ನಾಗರ ಪಂಚಮಿ ಮರೆತು ಯೂರಿಯಾ ಖರೀದಿಸಿದ ರೈತರು!

KannadaprabhaNewsNetwork |  
Published : Jul 29, 2025, 01:06 AM IST
ಪೋಟೋಕನಕಗಿರಿಯ ಎಪಿಎಂಸಿಯಲ್ಲಿನ ಅಂಗಡಿಯೊಂದರ ಬಳಿ ಪಂಚಮಿ ಹಬ್ಬ ಮರೆತು ಯೂರಿಯಾ ಖರೀದಿಸುತ್ತಿರುವ ರೈತರು.     | Kannada Prabha

ಸಾರಾಂಶ

ಸೋಮವಾರ ಕನಕಗಿರಿಯಲ್ಲಿ ನಡೆಯುವ ವಾರದ ಸಂತೆಗೆ ಬಂದಿದ್ದ ನೂರಾರು ರೈತರು ತರಕಾರಿ, ಕಿರಾಣಿ ಜತೆಗೆ ಯೂರಿಯಾ ಗೊಬ್ಬರವನ್ನು ಮುಗಿಬಿದ್ದು ಖರೀದಿಸಿದರು. ಕೃಷಿ ಇಲಾಖೆ ಪರವಾನಗಿ ನೀಡಿದ ಮೂರು ಅಂಗಡಿಗಳು ಬೆಳಗ್ಗೆಯಿಂದ ಸಂಜೆ ವರೆಗೂ ರೈತರು ಸರದಿಯಲ್ಲಿ ನಿಂತು ಗೊಬ್ಬರು ಖರೀದಿಸಿದರು.

ಕನಕಗಿರಿ:

ಪಟ್ಟಣದ ಎಪಿಎಂಸಿಯಲ್ಲಿನ ಖಾಸಗಿ ಅಂಗಡಿಯೊಂದರ ಮುಂದೆ ರೈತರು ರಸಗೊಬ್ಬರ ಪಡೆಯಲು ಹರಸಾಹಸಪಟ್ಟರು.

ಸೋಮವಾರ ನಡೆಯುವ ವಾರದ ಸಂತೆಗೆ ಬಂದಿದ್ದ ನೂರಾರು ರೈತರು ತರಕಾರಿ, ಕಿರಾಣಿ ಜತೆಗೆ ಯೂರಿಯಾ ಗೊಬ್ಬರವನ್ನು ಮುಗಿಬಿದ್ದು ಖರೀದಿಸಿದರು. ಕೃಷಿ ಇಲಾಖೆ ಪರವಾನಗಿ ನೀಡಿದ ಮೂರು ಅಂಗಡಿಗಳು ಬೆಳಗ್ಗೆಯಿಂದ ಸಂಜೆ ವರೆಗೂ ರೈತರು ಸರದಿಯಲ್ಲಿ ನಿಂತು ಗೊಬ್ಬರು ಖರೀದಿಸಿದರು. ಗ್ರಾಮೀಣ ಭಾಗದ ರೈತರು ನಾಗರ ಪಂಚಮಿ ಹಬ್ಬ ಮರೆತು ಯೂರಿಯಾ ಖರೀದಿಗೆ ಆಗಮಿಸಿದ್ದರು. ಪ್ರತಿ ಪಹಣಿಗೆ ಎರಡೇ ಚೀಲ ಯೂರಿಯಾ ಕೊಡುತ್ತಿದ್ದರಿಂದ ಹೆಚ್ಚುವರಿ ಭೂಮಿ ಇರುವವರೆಗೆ ಸಮಸ್ಯೆಯಾಗಿದ್ದು, ದೊಡ್ಡ ರೈತರನ್ನು ಗುರುತಿಸಿ ಹೆಚ್ಚುವರಿ ಗೊಬ್ಬರ ವಿತರಿಸಬೇಕೆಂದು ಕೃಷಿ ಇಲಾಖೆಗೆ ರೈತರು ಆಗ್ರಹಿಸಿದ್ದಾರೆ.

ಅಗತ್ಯಕ್ಕೆ ತಕ್ಕಂತೆ ಯೂರಿಯಾ ಗೊಬ್ಬರ ಬಂದಿದ್ದು, ರೈತರು ಅವಶ್ಯವಿದ್ದಷ್ಟು ಮಾತ್ರ ಗೊಬ್ಬರ ಖರೀದಿಸಬೇಕು. ಯೂರಿಯಾ ಭೂಮಿಯ ಫಲವತ್ತತೆ ಮತ್ತು ಪರಿಸರಕ್ಕೆ ಹಾನಿಕಾರವಾಗಿದೆ. ನ್ಯಾನೋ ಬಳಸಿ ಪರಿಸರ ಉಳಿಸಲು ರೈತರು ಸಹಕರಿಸಬೇಕು ಎಂದು ಗಂಗಾವತಿಯ ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ಲು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ