ಮುಂದುವರಿದ ಮಳೆಯಿಂದ ರೈತರಿಗೆ ಸಂಕಷ್ಟ

KannadaprabhaNewsNetwork |  
Published : May 27, 2025, 11:53 PM ISTUpdated : May 27, 2025, 11:54 PM IST
ಫೋಟೊ ೧ : ಹೊಳೆನರಸೀಪುರ ತಾಲೂಕಿನಲ್ಲಿ ಸುರಿಯುತ್ತಿರುವ ಜಿಟಿಜಿಟಿ ಮಳೆ ನಿರಂತವಾಗಿ ಮುಂದುವರೆದಿದ್ದು, ಹೊಗೆಸೊಪ್ಪು ನಾಟಿ ಮಾಡಿರುವ ಹೊಲದಲ್ಲಿ ಹೆಚ್ಚು ನೀರು ಸಂಗ್ರಹವಾಗಿ, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ | Kannada Prabha

ಸಾರಾಂಶ

ಹೊಳೆನರಸೀಪುರ ತಾಲೂಕಿನಲ್ಲಿ ಶನಿವಾರದಿಂದ ಬಿಟ್ಟು ಬಿಡದೆ ಮಳೆ ಸುರಿದಿದ್ದು, ಮಂಗಳವಾರ ಬೆಳಗ್ಗೆ ಸ್ವಲ್ವ ಸಮಯ ಬಿಸಿಲಿನ ದರ್ಶನವಾದರೂ ನಂತರ ಮಳೆ ಆರಂಭವಾಗಿದೆ. ಹಗಲು ರಾತ್ರಿ ಬಿಟ್ಟು ಬಿಡದೇ ಬೀಸುತ್ತಿರುವ ಜೋರು ಗಾಳಿ ಮತ್ತು ಮಳೆಗೆ ರೈತರು ಹಾಗೂ ವರ್ತಕರು ಹಾಗೂ ನಾಗರೀಕರು ಎಂದಿನಂತೆ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ತೊಂದರೆಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಸುರಿದ ಮಳೆಗೆ ಚರಂಡಿಗಳು ತುಂಬಿ ರಸ್ತೆ ಮೇಲೆಲ್ಲ ನೀರು ಹರಿದಿದ್ದು, ರೈತರ ಹೊಲಗಳಲ್ಲಿ ನೀರು ನಿಂತಿದ್ದು, ತೇವಾಂಶ ಹೆಚ್ಚಾಗಿ ಹೊಲದಲ್ಲಿ ಕೆಲಸ ಕಾರ್ಯ ಮಾಡಲಾಗದೇ ರೈತರಲ್ಲಿ ನಿರಾಸೆ ಮೂಡಿಸಿದೆ.

ಹೊಳೆನರಸೀಪುರ: ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆ ನಿರಂತವಾಗಿ ಮುಂದುವರಿದಿದ್ದು, ಜೋಳ, ಹೊಗೆಸೊಪ್ಪು ಹಾಗೂ ಇತರೆ ನಾಟಿ ಅಥವಾ ಬಿತ್ತನೆ ಮಾಡಿರುವ ರೈತರು ಹೆಚ್ಚು ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜತೆಗೆ ಮುಂಗಾರು ಬಿತ್ತನೆಗೆ ವರುಣದೇವ ಬಿಡುವು ಕೊಡಬೇಕು, ಸೂರ್ಯದೇವನ ದರ್ಶನವಾಗಬೇಕು ಎಂದು ರೈತರು ಪ್ರಾರ್ಥಿಸುತ್ತಿದ್ದಾರೆ.

ತಾಲೂಕಿನಲ್ಲಿ ಶನಿವಾರದಿಂದ ಬಿಟ್ಟು ಬಿಡದೆ ಮಳೆ ಸುರಿದಿದ್ದು, ಮಂಗಳವಾರ ಬೆಳಗ್ಗೆ ಸ್ವಲ್ವ ಸಮಯ ಬಿಸಿಲಿನ ದರ್ಶನವಾದರೂ ನಂತರ ಮಳೆ ಆರಂಭವಾಗಿದೆ. ಹಗಲು ರಾತ್ರಿ ಬಿಟ್ಟು ಬಿಡದೇ ಬೀಸುತ್ತಿರುವ ಜೋರು ಗಾಳಿ ಮತ್ತು ಮಳೆಗೆ ರೈತರು ಹಾಗೂ ವರ್ತಕರು ಹಾಗೂ ನಾಗರೀಕರು ಎಂದಿನಂತೆ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ತೊಂದರೆಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಸುರಿದ ಮಳೆಗೆ ಚರಂಡಿಗಳು ತುಂಬಿ ರಸ್ತೆ ಮೇಲೆಲ್ಲ ನೀರು ಹರಿದಿದ್ದು, ರೈತರ ಹೊಲಗಳಲ್ಲಿ ನೀರು ನಿಂತಿದ್ದು, ತೇವಾಂಶ ಹೆಚ್ಚಾಗಿ ಹೊಲದಲ್ಲಿ ಕೆಲಸ ಕಾರ್ಯ ಮಾಡಲಾಗದೇ ರೈತರಲ್ಲಿ ನಿರಾಸೆ ಮೂಡಿಸಿದೆ.ಕೆಲ ವರ್ಷಗಳ ಹಿಂದೆ ಮಳೆಗಾಗಿ ಕಾದು ದೇವರ ಮೇಲೆ ನಂಬಿಕೆಯಿಟ್ಟು ಪೂಜೆಗಿಳಿಯುತ್ತಿದ್ದ ರೈತರಿಗೆ ಈ ಬಾರಿ ಪೂರ್ವ ಮುಂಗಾರಿಗೂ ಮೊದಲೇ ಮಳೆ ಸುರಿಯುತ್ತಿದ್ದು, ಬಿತ್ತನೆಗೆ ಸ್ವಲ್ಪ ಹಿನ್ನಡೆಯಾಗುತ್ತಿದೆ. ಹವಾಮಾನ ಇಲಾಖೆ ಮಾಹಿತಿಯಂತೆ ಮಳೆ ಇನ್ನೂ ಹೆಚ್ಚಾಗಲಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಮೂಡಿಸಿದೆ.ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಖರೀದಿಸಿದ ಬಿತ್ತನೆ ಬೀಜಗಳನ್ನು ಮನೆಯಲ್ಲಿ ಹಾಗೆ ಇಟ್ಟಿದ್ದು, ಮಳೆ ಪ್ರಮಾಣ ಹೆಚ್ಚಾಗಿ ಭೂಮಿಯಲ್ಲಿ ಹೆಚ್ಚಿನ ತೇವಾಂಶ ಕಾಣಿಸಿಕೊಂಡಿದ್ದು, ಹೊಲದಲ್ಲಿ ಪಾದ ಇಡಲಾರದಷ್ಟು ಮಳೆ ಸುರಿಯುತ್ತಿದ್ದು, ಸದ್ಯ ಒಂದು ವಾರವರೆಗೆ ಮಳೆ ಬಿಡುವು ಕೊಟ್ಟರೆ ರೈತರ ಮೊಗದಲ್ಲಿ ಮಂದಹಾಸ ಹಾಗೂ ಬಿತ್ತನೆ ಕಾರ್ಯ ಕೈಗೊಳ್ಳಲು ಅನುಕೂಲವಾಗಲಿದೆ.

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ