ಅನಧಿಕೃತ ನೀರಾವರಿ ಸಂಪರ್ಕ ಕಡಿವಾಣಕ್ಕೆ ರೈತರ ಆಗ್ರಹ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ

KannadaprabhaNewsNetwork |  
Published : Aug 26, 2026, 02:15 AM IST
ತುಂಗಭದ್ರಾ ಕೆಳಮಟ್ಟದ ಕಾಲುವೆ ಬಾಗೇವಾಡಿ ಉಪಕಾಲುವೆಯ ಮೇಲ್ಬಾಗದಲ್ಲಿ ಅನಧಿಕೃತ ಪಂಪ್‌ಸೆಟ್ ಹಾಗೂ ಅಕ್ರಮವಾಗಿ ಪೈಪ್‌ಲೈನ್ ತೆರವುಗೊಳಿಸುವಂತೆ ಒತ್ತಾಯಿಸಿ ರೈತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ತುಂಗಭದ್ರಾ ಕೆಳಮಟ್ಟದ ಕಾಲುವೆ ಬಾಗೇವಾಡಿ ಉಪಕಾಲುವೆಯ ಮೇಲ್ಬಾಗದಲ್ಲಿ ಅನಧಿಕೃತ ಪಂಪ್‌ಸೆಟ್ ಹಾಗೂ ಅಕ್ರಮವಾಗಿ ಪೈಪ್‌ಲೈನ್ ತೆರವುಗೊಳಿಸುವಂತೆ ಒತ್ತಾಯಿಸಿ ರೈತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ತೆಕ್ಕಲಕೋಟೆ

ತುಂಗಭದ್ರಾ ಕೆಳಮಟ್ಟದ ಕಾಲುವೆ ಬಾಗೇವಾಡಿ ಉಪಕಾಲುವೆಯ ಮೇಲ್ಬಾಗದಲ್ಲಿ ಅನಧಿಕೃತ ಪಂಪ್‌ಸೆಟ್ ಹಾಗೂ ಅಕ್ರಮವಾಗಿ ಪೈಪ್‌ಲೈನ್ ತೆರವುಗೊಳಿಸುವಂತೆ ಒತ್ತಾಯಿಸಿ ರೈತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಈಗಾಗಲೇ ಕಾಲುವೆಗೆ ನೀರು ಬಿಡಲಾಗಿದ್ದು, ಅಧಿಕೃತ ನೀರಾವರಿ ಇರುವ ರೈತರು ಇದನ್ನು ನಂಬಿ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಆದರೆ, ಉಪಕಾಲುವೆಗೆ ಅನಧಿಕೃತವಾಗಿ ಪೈಪ್‌ಲೈನ್ ಹಾಕಿದ್ದು, ಇದನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಕಾಲುವೆ ಕೆಳಭಾಗದ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ, ಉಪ್ಪಾರ ಹೊಸಳ್ಳಿ, ಬಲಕುಂದಿ, ಅರಳಿಗನೂರು, ಪೋಪ್ಪನಾಳು, ಹಳೇಕೋಟೆ ಗ್ರಾಮಗಳ ನೂರಾರು ಹೆಕ್ಟೇ‌ರ್ ಭತ್ತ ಹಾಗೂ ತೋಟಗಾರಿಕೆ ಬೆಳೆಗಳ ಫಸಲು ಕೈಗೆ ಬರುವ ಸಂದರ್ಭದಲ್ಲಿ ನೀರಿನ ಕೊರತೆ ಉಂಟಾಗಿ ಅಪಾರ ಪ್ರಮಾಣದ ಬೆಳೆ ನಷ್ಟ ಸಂಭವಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಅಕ್ರಮ ಪಂಪ್‌ಸೆಟ್ ಹಾಗೂ ಪೈಪ್‌ಲೈನ್‌ ಹಾವಳಿಯಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಸಿಗುತ್ತಿಲ್ಲ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೀರು ಬಳಕೆದಾರರ ಸಂಘದ ಅಧ್ಯಕ್ಷ ಬಂದೇ ನವಾಜ್ ಒತ್ತಾಯಿಸಿದರು.

ಮುಖಂಡರಾದ ರೈತ ಜ್ಞಾನಾನಂದ ಸ್ವಾಮಿ, ನೆಣಿಕಪ್ಪ, ಮರಿನಾಗಪ್ಪ, ಕೇಶವ, ಖಾದ‌ರ್ ಭಾಷ, ಆಲಂ ಬಾಷ, ಜಡೆ ನಾಗರಾಜ, ಬಿ. ಬಸಪ್ಪ, ಗಾಮ ಮಲ್ಲಯ್ಯ, ವೀರೇಶ, ಉಪ್ಪಾರ ಹೊಸಳ್ಳಿ ರಾಜಪ್ಪ, ಎನ್ ಚಾಂದು, ರಂಗಪ್ಪ, ರಾಮ, ಮಹ್ಮದ್ ಸಾಬ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾದರಿಯಾದ ಪದವಿ ರೈತನ ಕೃಷಿ ಕಾಯಕ
ವೈಯಕ್ತಿಕ ಕಾಮಗಾರಿ ಸದುಪಯೋಗ ಪಡೆಯಿರಿ:ಯಂಕಂಚಿ