ಕನ್ನಡಪ್ರಭ ವಾರ್ತೆ ಹಲಗೂರು
ಮುತ್ತತ್ತಿ ರಸ್ತೆಯ ಕರಲಕಟ್ಟೆ ಗ್ರಾಮದ ಚಿಕ್ಕರಾಜು ಜಮೀನಿನಲ್ಲಿ ಹಲಗೂರಿನ ತಾಂತ್ರಿಕ ಸೇವಾ ಕೇಂದ್ರ ವತಿಯಿಂದ ಹಮ್ಮಿಕೊಂಡಿದ್ದ ಹಿಪ್ಪುನೇರಳೆ ತೋಟಕ್ಕೆ ಇತ್ತೀಚೆಗೆ ಯಥೇಚ್ಛವಾಗಿ ಹರಡುತ್ತಿರುವ ಬೇರು ಕೊಳೆ ರೋಗದ ಬಗ್ಗೆ ರೈತರಿಗೆ ಅರಿವು ಮೂಡಿಸುವ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದರು.
ಹಿಪ್ಪು ನೇರಳೆ ಬೆಳೆದ ರೈತರ ತೋಟಕ್ಕೆ ಬೇರುಕೊಳೆ ರೋಗ ಒಂದು ಶಿಲೀಂಧ್ರದಿಂದ ಹರಡುತ್ತದೆ, ಇದು ಒಂದು ಗಿಡಕ್ಕೆ ಬಂದರೆ ಮಾರಕವಾಗಿ ಇಡೀ ಜಮೀನನ್ನು ನಾಶಪಡಿಸುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ಹತೋಟಿಗೆ ತರದಿದ್ದರೆ ಇಡೀ ಹಿಪ್ಪು ನೇರಳೆ ತೋಟವನ್ನು ನಾಶಪಡಿಸಬೇಕಾಗುತ್ತದೆ ಎಂದರು.ಒಂದು ರೋಗ ಅಕ್ಕಪಕ್ಕದ ಜಮೀನುಗಳಿಗೂ ಹರಡುತ್ತದೆ. ಇದಕ್ಕೆ ಇದಕ್ಕೆ ನಾವು ಬಳಸುತ್ತಿರುವ ರಾಸಾಯನಿಕ ಗೊಬ್ಬರ ಮತ್ತು ಭೂಮಿಯಲ್ಲಿ ಫಲವತ್ತತೆ ಕಡಿಮೆಯಾಗುತ್ತಿರುವುದೇ ಕಾರಣ ಎಂದು ತಿಳಿಸಿದರು.
ಜಿಪಂನ ರೇಷ್ಮೆ ಇಲಾಖೆ ಉಪನ್ಯಾಸಕ ಸುಂದರ್ ರಾಜ್ ಮಾತನಾಡಿ, ಇಲಾಖೆ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಕಾಲಕಾಲಕ್ಕೆ ಸರಿಯಾದ ಮಾಹಿತಿ ಮತ್ತು ರೈತರಿಗೆ ದೊರೆಯುವಂಥ ಅನುದಾನಗಳನ್ನು ಒದಗಿಸುವ ಭರವಸೆ ನೀಡಿದರು.
ಹಲಗೂರು ತಾಂತ್ರಿಕ ಸೇವಾ ಕೇಂದ್ರದ ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಎಸ್.ವಿ.ನರಸಿಂಹಮೂರ್ತಿ, ಇಲಾಖೆಯ ನರೇಗಾ ಮತ್ತು ಜಿಪಂ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ, ರೈತರಿಗೆ ರೋಗದ ಬಗ್ಗೆ ವಿವರಿಸಿ, ಅವುಗಳಿಗೆ ಔಷಧಿ ಬಳಸುವ ರೀತಿಯನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಲಸಹಳ್ಳಿ ತಾಂತ್ರಿಕ ಸೇವಾ ಕೇಂದ್ರದ ರೇಷ್ಮೆ ನಿರೀಕ್ಷಕರಾದ ನವೀನ್ ಕುಮಾರ್, ಮೈಸೂರು ರೇಷ್ಮೆ ನಿರೀಕ್ಷಕ ಬಿ.ಆರ್.ಕಿರಣ್, ಸಿಎಸ್ಆರ್‌ಟಿಐ ಪ್ರಾಜೆಕ್ಟ್ ಅಸಿಸ್ಟೆಂಟ್ ಸಹನಾ ಸೇರಿದಂತೆ ಸ್ಥಳೀಯ ರೈತರು ಪಾಲ್ಗೊಂಡಿದ್ದರು.