ರಾಯಚೂರು: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರಿಗೆ ವಿಮೆ ಹಣ ಪಾವತಿಸಬೇಕು ಎಂದು ದೇವದುರ್ಗ ತಾಲೂಕಿನ ವಂದಲಿ ಗ್ರಾಮದ ರೈತರು ಒತ್ತಾಯಿಸಿದರು.
ಆದರೆ, ಪಲಕನಮರಡಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರದೇಶವು ನೀರಾವರಿಗೊಳಪಟ್ಟಿರುವುದಿಲ್ಲ. ಮಳೆಯಾಧಾರಿತ ಕೃಷಿ ಜಮೀನುಗಳಾಗಿರುತ್ತವೆ. ರೈತರು ಮಳೆ ಬಾರದೇ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಸಮಸ್ಯೆ ವಿವರಿಸಿದರು.
ಕೂಡಲೇ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆ ಹಣವನ್ನು ರೈತರ ಖಾತೆಗೆ ಸಮಾ ಮಾಡಲು ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.ವಂದಲಿ ಗ್ರಾಪಂ ಸದಸ್ಯ ವೀರೇಶಗೌಡ, ರೈತರಾದ ಭೀಮನಗೌಡ ಪೊಲೀಸ್ ಪಾಟೀಲ್, ನಾಗರಾಜ ತೋಟದ, ಗೌಡರೆಡ್ಡಪ್ಪಗೌಡ, ಕೆ.ಸಂಗನಗೌಡ, ಭೀಮಣ್ಣ ಗೆಜ್ಜಲಗಟ್ಟಿಮ ಆದನಗೌಡಮ ಸಿದ್ದಪ್ಪ ಎ ರೆಡ್ಡಿ, ರುದ್ರಪ್ಪ ಬೊಂಬಾಯಿ, ಶಿವಪ್ಪ ತಳವಾರ, ರಂಗಣ್ಣ ಮಡಿವಾಳ, ರಾಜಶೇಖರ, ಅಮರೇಶ ಬೋರೆಡ್ಡಿ ಹಾಗೂ ಮತ್ತಿತರರಿದ್ದರು.