ಕನ್ನಡಪ್ರಭ ವಾರ್ತೆ ತಾಳಿಕೋಟೆ
ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಮಂಗಳವಾರ ದೇಶದ ರಕ್ಷಣೆಗಾಗಿ ತಮ್ಮ ಅಮೂಲ್ಯ ಜೀವನವನ್ನು ಮುಡಿಪಾಗಿಟ್ಟು ಪ್ರಾಣತ್ಯಾಗ ಮಾಡಿದ ಹುತಾತ್ಮ ವೀರಯೋಧ ಸಿದ್ದಣ್ಣ ಮಾದರ ಅವರ ಪ್ರತಿಮೆ ಅನಾವರಣ ಹಾಗೂ ಮಾಜಿ ಸೈನಿಕರ ಗೌರವ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಸಿದ್ದಣ್ಣ ಮಾದರ ಅವರ ಸ್ಮರಣಾರ್ಥ ನಿರ್ಮಿಸಿರುವ ಪ್ರತಿಮೆ ಮಕ್ಕಳಲ್ಲಿ ದೇಶಪ್ರೇಮ ಹಾಗೂ ದೇಶಸೇವೆಯ ಭಾವನೆ ಮೂಡಿಸುವ ಪ್ರೇರಣಾ ಕೇಂದ್ರವಾಗಲಿದೆ ಎಂದರು.
ಮುಖ್ಯ ಅತಿಥಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಬಸನಗೌಡ ಮಾಡಗಿ, ಸಾನ್ನಿಧ್ಯ ವಹಿಸಿದ್ದ ಹಿರೂರ ಅನ್ನದಾನೇಶ್ವರ ಮಠದ ಗುರು ಜಯಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು.ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಹಾಗೂ ನಿವೃತ್ತ ಶಿಕ್ಷಕ ಎಸ್.ಆಯ್.ಕಡಕೋಳ ಅವರು ವೀರಯೋಧ ಸಿದ್ದಣ್ಣ ಮಾದರ ಅವರ ಜೀವನ ಚರಿತ್ರೆ ಕುರಿತು ವಿವರಿಸಿದರು.ಬಳಗಾನೂರಿನ ಗ್ರಾಮಸ್ಥರು ಮತ್ತು ಮುಖಂಡರು ಶ್ರೀಗಳ ಸಮ್ಮುಖದಲ್ಲಿ ವೀರಯೋಧ ಸಿದ್ಧಣ್ಣ ಮಾದರ ಅವರ ಪ್ರತಿಮೆಅನಾವರಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಂತಯ್ಯ ಮಠ, ಶ್ರೀನಾಥಯ್ಯ ಹಿರೇಮಠ, ನಿಂಗನಗೌಡ ಪಾಟೀಲ, ಮಲ್ಲಣ್ಣ ದೋರನಳ್ಳಿ, ಚನ್ನಣ್ಣ ಅಲದಿ, ಸಂಗನಗೌಡ ಬಿರಾದಾರ, ಪ್ರಭುಗೌಡ ಪಾಟೀಲ, ಎಂ.ಎ.ಮುಲ್ಲಾ, ಸಾಹೇಬಗೌಡ ಬಿರಾದಾರ, ಪರಪ್ಪ ಅಂಬಿಗೇರ, ಮುಕ್ತುಮಸಾ ವಾಲಿಕಾರ, ರಮೇಶ ಫೀರಾಪೂರ, ಬಸನಗೌಡ ದೋರನಳ್ಳಿ, ಬಸವರಾಜ ತಳವಾರ, ಶಿವಣ್ಣ ಹಡಪದ, ಹಿರಗಪ್ಪ ಅರಳಿಕಟ್ಟಿ, ಎಸ್.ಐ.ಕಡಕೋಳ, ಶಿವಣ್ಣ ಬಾಗೇವಾಡಿ ಇತರರು ಇದ್ದರು.
ದೇಶದ ಗಡಿಯಲ್ಲಿ ನಿಂತು ದೇಶದ ರಕ್ಷಣೆ ಮಾಡುವ ಸೈನಿಕರು ಹಾಗೂ ದೇಶದ ಜನರಿಗೆ ಅನ್ನ ನೀಡುವ ರೈತರು ದೇಶದ ಎರಡು ಕಣ್ಣುಗಳಿದ್ದಂತೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸೈನಿಕನನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಸೈನಿಕರ ಕುಟುಂಬದ ನೋವು ಮತ್ತು ತ್ಯಾಗವನ್ನು ಸಮಾಜ ಗೌರವದಿಂದ ಕಾಣಬೇಕು.