ಮಾವು ಬೆಲೆ ನಿಗದಿಗೆ ರೈತರ ಆಗ್ರಹ

KannadaprabhaNewsNetwork |  
Published : Jun 13, 2026, 01:15 AM IST
೧೨ಕೆಎಲ್‌ಆರ್-೩ಮಾವು ಬೆಲೆ ನಿಗದಿ ಪಡಿಸುವಂತೆ ಶ್ರೀನಿವಾಸಪುರ ಶ್ರೀ ಭೈರವೇಶ್ವರ ಮಾವು ಬೆಳೆಗಾರರ ಸಂಘದಿಂದ ಶುಕ್ರವಾರ ಕೋಲಾರದ ಜಿಲ್ಲಾಧಿಕಾರಿ ಎಂ.ಆರ್.ರವಿರಿಗೆ ಮನವಿಸಲ್ಲಿಸುತ್ತಿರುವುದು. | Kannada Prabha

ಸಾರಾಂಶ

ಕೋಲಾರ ಜಿಲ್ಲೆಯು ಕರ್ನಾಟಕ ರಾಜ್ಯದಲ್ಲೇ ಅತಿ ಹೆಚ್ಚು ಮಾವಿನ ಬೆಳೆ ಬೆಳೆಯುತ್ತಿದ್ದು, ಬೆಳೆದಂತಹ ಮಾವಿನಕಾಯಿಗೆ ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರ

ಮಾವು ಬೆಲೆ ನಿಗದಿ ಪಡಿಸುವಂತೆ ಶ್ರೀನಿವಾಸಪುರ ಶ್ರೀ ಭೈರವೇಶ್ವರ ಮಾವು ಬೆಳೆಗಾರರ ಸಂಘದಿಂದ ಶುಕ್ರವಾರ ಜಿಲ್ಲಾಧಿಕಾರಿ ಎಂ.ಆರ್. ರವಿ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಬಿ. ಸೀತಾರಾಮರೆಡ್ಡಿ ಮಾತನಾಡಿ, ಶ್ರೀನಿವಾಸಪುರ ಕ್ಷೇತ್ರ ಸೇರಿ ಕೋಲಾರ ಜಿಲ್ಲೆಯು ಕರ್ನಾಟಕ ರಾಜ್ಯದಲ್ಲೇ ಅತಿ ಹೆಚ್ಚು ಮಾವಿನ ಬೆಳೆ ಬೆಳೆಯುತ್ತಿದ್ದು, ಬೆಳೆದಂತಹ ಮಾವಿನಕಾಯಿಗೆ ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ.

ಒಂದು ಟನ್ ಮಾವಿನಕಾಯಿ ಬೆಳೆಯಲು ೮ ರಿಂದ ೧೦ ಸಾವಿರ ರು. ಖರ್ಚು ಬರುತ್ತದೆ. ಆದರೆ ಪ್ರಸ್ತುತ ಒಂದು ಟನ್‌ಗೆ ನಾಲ್ಕುರಿಂದ ಐದು ಸಾವಿರ ರು. ಕಾರ್ಖಾನೆಗಳು ನಿಗದಿ ಮಾಡಿದ್ದಾರೆ, ಮಾವಿನಕಾಯಿ ಕೊಯ್ದು ಮಾರಲು ನಾಲ್ಕರಿಂದ ಐದು ಸಾವಿರ ರು. ಖರ್ಚು ಬರುತ್ತದೆ, ಎಷ್ಟೋ ಜನ ರೈತರು ತೋಟಗಳಲ್ಲಿ ಮಾವಿನ ಕಾಯಿಗಳನ್ನು ಕೀಳದೇ ಬಿಟ್ಟಿದ್ದಾರೆ ಎಂದು ಹೇಳಿದರು.

ಜಿಲ್ಲಾಡಳಿತದಿಂದ ಒಂದು ಟನ್ ಮಾವಿನ ಕಾಯಿಗೆ ಕನಿಷ್ಠ ೧೦ ಸಾವಿರ ರು. ನಿಗದಿ ಮಾಡಲು ಸರ್ಕಾರಕ್ಕೆ ಮನವಿ ಮಾಡಬೇಕು, ಹಿಂದಿನ ವರ್ಷ ಈ ರೀತಿ ಸಮಸ್ಯೆಯಾದಾಗ ಪಿಡಿಪಿಎಸ್ ಯೋಜನೆಯಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು ಬೆಂಬಲ ಬೆಲೆ ಘೋಷಣೆ ಮಾಡಿದ್ದು, ಅದೇ ರೀತಿ ಈ ವರ್ಷವೂ ಕೇಂದ್ರ ಸರ್ಕಾರದ ಜೊತೆ ಚರ್ಚಿಸಿ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಒತ್ತಾಯ ಮಾಡಿದರು.

ಸಂಘದ ಕಾರ್ಯದರ್ಶಿ ಎಂ. ರಾಮಚಂದ್ರಪ್ಪ, ಖಜಾಂಚಿ ಎಂ. ಬೈರೇಗೌಡ, ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಹೆಚ್. ಸಂಪತ್ ಕುಮಾರ್, ಪ್ರಸನ್ನ ಕುಮಾರ್, ವಿ. ಚೌಡರೆಡ್ಡಿ, ಜಯರಾಮರೆಡ್ಡಿ, ದೊಡ್ಡನಂಜಪ್ಪ, ಕೆ.ಟಿ. ಜಯಣ್ಣ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಿಪಟೂರಿನಲ್ಲಿ ರಾತ್ರಿಯೇ ಸ್ವಚ್ಛವಾಗಲಿದೆ ನಗರ
ಕುಡಿವ ನೀರು ಸಮಸ್ಯೆ ಉಂಟಾದಲ್ಲಿ ಅಧಿಕಾರಿಗಳೇ ಹೊಣೆ