ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕನಗನಹಳ್ಳಿ ಸರ್ಕಾರಿ ಗೋಮಾಳದ 14 ಎಕರೆ ಜಾಗವನ್ನು ಆಂಧ್ರಮೂಲಕ ಖಾಸಗಿ ವ್ಯಕ್ತಿಗೆ 30 ವರ್ಷಕ್ಕೆ ಗುತ್ತಿಗೆ ನೀಡಿ ಕೇವಲ 4.5 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಅವಕಾಶ ನೀಡಲಾಗುತ್ತಿದೆ ಎಂದರು.
ಉತ್ಪಾದನೆಯಾಗುವ ವಿದ್ಯುತ್‌ನನ್ನು ಚಿನಕುರಳಿ ಸಬ್‌ಸ್ಟೇಷನ್‌ಗೆ ತರಲು ಪ್ರತ್ಯೇಕ ಲೈನ್ ಅಳವಡಿಸಲು ಹಲವು ರೈತರ ಜಮೀನು ಮತ್ತು ತೋಟದ ಬೆಳೆ ನಾಶವಾಗಿ ರೈತರಿಗೆ ಅನಾನೂಕೂಲವಾಗಲಿದೆ. ಶಾಸಕರು ರೈತರಿಗೆ ಅನಾನೂಕೂಲ ಉಂಟುಮಾಡಿ ಆಂಧ್ರ ಮೂಲದ ವ್ಯಕ್ತಿಗೆ ದುಡ್ಡು ಮಾಡಿಕೊಡಲು ಮುಂದಾದ್ದಾರೆ ಎಂದು ಕಿಡಿಕಾರಿದರು.ಮೂರು ಭಾರಿ ಶಾಸಕನಾಗಿ ಕೆಲಸ ಮಾಡಿ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸುವ ಕೆಲಸ ಮಾಡಿದ್ದೇನೆ. ಶಾಸಕನಾಗಿದ್ದಾಗ ಉಯ್ಗೋನಹಳ್ಳಿ ಪವರ್ ಸ್ಟೇಷನ್‌ನಿಂದ ಚಿನಕುರಳಿ ಪವರ್ ಸ್ಟೇಷನ್‌ಗೆ ಪ್ರತ್ಯೇಕ ಎಕ್ಸ್‌ಪ್ರೆಸ್ ವಿದ್ಯುತ್ ಲೈನ್‌ನ ಕಾಮಗಾರಿ ಮಾಡಲಾಗಿದೆ. ಈ ಲೈನ್ ಮೂಲಕ ಈ ಭಾಗದ ರೈತರಿಗೆ ಉತ್ತಮ ವಿದ್ಯುತ್ ಶಕ್ತಿಯನ್ನು ಹಗಲು ವೇಳೆಯಲ್ಲಿ ನೀಡಲು ಶಾಸಕರು ಶ್ರಮಸಬೇಕು ಎಂದು ಆಗ್ರಹಿಸಿದರು.
ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಬೇಕಾದರೂ ಸ್ಥಳೀಯರೊಂದಿಗೆ ಚರ್ಚಿಸಿ ನಂತರ ನಾನು ಕ್ರಮ ವಹಿಸುತ್ತಿದ್ದೆ. ನಾನು ಶಾಸಕನಾಗಿ ಬರುವ ಮುಂಚೆ ಕ್ಷೇತ್ರದಲ್ಲಿ ಇದ್ದುದ್ದು ಕೇವಲ ಒಂದೇ ಒಂದು ವಿದ್ಯುತ್ ಸಬ್ ಸ್ಟೇಷನ್. ಶಾಸಕನಾದ ಬಳಿಕ ನನ್ನ ರೈತರು ನೆಮ್ಮದಿಯಿಂದ ಬೆಳೆ ಬೆಳೆಯಬೇಕೆಂದು ಹೋಬಳಿಗೆ ಮೂರು ವಿದ್ಯುತ್ ಸಬ್ ಸ್ಟೇಷನ್ ಮಂಜೂರು ಮಾಡಿಸಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವ ಕೆಲಸ ಮಾಡಿದ್ದೇನೆ ಎಂದರು.ನಮಗೆ ಸೋಲಾರ್ ಪ್ಲಾಂಟ್‌ನ ಅವಶ್ಯಕತೆ ಇಲ್ಲ. ಶಾಸಕರು ಬೇಕಾದರೆ ಬೇರೆಡೆಗೆ ವರ್ಗಾಹಿಸಿ ರೈತರಿಗೆ ಅನುಕೂಲವಾಗುವ ಯಾವುದೇ ಸೂಕ್ತ ಸ್ಥಳದಲ್ಲಿ ನಿರ್ಮಿಸಲಿ. ನನ್ನ ಅವಧಿಯಲ್ಲಿ ಕ್ಯಾತನಹಳ್ಳಿಗೆ ವಿದ್ಯುತ್ ಸಬ್ ಸ್ಟೇಷನ್ ಮಂಜೂರು ಮಾಡಿಸಿದ್ದೇನೆ. ಆದರೆ, ಇಲ್ಲಿಯವರೆಗೂ ಅದಕ್ಕೆ ಜಾಗ ಮಂಜೂರು ಮಾಡಿಸಿಕೊಡಲು ಶಾಸಕರಾಗಿದ್ದ ಕೆ.ಎಸ್.ಪುಟ್ಟಣ್ಣಯ್ಯ ಅವರ ಕೈಯಲ್ಲೂ ಸಾಧ್ಯವಾಗಲಿಲ್ಲ. ಈಗಿನ ಶಾಸಕರಿಗೂ ಸಾಧ್ಯವಾಗಿಲ್ಲ. ಮೊದಲು ಕ್ಯಾತನಹಳ್ಳಿ ವಿದ್ಯುತ್ ಸಬ್ ಸ್ಟೇಷನ್‌ಗೆ ಸ್ಥಳ ಮಂಜೂರು ಮಾಡಿಸಿಕೊಡುವ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ತಾಲೂಕಿನ ಸುಪುತ್ರ ಎಸ್.ಆರ್. ಉಮಾಶಂಕರ್ ಅವರು ಸರ್ಕಾರ ಗೃಹ ಇಲಾಖೆಯಲ್ಲಿ ಜವಾಬ್ದಾರಿ ಹೊತ್ತು ಕೆಲಸ ಮಾಡುವ ಸಂದರ್ಭದಲ್ಲಿ ಚಿನಕುರಳಿ ಗ್ರಾಮದ ಉಪ ಠಾಣೆಯನ್ನು ಮೇಲ್ದರ್ಜೆಗೇರಿಸಿ ಪೊಲೀಸ್ ಠಾಣೆ ಮಂಜೂರು ಮಾಡಿಸಿದ್ದರು. ಆದರೆ, ಈಗಿನ ಶಾಸಕರು ಅದನ್ನು ರದ್ದುಪಡಿಸಿ ಕ್ಯಾತನಹಳ್ಳಿ ಗ್ರಾಮಕ್ಕೆ ಸ್ಥಳಾಂತರ ಮಾಡಿಸಿಕೊಂಡರು ಎಂದು ಕಿಡಿಕಾರಿದರು.ಶಾಸಕರು ಮನಸ್ಸು ಮಾಡಿದ್ದರೆ ಈಗಿನ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ಯಾತನಹಳ್ಳಿ ಗ್ರಾಮಕ್ಕೂ ಸಬ್ ಸ್ಟೇಷನ್ ಮಂಜೂರು ಮಾಡಿಸಿಕೊಳ್ಳಬಹುದಾಗಿತ್ತು. ಅದನ್ನು ಬಿಟ್ಟು ಚಿನಕುರಳಿಗೆ ಮಂಜೂರಾಗಿದ್ದ ಠಾಣೆಯನ್ನು ಸ್ಥಳಾಂತರ ಮಾಡಿಸಿ ತಮ್ಮೂರಿಗೆ ತೆಗೆದುಕೊಂಡು ಹೋದರು. ಈಗ ಸ್ಥಳೀಯರು ವಿರೋಧದ ನಡುವೆ ಸೋಲಾರ್ ಪವರ್ ಪ್ಲಾಂಟ್ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತಾಪಿ ವರ್ಗಕ್ಕೆ ಮಾರಕವಾಗಿರುವ ಸೋಲಾರ್ ಪವರ್ ಪ್ಲಾಂಟ್ ಯೋಜನೆ ಅನುಷ್ಠಾನ ಮಾಡಬಾರದು. ಶಾಸಕರು ಇಂತಹ ಉದ್ದಟತನ ಬಿಟ್ಟು ಕ್ಷೇತ್ರದ ಅಭಿವೃದ್ದಿಪಡಿಸಲಿ ಎಂದು ಎಂದು ಒತ್ತಾಯಿಸಿದರು.