ಕನ್ನಡಪ್ರಭ ವಾರ್ತೆ ಹನೂರು
ವಿವಿಧ ಗೋಶಾಲೆಗಳಲ್ಲಿ ಕಳೆದ ಒಂದು ವಾರದಿಂದ ಜಾನುವಾರುಗಳಿಗೆ ಮೇವು ವಿತರಿಸಿಲ್ಲ ಎಂದು ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹನೂರು ತಾಲೂಕಿನ ಎಂಟಿ ದೊಡ್ಡಿ ಕೆವಿಎನ್ ದೊಡ್ಡಿ ಗ್ರಾಮಗಳಲ್ಲಿ ತೆರೆಯಲಾಗಿರುವ ಎರಡು ಗೋಶಾಲೆಯಲ್ಲಿ ಕಳೆದ ಒಂದು ವಾರದಿಂದ ಮೇವು ವಿತರಿಸಿಲ್ಲ, ಜಾನುವಾರುಗಳು ಏನಾಗಬೇಕು ಇತ್ತ ಮಳೆ ಇಲ್ಲ ಮೇವು ಇಲ್ಲ. ನೀರಿಗೆ ಸಹ ಜಾನುವಾರುಗಳು ಪರದಾಡುತ್ತಿದೆ ಎಂದು ರೈತರು ಕಳೆದ ಒಂದು ವಾರದಿಂದ ಗೋಶಾಲೆಯಲ್ಲಿ ಜಾನುವಾರುಗಳನ್ನು ಕಟ್ಟಿ ಹಾಕಿ ಮೇವಿಗಾಗಿ ಕಾಯುತ್ತಿದ್ದೇವೆ ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಕೂಡಲೇ ನೀವು ಸರಬರಾಜು ಮಾಡುವಂತೆ ಒತ್ತಾಯಿಸಿದ್ದಾರೆ. ಎಂಪಿ ದೊಡ್ಡಿ ರೈತ ಮುಖಂಡ ವೆಂಕಟಪ್ಪ ಮಾತನಾಡಿ, ಗೋಶಾಲೆ ತೆರೆದು ಏಪ್ರಿಲ್ 19 ರಿಂದ 25ರವರೆಗೆ ಮೇವು ನೀಡಿದ್ದಾರೆ. ಗೋವುಗಳಿಗೆ ಕೆವಿಎಂ ದೊಡ್ಡಿ ಹಾಗೂ ಎಂಟಿ ದೊಡ್ಡಿ ಎರಡು ಗ್ರಾಮಗಳಿಂದ 1250ಕ್ಕೂ ಹೆಚ್ಚು ದೇಶಿ ತಳಿಯ ಜಾನುವಾರುಗಳು ಇವೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಜಾನುವಾರುಗಳಿಗೆ ಮೇವು ಸರಬರಾಜು ಮಾಡಿ ಇಲ್ಲಂದರೆ ನಾವು ಏನು ಮಾಡಬೇಕು ಬೇರಡೆ ಹೋಗಬೇಕಾ ಅಥವಾ ಇಲ್ಲೇ ಇರಬೇಕಾ ಎಂಬ ಗೊಂದಲದಲ್ಲಿ ಇದ್ದೇವೆ. ಹೀಗಾಗಿ ಸಂಬಂಧಪಟ್ಟ ಚಾಮರಾಜನಗರ ಜಿಲ್ಲಾ ಅಧಿಕಾರಿ ಹಾಗೂ ಪಶುಸಂಗೋಪನ ಇಲಾಖೆ ಹಿರಿಯ ಅಧಿಕಾರಿಗಳು ಕೂಡಲೇ ಈ ಗ್ರಾಮಗಳ ಗೋಶಾಲೆಗಳಿಗೆ ತುರ್ತಾಗಿ ಮೇವು ಸರಬರಾಜು ಮಾಡಿ ಇಲ್ಲದಿದ್ದರೆ ಗೋವುಗಳು ಮೇವು ಇಲ್ಲದೆ ಸಾವನ್ನಪ್ಪುವ ಸ್ಥಿತಿಗೆ ಬಂದಿವೆ. ಹೀಗಾಗಿ ತುರ್ತಾಗಿ ಜಾನುವಾರುಗಳಿಗೆ ಮೇವು ವಿತರಿಸುವಂತೆ ಒತ್ತಾಯಿಸಿದರು. ರೈತ ಗುರುಮಲ್ಲಪ್ಪ ಮಾತನಾಡಿ, ಸರ್ಕಾರ ಬರ ಪರಿಹಾರ ಯೋಜನೆ ಅಡಿ ವಿವಿಧ ಗ್ರಾಮಗಳಲ್ಲಿ ತೆರೆದು ಇರುವ ಜಾನುವಾರುಗಳಿಗೆ ಅನುಗುಣವಾಗಿ ಮೇವು ವಿತರಿಸಲಾಗುತ್ತಿತ್ತು ಚುನಾವಣೆ ಇದ್ದ ಕಾರಣ ಅಧಿಕಾರಿಗಳು ಮೇವು ವಿತರಿಸುವುದನ್ನು ನಿಲ್ಲಿಸಿದ್ದಾರೆ ಹೀಗಾಗಿ ಚುನಾವಣೆ ಬಂದರೆ ಮನುಷ್ಯರಾಗಿ ನಾವು ಊಟ ಮಾಡುವುದಿಲ್ಲವೇ ಚುನಾವಣೆ ಮುಗಿದ ನಂತರ ನಾವು ಊಟ ಮಾಡುತ್ತೇವೆ ಎಂದು ಪ್ರಶ್ನೆ ಹಾಕುವ ಮೂಲಕ ಅಧಿಕಾರಿಗಳಿಗೆ ಕೂಡಲೇ ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು ಗೋಶಾಲೆಗಳಲ್ಲಿ ಜಾನುವಾರುಗಳು ಬರಬಿಸಿಲಿನಲ್ಲಿ ಮೇವು ಇಲ್ಲದೆ ಸಾಯುವ ಸ್ಥಿತಿ ತಲುಪಿದೆ ಹೀಗಾಗಿ ಇರುವ ಜಾನುವಾರುಗಳನ್ನು ಉಳಿಸಿಕೊಳ್ಳಲು ಕೂಡಲೇ ಮಾಡುವಂತೆ ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ರೈತ ಮುಖಂಡರಾದ ರಾಜು ಮುನಿಸ್ವಾಮಿಗೌಡ ಗುರುಮಲ್ಲಪ್ಪ ಶ್ರೀನಿವಾಸ್ ರಂಗಪ್ಪ ಶಾಂತಕುಮಾರ್ ಮನಿಸ್ವಾಮಿ ಇನ್ನಿತರ ರೈತರು ಇದ್ದರು.
ಚುನಾವಣೆ ಇದ್ದ ಕಾರಣ ಗೋಶಾಲೆಗಳಿಗೆ ಮೇವು ಸರಬರಾಜ ಆಗುವುದು ಸ್ಥಗಿತಗೊಂಡಿತ್ತು ಚುನಾವಣೆ ಮುಗಿದ ನಂತರ ಬೇರೆ ಜಿಲ್ಲೆಯಿಂದ ತಾಲೂಕಿಗೆ ನೀವು ಸರಬರಾಜು ಮಾಡುವುದು ವಿಳಂಬವಾಗುತ್ತಿದೆ ಹೀಗಾಗಿ ತಾಲೂಕಿನ ಗೋಶಾಲೆಗಳಿಗೆ ಮೇವು ವಿತ್ತರಿಸಲು ಕ್ರಮ ಕೈಗೊಳ್ಳಲಾಗಿದೆ ಇಂದು ಎಂ ಟಿ ದೊಡ್ಡಿ ಕೆವಿಎಂ ದೊಡ್ಡಿ ಗ್ರಾಮಕ್ಕೆ ಮೇವು ವಿತರಿಸಲಾಗುವುದು ಸಿದ್ದರಾಜು ತಾಲೂಕು ಪಶು ವೈದ್ಯಾಧಿಕಾರಿ