ಸಮರ್ಪಕ ವಿದ್ಯುತ್‌ ಪೂರೈಕೆಗೆ ರೈತರ ಆಗ್ರಹ

KannadaprabhaNewsNetwork |  
Published : Mar 10, 2026, 02:15 AM IST
ಗುಬ್ಬಿ ತಾಲ್ಲೂಕಿನ ಬಂಡನಹಳ್ಳಿ ,ಭೋವಿಕಾಲೋನಿ ಭೋಗಸಂದ್ರ ,ಹರದಗೆರೆ ,ಕಳನಹಳ್ಳಿ ಮುದ್ದನಹಳ್ಳಿ ಹಟ್ಟಿ , ಕರಡಿಕಲ್ಲು ಭಾಗಗಳಿಗೆ ಸಮರ್ಪಕ ವಿದ್ಯುತ್ ನೀಡುತ್ತಿಲ್ಲ ಎಂದು ಹೊಸಕೆರೆ ಬೆಸ್ಕಾಂ ಕಛೇರಿ ಮುಂಬಾಗ ನೂರಾರು ರೈತರು ಸಮರ್ಪಕವಾಗಿ ವಿದ್ಯುತ್ ಕೊಡಬೇಕೆಂದು  ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ತಾಲೂಕಿನ ಬಂಡನಹಳ್ಳಿ ,ಭೋವಿ ಕಾಲೋನಿ ಭೋಗಸಂದ್ರ ,ಹರದಗೆರೆ ,ಕಳನಹಳ್ಳಿ ಮುದ್ದನಹಳ್ಳಿ ಹಟ್ಟಿ , ಕರಡಿಕಲ್ಲು ಭಾಗಗಳಿಗೆ ಸಮರ್ಪಕ ವಿದ್ಯುತ್ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಹೊಸಕೆರೆ ಬೆಸ್ಕಾಂ ಕಚೇರಿ ಮುಂಬಾಗ ನೂರಾರು ರೈತರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭವಾರ್ತೆ ಗುಬ್ಬಿ

ತಾಲೂಕಿನ ಬಂಡನಹಳ್ಳಿ ,ಭೋವಿ ಕಾಲೋನಿ ಭೋಗಸಂದ್ರ ,ಹರದಗೆರೆ ,ಕಳನಹಳ್ಳಿ ಮುದ್ದನಹಳ್ಳಿ ಹಟ್ಟಿ , ಕರಡಿಕಲ್ಲು ಭಾಗಗಳಿಗೆ ಸಮರ್ಪಕ ವಿದ್ಯುತ್ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಹೊಸಕೆರೆ ಬೆಸ್ಕಾಂ ಕಚೇರಿ ಮುಂಬಾಗ ನೂರಾರು ರೈತರು ಪ್ರತಿಭಟನೆ ನಡೆಸಿದರು. ಗ್ರಾಮ ಪಂಚಾಯಿತಿ ಸದಸ್ಯ ಶಿವರಾಜು ಮಾತನಾಡಿ ರೈತರಿಗೆ ಪ್ರತಿ ದಿನ ವಿದ್ಯುತ್ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ತೋಟದ ಮನೆಗಳು, ಶಾಲೆಗಳಲ್ಲಿ ಪ್ರತಿದಿನ ವಿದ್ಯುತ್ ಕೊಡದೆ ಬೆಸ್ಕಾಂ ಅಧಿಕಾರಿಗಳು ನಮ್ಮನ್ನು ಅಲೆದಾಡಿಸುತ್ತಿದ್ದಾರೆ. ಸುಮಾರು 5 ವರ್ಷಗಳಿಂದಲೂ ಕೂಡ ಈ ಸಮಸ್ಯೆ ಬಗೆಹರಿಸಲು ಬೆಸ್ಕಾಂ ಅಧಿಕಾರಿಗಳು ಆಗುತ್ತಿಲ್ಲ. ಬೇಸಿಗೆ ಇರುವುದರಿಂದ ರೈತರು ತೋಟಗಳಲ್ಲಿ ಪ್ರತಿದಿನ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ. ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭವಾದರೂ ಕೂಡ ಬೆಸ್ಕಾಂ ಅಧಿಕಾರಿಗಳು ಸಮರ್ಪಕ ವಿದ್ಯುತ್ ಕೊಡದೆ ವಿದ್ಯಾರ್ಥಿಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಪ್ರತಿದಿನ ಒಂದು ಗಂಟೆ ವಿದ್ಯುತ್ ಕೊಡುತ್ತಾರೆ. ಒಂದು ಗಂಟೆ ವಿದ್ಯುತ್ ಗೆ ಸಾಕಾಗುವುದಿಲ್ಲ ಕನಿಷ್ಠ 5 ಗಂಟೆಯಾದರೂ ವಿದ್ಯುತ್ ಕೊಟ್ಟರೆ ಗ್ರಾಮೀಣ ಭಾಗದ ರೈತರಿಗೆ ತುಂಬಾ ಅನುಕೂಲವಾಗುತ್ತದೆ. ಒಂದು ವಾರದೊಳಗೆ ಸಮರ್ಪಕವಾಗಿ ವಿದ್ಯುತ್ ಕೊಡದೆ ಹೋದರೆ ಹೊಸಕೆರೆ ಬೆಸ್ಕಾಂ ಕಚೇರಿ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸ್ಥಳಕ್ಕೆ ಆಗಮಿಸಿದ ಎಇಇ ರಾಜೇಶ್ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಸ್ವೀಕರಿಸಿ ಮಾತನಾಡಿದ ಅವರು ರೈತರ ಕಷ್ಠ ನಮಗೂ ಅರ್ಥವಾಗುತ್ತದೆ. ಈಗಾಗಲೇ ಬಂಡಹಳ್ಳಿ ಹರದಗೆರೆ , ಬೋವಿ ಕಾಲೋನಿ ಭೋಗಸಂದ್ರ ಗ್ರಾಮಗಳಲ್ಲಿ ಲಿಂಕ್ ಲೈನ್ ಕಾಮಗಾರಿ ಪ್ರಗತಿಯಲ್ಲಿದ್ದು ಒಂದು ವಾರದೊಳಗೆ ಈ ಭಾಗದ ರೈತರ ವಿದ್ಯುತ್ ಸಮಸ್ಯೆನ ಬಗೆಹರಿಸಿಕೊಡುತ್ತೇವೆ. ಪ್ರತಿದಿನ ಸಮರ್ಪಕವಾಗಿ ವಿದ್ಯುತ್ ಕೊಡುತ್ತೇವೆ ಎಂದು ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆಯನ್ನು ಹಿಂಪಡೆದರು. ಇದೇ ಸಂದರ್ಭದಲ್ಲಿ ಬೆಸ್ಕಾಂ ಶಾಖಾಧಿಕಾರಿ ಧನಂಜಯ್ ಗ್ರಾಮ ಪಂಚಾಯಿತಿ ಸದಸ್ಯ ಮಹಾರುದ್ರಸ್ವಾಮಿ ಮುಖಂಡರಾದ ಮಧು , ಪ್ರಭಾಕರ್ , ಗಂಗಾಧರ್ ,ಕುಮಾರ್ ,ರಾಜಣ್ಣ ,ಕಾಂತಣ್ಣ ,ಬಸವರಾಜು ,ನಾಗರಾಜು , ಪಾಪಣ್ಣ , ನಟರಾಜು ,ಇ ,ದಕ್ಷಿಣಾಮೂರ್ತಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉನ್ನತ ಹುದ್ದೆ ಕನಸು ಈಡೇರಿಸಲು ಅಧ್ಯಯನ ಅವಶ್ಯಕ : ಶ್ರೀನಿವಾಸ್
ಕೆ.ಆರ್. ಆಸ್ಪತ್ರೆಯಲ್ಲಿ 100 ಹಾಸಿಗೆವುಳ್ಳ ಐ.ಸಿ.ಯು ಘಟಕ ಸ್ಥಾಪಿಸಿ: ಕೆ. ಶಿವಕುಮಾರ್