ಕನ್ನಡಪ್ರಭ ವಾರ್ತೆ ತಾಳಿಕೋಟೆ
ಪಟ್ಟಣದ ಮುಖ್ಯ ರಸ್ತೆಯ ಅಂಗಡಿ ಮಾಲೀಕರು, ರೈತ ಮಹಿಳೆಯರು ಹಾಗೂ ಶಾಲಾ ವಿದ್ಯಾರ್ಥಿನಿಯರು ಈ ಅಭಿಯಾನದಲ್ಲಿ ತಮ್ಮ ಶಕ್ಯಾನುಸಾರ ಹಣ ನೀಡಿದರು. ಒಟ್ಟು ₹೩,೪೮೫ ದೇಣಿಗೆ ಸಂಗ್ರಹವಾಯಿತು. ಸಂಗ್ರಹವಾದ ಹಣವನ್ನು ತಹಸೀಲ್ದಾರಗೆ ಹಸ್ತಾಂತರಿಸಲು ಹೋದಾಗ ಅವರು ಸ್ವೀಕರಿಸಲು ನಿರಾಕರಿಸಿದ್ದರಿಂದ, ಗುರುವಾರ ಡಿಡಿ ಮೂಲಕ ಜಿಲ್ಲಾಧಿಕಾರಿಗಳಿಗೆ ತಲುಪಿಸಲಾಗುವುದು ಎಂದು ಅರವಿಂದ ಕುಲಕರ್ಣಿ ತಿಳಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ರಾಜ್ಯ ಸಂಘಟನಾ ಕಾರ್ಯದರ್ಶಿ ವಿಠ್ಠಲ ಬಿರಾದಾರ, ತಾಲೂಕು ಅಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ ಹಾಗೂ ಉಪಾಧ್ಯಕ್ಷ ರಾಮನಗೌಡ ಹಾದಿಮನಿ ಮಾತನಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.ಬಿಕ್ಷಾಟನಾ ಅಭಿಯಾನದಲ್ಲಿ ಸಂಘಟನೆಯ ಪ್ರಮುಖರಾದ ವಿಠ್ಠಲ ಬಿರಾದಾರ, ತಾಲೂಕು ಅಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ರಾಮನಗೌಡ ಹಾದಿಮನಿ, ಬಸವರಾಜ ಹೊಸಳ್ಳಿ, ಸಂತೋಷ ಬಿರಾದಾರ, ಹಣಮಂತರಾಯ ಹಂದ್ರಾಳ, ಸಿದ್ಧಲಿಂಗಪ್ಪ ಬಿರಾದಾರ, ಸಂಗನಗೌಡ ಬಿರಾದಾರ, ಮಲ್ಲಿಕಾರ್ಜುನ ಬಿರಾದಾರ, ಪ್ರಭುಗೌಡ ಬಿರಾದಾರ, ಸುಭಾಷ ಗುದಗಿ, ಹನುಮಂತರಾಯ ಸಾಸನೂರ, ಸಂಗನಗೌಡ ಕೊಳೂರು, ಬಸನಗೌಡ ಕವದಿ ಸೇರಿ ರೈತರು ಭಾಗವಹಿಸಿದ್ದರು.