು ಕುರಿತು ಮಾತನಾಡಿದರು.

ಅಡ್ವೋಕೇಟ್ ಅಲಯನ್ಸ್ ಕ್ಲಬ್‌ನ ಅಧ್ಯಕ್ಷ ಟಿ.ಕೆ.ರಾಮೇಗೌಡ, ಕಾರ್ಯದರ್ಶಿ ಡಿ.ಪಿ.ಗಿರೀಶ, ಖಜಾಂಚಿ ಎ.ಸಿ.ಲೋಕೇಶ್, ಸದಸ್ಯರಾದ ಕುಮಾರ್, ಪುಟ್ಟಸ್ವಾಮಿ, ನಾ.ರೈತ, ಎಂ.ಸಿ.ಸೌಂದರ್ಯ, ಅಭಿಜ್ಞಾ ಪಿ.ಗೌಡ, ಗಿರೀಶ್, ಪುನೀತ್, ಮಹೇಶ್, ಕೃಷ್ಣಮೂರ್ತಿ ಸೇರಿದಂತೆ ಗ್ರಾಮದ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಗವೈಕಲ್ಯ ಸಾಧನೆಗೆ ಅಡ್ಡಿಯಾಗಬಾರದು: ಗೀತಾಲಕ್ಷ್ಮಿ
ನ.30 ರಂದು ಹೇಮಗಿರಿ ಸಕ್ಕರೆ ಕಾರ್ಖಾನೆ ಎದುರು ಪ್ರತಿಭಟನೆ