-ರೈತರ ಹಿಡಿಶಾಪ
-ರಸ್ತೆ ಸರಿಪಡಿಸಿಕೊಡಲು ಜನಪ್ರತಿನಿಧಿಗಳಿಗೆ ಬೇಡಿಕೆ ಇಟ್ಟಿದ್ದ ರೈತರು । ಕಿವಿಗೊಡದ ಇಲಾಖೆ । ನಿದ್ರಾವಸ್ಥೆಯಲ್ಲಿ ಜನಪ್ರತಿನಿಧಿಗಳು
---------ಕನ್ನಡಪ್ರಭ ವಾರ್ತೆ ಹಿರಿಯೂರು:
ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಸಂಬಂಧಿಸಿದ ಇಲಾಖೆಗೆ ರೈತರು ಹಿಡಿಶಾಪ ಹಾಕಿದ್ದಾರೆ. ಹಿರಿಯೂರು ಮತ್ತು ವಿವಿಪುರ ಪ್ರಧಾನ ರಸ್ತೆಗೆ ಹೊಂದಿಕೊಂಡಿರುವ ಸುಮಾರು ನೂರಾರು ರೈತರ ಸಾವಿರಾರು ಎಕರೆ ಜಮೀನುಗಳಿಗೆ ಹೋಗುವ ಈ ರಸ್ತೆಯಲ್ಲಿ ಪ್ರತಿನಿತ್ಯ ರೈತರ ವಾಹನಗಳು ಕೂಲಿ ಕಾರ್ಮಿಕರು ಓಡಾಡುತ್ತಾರೆ. ರೈತರು ಬೆಳೆದ ಹೂವು, ಹಣ್ಣು, ತರಕಾರಿ ವಸ್ತುಗಳನ್ನು ನಗರಕ್ಕೆ ಸಾಗಿಸುವ ಪ್ರಧಾನ ರಸ್ತೆಗೆ ಇದು ಕೂಡಿಕೊಳ್ಳುತ್ತದೆ. ಸುಮಾರು ವರ್ಷಗಳಿಂದಲೂ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ರಸ್ತೆ ಸರಿಪಡಿಸಿಕೊಡಲು ಬೇಡಿಕೆ ಇಟ್ಟಿದ್ದರು ಸಹ ಕಿವಿಗೊಡದ ಇಲಾಖೆಗಳು ಹಾಗೂ ಜನಪ್ರತಿನಿಧಿಗಳು ನಿದ್ರಾವಸ್ಥೆಯಲ್ಲಿರುವುದನ್ನು ಕಂಡು ರೈತರೇ ತಮ್ಮ ರಸ್ತೆಯನ್ನು ಸ್ವತ: ಸರಿಪಡಿಸಿಕೊಂಡಿದ್ದಾರೆ.
ದುರಸ್ತಿಗೂ ಮುನ್ನ ಈ ರಸ್ತೆಯಲ್ಲಿ ಕೂಲಿ ಕಾರ್ಮಿಕರಿಗೆ ಅಪಘಾತಗಳಾಗಿ ಕೈ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ ಉದಾಹರಣೆಗಳಿವೆ. ನಮ್ಮ ಕೂಗು ಯಾರಿಗೂ ಮುಟ್ಟುತ್ತಿಲ್ಲ ಎನ್ನುವುದನ್ನು ಮನಗಂಡು ರೈತರೇ ರಸ್ತೆ ಸರಿಪಡಿಸಿಕೊಂಡಿದ್ದಾರೆ ಎಂದರು.
ಫೋಟೊ: 1,2