ಕೆರೆಗೆ ನೀರು, ಸಾಗುವಳಿ ಚೀಟಿಗೆ ರೈತರ ಆಗ್ರಹ

KannadaprabhaNewsNetwork |  
Published : Oct 08, 2026, 01:30 AM IST
ಕೆರೆಗೆ ನೀರು,ಸಾಗುವಳಿ ಚೀಟಿಗೆ ಆಗ್ರಹಿಸಿ ರೈತಸಂಘ ರಸ್ತೆತಡೆ | Kannada Prabha

ಸಾರಾಂಶ

ಕೆರೆಗಳಿಗೆ ನೀರು ತುಂಬಿಸಬೇಕು, ಸಾಗುವಳಿ ಚೀಟಿ ವಿತರಿಸಬೇಕು ಎಂದು ಆಗ್ರಹಿಸಿ ರೈತಸಂಘ ಕಳೆದ ೪೭ ದಿನಗಳಿಂದಲೂ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೂ ತಾಲೂಕು ಆಡಳಿತ ನಿದ್ರೆಗೆ ಜಾರಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ರೈತಸಂಘದ ಕಾರ್ಯಕರ್ತರು ರಸ್ತೆತಡೆ ನಡೆಸಿದರು. ಅಲ್ಲದೆ ಬಾರುಕೋಲು ಬೀಸುವ ಮೂಲಕ ತಾಲೂಕು ಚುರುಕು ಮುಟ್ಟಿಸುವ ಪ್ರಯತ್ನ ನಡೆಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕೆರೆಗಳಿಗೆ ನೀರು ತುಂಬಿಸಬೇಕು, ಸಾಗುವಳಿ ಚೀಟಿ ವಿತರಿಸಬೇಕು ಎಂದು ಆಗ್ರಹಿಸಿ ರೈತಸಂಘ ಕಳೆದ ೪೭ ದಿನಗಳಿಂದಲೂ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೂ ತಾಲೂಕು ಆಡಳಿತ ನಿದ್ರೆಗೆ ಜಾರಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ರೈತಸಂಘದ ಕಾರ್ಯಕರ್ತರು ರಸ್ತೆತಡೆ ನಡೆಸಿದರು. ಅಲ್ಲದೆ ಬಾರುಕೋಲು ಬೀಸುವ ಮೂಲಕ ತಾಲೂಕು ಚುರುಕು ಮುಟ್ಟಿಸುವ ಪ್ರಯತ್ನ ನಡೆಸಿದರು.

ಪಟ್ಟಣದ ತಾಲೂಕು ಕಚೇರಿಯಿಂದ ಬಾರುಕೋಲು ಹಿಡಿದು ಸರ್ಕಾರ ಹಾಗೂ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ವಿರುದ್ದ ದಿಕ್ಕಾರದ ಘೋಷಣೆಗಳನ್ನು ಮೊಳಗಿಸಿ ತಮ್ಮ ಆಕ್ರೋಶ ಹೊರಹಾಕಿದರು.

ರೈತಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, ಕಳೆದ ಐದಾರು ದಶಕಗಳಿಂದಲೂ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡುತ್ತಿಲ್ಲ. ಕೆರೆಗಳಿಗೆ ನೀರು ತುಂಬಿಸಲು ಆಗುತ್ತಿಲ್ಲ ಎಂದ ಮೇಲೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಬದುಕಿದೆಯಾ? ಅಥವಾ ಸತ್ತಿದೆಯಾ ಎಂದು ಪ್ರಶ್ನೆ ಜನತೆಗೆ ಎದುರಾಗಿದೆ ಎಂದು ಆರೋಪಿಸಿದರು.

ರೈತರ ಬೇಡಿಕೆ ಈಡೇರಿಸಬೇಕು ಎಂದು ರೈತಸಂಘದ ಹೋರಾಟ ನಡೆಸುತ್ತಿದೆ.ಇದರಲ್ಲಿ ಯಾರಿಗೂ ತೊಂದರೆ ಕೊಡಬೇಕೆಂಬ ಉದ್ದೇಶದಿಂದ ಚಳವಳಿ ಮಾಡುತ್ತಿಲ್ಲ. ಕಳೆದ ೪೭ ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದೇವೆ. ಆದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಐದಾರು ದಶಕಗಳಿಂದ ಸಾಗುವಳಿ ಮಾಡುತ್ತಿರುವ ೮ ಸಾವಿರಕ್ಕೂ ಹೆಚ್ಚು ರೈತರಿಗೆ ಇನ್ನೂ ಸಾಗುವಳಿ ಚೀಟಿ ನೀಡಿಲ್ಲ,ಹಕ್ಕುಪತ್ರ ನೀಡಿಲ್ಲ,ಆರ್‌ಟಿಸಿ ತಿದ್ದುಪಡಿ ಮಾಡಿಲ್ಲಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಗಳು ರೈತರ ಸಮಸ್ಯೆಗಮನಿಸುತ್ತಿಲ್ಲ ಎಂದರು.

ಅರಣ್ಯ ಇಲಾಖೆ ಸಾಗುವಳಿ ಚೀಟಿ ನೀಡಲು ಎನ್‌ಒಸಿ ನೀಡುತ್ತಿಲ್ಲ.ಕೆರೆಗಳಿಗೆ ನೀರು ತುಂಬಿಸಿದ ಹಿನ್ನೆಲೆಯಲ್ಲಿ ರೈತಸಂಘ ಅನಿವಾರ್ಯವಾಗಿ ರಸ್ತೆ ತಡೆ ಮಾಡಬೇಕಾಯಿತು ಎಂದರು.

ಬರುವ ಅ.೧೦ರೊಳಗೆ ಎನ್‌ಒಸಿ ನೀಡುತ್ತೇವೆ ಎಂದು ಅರಣ್ಯ ಇಲಾಖೆ ಎಸಿಎಫ್‌ ಹೇಳಿದ್ದರು.ಗಡುವು ಮುಗಿಯುವ ಹಂತಕ್ಕೆ ಬಂದಿದೆ.ಗಡುವ ಮುಗಿದ ಬಳಿಕ ಎಸಿಎಫ್‌ ಮನೆ ಮುಂದೆ ರೈತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.

ಕೆರೆ ನೀರು,ಸಾಗುವಳಿ ವಿಚಾರದಲ್ಲಿ ಸ್ಥಳೀಯ ಶಾಸಕರು ರೈತರ ಬೇಡಿಕೆ ಗಂಭೀರವಾಗಿ ತೆಗೆದುಕೊಂಡಿಲ್ಲ. ಇದು ಶಾಸಕರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.ರೈತಸಂಘ ರೈತರ ಬೇಡಿಕೆಗೆ ಮಾತ್ರ ಹೋರಾಟ ನಡೆಸುತ್ತಿದೆ.ಶಾಸಕರು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ರೈತರು ತಕ್ಕ ಪಾಠ ಕಲಿಸಿದ್ದಾರೆ ಎಂದು ಎಚ್ಚರಿಸಿದರು.

ರೈತಸಂಘದ ತಾಲೂಕು ಅಧ್ಯಕ್ಷ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಕೋಡಹಳ್ಳಿ ಪ್ರಸಾದ್‌, ಮಹಿಳಾ ಘಟಕದ ಅಧ್ಯಕ್ಷೆ ಬಸಪ್ಪ, ರೈತಸಂಘದ ಮುಖಂಡರಾದ ನಾಗರಾಜಪ್ಪ, ರಘು, ಮಹದೇವಸ್ವಾಮಿ, ಹಕ್ಕಲಪುರ ಕುಮಾರ್‌, ಗಂಗಾಧರ್‌, ರವಿಚಂದ್ರ, ಸುರೇಶ್‌, ಚಿಕ್ಕತಾಯಮ್ಮ, ನೀಲಮ್ಮ, ಸುರೇಶ್‌ ಸೇರಿ ಹಲವರಯ ಹಾಜರಿದ್ದರು.

೧೬ಕ್ಕೆ ರೈತಸಂಘ ಪ್ರತಿಭಟನಾ ಸಮಾವೇಶಕ್ಕೆ ನಿರ್ಧಾರ

ಅ.೧೬ ರಂದು ಪಟ್ಟಣದ ತಾಲೂಕು ಕಚೇರಿ ಮುಂದೆ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲು ರೈತಸಂಘದ ನಿರ್ಧರಿಸಿದೆ ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಹೇಳಿದರು.

ಪ್ರತಿಭಟನೆಯಲ್ಲಿ ಮಾತನಾಡಿ ರೈತರ ಸಮಸ್ಯೆ ಈಡೇರಿಸಲು ಆಗದ ಜಿಲ್ಲಾ ಮತ್ತು ತಾಲೂಕು ಆಡಳಿತದ ವಿರುದ್ಧ ರೈತರು ದೊಡ್ಡ ಹೋರಾಟ ಹಾಗೂ ಬೃಹತ್‌ ಪ್ರತಿಭಟನಾ ಸಮಾವೇಶ ನಡೆಸಲಾಗುವುದು ಎಂದರು.

ಈ ಪ್ರತಿಭಟನೆಗೆ ತಾಲೂಕಿನ ಎಲ್ಲಾ ಹಳ್ಳಿಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರೈತರ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಂದ್ರ ಮೋದಿ ಆಡಳಿತ ಕುರಿತು ಬೀದಿ ನಾಟಕ
ಕುರುಹಿನಶೆಟ್ಟಿ ಭಜನಾ ಮಂಡಳಿಯಿಂದ ಭಕ್ತಿಗೀತೆ