ಬಂಡಿದಾರಿಯಲ್ಲಿ ರಸ್ತೆ ನಿರ್ಮಾಣಕ್ಕೆ ರೈತರ ವಿರೋಧ

KannadaprabhaNewsNetwork |  
Published : Feb 17, 2026, 01:30 AM IST
16ಕೆಎಂಎನ್‌ಡಿ-7ನಾಲಾ ರಸ್ತೆ ಬಿಟ್ಟು ಬಂಡಿ ದಾರಿಯಲ್ಲಿ ರಸ್ತೆ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ಮಂಡ್ಯ ತಾಲೂಕು ಬೇವಿನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಬಂಡಿ ದಾರಿಯಲ್ಲಿ ರಸ್ತೆ ಮಾಡುತ್ತಿರುವುದನ್ನು ವಿರೋಧಿಸಿ ಮಂಡ್ಯ ತಾಲೂಕಿನ ಬೇವಿನಹಳ್ಳಿ ಗ್ರಾಮಸ್ಥರು ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದರು. ನಾಲಾ ರಸ್ತೆ ವಸತಿ ಗೃಹದ ಪಶ್ಚಿಮಕ್ಕೆ 40 ಕೊಂಡಿ ಚೈನ್ ಇರುತ್ತದೆ. ಇದು ಉತ್ತರ-ದಕ್ಷಿಣವಾಗಿರವ ನಾಲಾ ರಸ್ತೆಯನ್ನು ಒತ್ತುವರಿಯಾಗಿರುವುದನ್ನು ಬಿಡಿಸಿ ರಸ್ತೆ ಅಭಿವೃದ್ಧಿ ಮಾಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಬಂಡಿ ದಾರಿಯಲ್ಲಿ ರಸ್ತೆ ಮಾಡುತ್ತಿರುವುದನ್ನು ವಿರೋಧಿಸಿ ತಾಲೂಕಿನ ಬೇವಿನಹಳ್ಳಿ ಗ್ರಾಮಸ್ಥರು ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದರು.

ಬೇವಿನಹಳ್ಳಿ ಗ್ರಾಮದ ಸರ್ವೇ ನಂ.163ರಲ್ಲಿ ಒಟ್ಟು 4 ಎಕರೆ 0.26 ಗುಂಟೆ ಜಮೀನಿದ್ದು, ಇದರಲ್ಲಿ 163/1ರಲ್ಲಿ 1 ಎಕರೆ 0.14ಗುಂಟೆ ಜಮೀನು ನಕ್ಷೆಯಾಗಿದ್ದು, ಅದರಂತೆ ಖಾತೆಯಾಗಿ ಅನುಭವದಲ್ಲಿರುತ್ತೇವೆ. ಈ ಜಮೀನು ನಮಗೆ ಪಿತ್ರಾರ್ಜಿತವಾಗಿ ಬಂದಿದ್ದು, ಉತ್ತರ ಭಾಗಕ್ಕೆ ಬಂಡಿ ದಾರಿ ಇದೆ. (ಪೂರ್ವ-ಪಶ್ಮಿಮವಾಗಿ) ಆದರೆ, ಈಗ ನ್ಯಾಯಾಧೀಶರ ವಸತಿ ಗೃಹಗಳು ನಿರ್ಮಾಣವಾಗಿದ್ದು, ಅದಕ್ಕೆ ಸಂಬಂಧಪಟ್ಟಂತೆ ಪಶ್ಚಿಮದ ಕಡೆಗೆ ನಾಲಾ ರಸ್ತೆ ಮತ್ತು ಉತ್ತರದ ಕಡೆ ನಾಲಾ ರಸ್ತೆ ಇರುತ್ತದೆ. ಆದರೆ, ಸಣ್ಣ ನೀರಾವರಿ ಇಲಾಖೆಯವರು ನಾಲಾ ರಸ್ತೆಯನ್ನೇ ಅಭಿವೃದ್ಧಿಪಡಿಸದೆ ನಮ್ಮ ಜಮೀನಿನಲ್ಲಿ ನಾವು ಬಿಟ್ಟಿರುವ ಬಂಡಿ ದಾರಿಯನ್ನು ಅಕ್ರಮವಾಗಿ ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಸಣ್ಣ ನೀರಾವರಿ ಇಲಾಖೆಯಲ್ಲಿ ನಾಲಾ ನಕ್ಷೆಯನ್ನು ಪರಿಶೀಲಿಸದೆ ನಾಲಾ ರಸ್ತೆ ಬದಲಾಯಿಸಿ ನಮ್ಮ ಬಂಡಿದಾರಿಯಲ್ಲಿ ರಸ್ತೆ ಮಾಡುತ್ತಿರುವುದನ್ನು ನಿಲ್ಲಿಸಿ, ನಾಲಾ ರಸ್ತೆ ಎಂದು ನಕ್ಷೆಯಲ್ಲಿ ನಮೂದಾಗಿರುವಂತೆ ಸರ್ವೇ ಮಾಡಿಸಿ, ನಂತರ ನಾಲಾ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡುವಂತೆ ಒತ್ತಾಯಿಸಿದರಲ್ಲದೇ, ಅಲ್ಲಿಯವರೆಗೆ ಈ ಬಂಡಿದಾರಿಯನ್ನು ರಸ್ತೆಯನ್ನಾಗಿ ಮಾಡಬಾರದು ಎಂದು ಆಗ್ರಹಿಸಿದ್ದಾರೆ.

ನಾಲಾ ರಸ್ತೆ ವಸತಿ ಗೃಹದ ಪಶ್ಚಿಮಕ್ಕೆ 40 ಕೊಂಡಿ ಚೈನ್ ಇರುತ್ತದೆ. ಇದು ಉತ್ತರ-ದಕ್ಷಿಣವಾಗಿರವ ನಾಲಾ ರಸ್ತೆಯನ್ನು ಒತ್ತುವರಿಯಾಗಿರುವುದನ್ನು ಬಿಡಿಸಿ ರಸ್ತೆ ಅಭಿವೃದ್ಧಿ ಮಾಡಬೇಕು ಎಂದು ಒತ್ತಾಯಿಸಿ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.

ಗ್ರಾಮದ ಮುಖಂಡರಾದ ನಾರಾಯಣಚಾರಿ ಬಿ.ಕೆ., ಚಿನ್ನಸ್ವಾಮಿ, ಬಿ.ವಿ.ಸೋಮು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಲಾ ಹಂತದಲ್ಲೇ ಮಕ್ಕಳನ್ನು ದಂಡಿಸದಿದ್ದರೆ ಅಪಾಯ: ನಿಶ್ಚಲಾನಂದನಾಥ ಸ್ವಾಮೀಜಿ
ಜಾತ್ರೆ: ಎಸ್‌ಪಿ ನೇತೃತ್ವದಲ್ಲಿ ಜನಜಾಗೃತಿ ಪಥ ಸಂಚಲನ