ಸೂರ್ಯಕಾಂತಿ ಖರೀದಿ ಕೇಂದ್ರ ಉದ್ಘಾಟನೆ
ಕೃಷಿ ಬದುಕಿನಿಂದ ರೈತರು ದೂರವಾಗುತ್ತಿದ್ದು ಮುಂದಿನ ದಿನಗಳಲ್ಲಿ ಜನರು ಆಹಾರಕ್ಕೆ ಪರದಾಡಬೇಕಾದ ಸ್ಥಿತಿ ದೂರವಿಲ್ಲ ಎಂದು ಶಾಸಕ ಕೆ.ಎಸ್. ಆನಂದ್ ಆತಂಕ ವ್ಯಕ್ತಪಡಿಸಿದರು.
ಕಡೂರು ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಕಡೂರಿನಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾ ಮಟ್ಟದ ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭಿಸಿ ಸುಮಾರು 1 ಸಾವಿರ ಕ್ವಿಂಟಾಲ್ ಸೂರ್ಯಕಾಂತಿ ಖರೀದಿ ಉದ್ದೇಶ ಹೊಂದಲಾಗಿದೆ. ಮಾರುಕಟ್ಟೆಯಲ್ಲಿ ₹4300 ಇರುವ ಸೂರ್ಯಕಾಂತಿಗೆ ಸರ್ಕಾರ ಬೆಂಬಲ ಬೆಲೆಯಲ್ಲಿ ಕ್ವಿಂಟಾಲಿಗೆ ₹7590 ನಿಗದಿ ಮಾಡಿ ರೈತರನ್ನು ಪ್ರೋತ್ಸಾಹಿಸುತ್ತಿದೆ ಎಂದರು.ಸೂರ್ಯಕಾಂತಿ, ಎಳ್ಳು, ನೆಲಗಡಲೆಗೆ ರೈತರು ತುಂಬಾ ಅವಲಂಬಿತರಾಗಿ ಬೆಳೆಯುತ್ತಿದ್ದರು. ಆದರೆ ಇದೀಗ ರೈತರು ಅಡಕೆ, ತೆಂಗು ಮಾಡುವ ಮೂಲಕ ಆಹಾರ ಪದಾರ್ಥಗಳು ಎಣ್ಣೆ ಕಾಳಿನ ಬೆಳೆ ಬೆಳೆಯುವುದು ಕಡಿಮೆಯಾಗಿದೆ. ಸರ್ಕಾರ ಮಾರುಕಟ್ಟೆ ಮತ್ತು ರೈತರನ್ನು ಪ್ರೋತ್ಸಾಹಿಸಲು ಖರೀದಿ ಕೇಂದ್ರ ಆರಂಭಿಸಲಾಗಿದೆ. ರೈತರ ಎಲ್ಲ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಬೇಕಾಗಿದೆ. ಟೊಮೇಟೊ ಮತ್ತು ಈರುಳ್ಳಿ ಅದೃಷ್ಟದ ಬೆಳೆ. ದೇಶ ಮುಂದುವರಿದಿದ್ದರೂ ರೈತರಿಗೆ ಸವಲತ್ತು ಕೊಡುವಲ್ಲಿ ಸರ್ಕಾರಗಳು ವಿಫಲವಾಗಿವೆ.ಅಭಿವೃದ್ಧಿ ಶೀಲ ರಾಷ್ಟ್ರಗಳಂತೆ ನಮ್ಮ ರೈತರಿಗೆ ಮಾರ್ಗ ದರ್ಶನ ಬೇಕಾಗಿದೆ ಎಂದರು.
ಪ್ರಗತಿಪರ ಸಂಘದ ಅಧ್ಯಕ್ಷ ಬಳ್ಳೇಕೆರೆ ವಿಶ್ವನಾಥ್ ಮಾತನಾಡಿ, ಕಡೂರಿನಲ್ಲಿ ಸೂರ್ಯಕಾಂತಿ ಖರೀದಿಗೆ ಸುಮಾರು 88 ರೈತರು ನೋಂದಾಯಿಸಿದ್ದು, ಅ. 7ರಿಂದ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ. ಸೂರ್ಯಕಾಂತಿ ಬೆಳೆ ಇಳುವರಿ ಕಡಿಮೆಯಾಗುತ್ತಿದ್ದು ಯಾವುದೇ ಮಾಲನ್ನು ರಿಜೆಕ್ಟ್ ಮಾಡದೆ ಖರೀದಿಸುವಂತೆ ಶಾಸಕರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇದು ರೈತರ ಪರವಿರುವ ಕಾಳಜಿಯಾಗಿದ್ದು ರೈತರ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಪಿಕಾರ್ಡ್ ಬ್ಯಾಂಕಿನ ಮಾಜಿ ಅಧ್ಯಕ್ಷ ಡಿ.ಎಸ್. ಉಮೇಶ್ ಮಾತನಾಡಿ, ಶಾಸಕರ ಕಾಳಜಿಯಿಂದ ಇಂದು ಖರೀದಿ ಕೇಂದ್ರ ಆರಂಭವಾಗುತ್ತಿದ್ದು, ರೈತರಿಗೆ ಯಾವುದೇ ವಿಷಯದಲ್ಲಿ ಅನ್ಯಾಯವಾಗದಂತೆ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.
-- ಬಾಕ್ಸ್---ಎಪಿಎಂಸಿ ಅಧಿಕಾರಿಗೆ ಸೂಚನೆ
1ಕೆ ಕೆ ಡಿಯು2.