ಹೂವಿನಹಡಗಲಿ: ಸಿಂಗಟಾಲೂರು ಬ್ಯಾರೇಜ್ ಹಿನ್ನೀರಿನಲ್ಲಿ ರೈತರು ನದಿ ನೀರು ಬಳಸಿ ಭತ್ತ ನಾಟಿ ಮಾಡುವಂತಿಲ್ಲ ಎಂಬ ಜಿಲ್ಲಾಡಳಿತ ಕ್ರಮಕ್ಕೆ ರೈತರಿಂದ ಆಕ್ರೋಶ ವ್ಯಕ್ತವಾಗಿದೆ.
ಸಿಂಗಟಾಲೂರು ಬ್ಯಾರೇಜ್ ಹಿನ್ನೀರಿನಲ್ಲಿ ಬಹು ಗ್ರಾಮ ಕುಡಿವ ನೀರಿನ ಯೋಜನೆ, ಹೂವಿನಹಡಗಲಿ ತಾಲೂಕಿನಲ್ಲಿ ಕಡಿಮೆ ಇವೆ, ಆದರೆ ಹಾವೇರಿ, ಗದಗ, ಶಿರಹಟ್ಟಿ, ಲಕ್ಷ್ಮೇಶ್ವರ ಸೇರಿದಂತೆ ಒಂದೇ ಪಂಪ್‌ಹೌಸ್‌ನಿಂದ 150ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರು ಪೂರೈಕೆಯಾಗುತ್ತಿದೆ. ಮೊದಲು ಆ ಭಾಗಕ್ಕೆ ಕುಡಿವ ನೀರಿನ ಸಮಸ್ಯೆ ಉಂಟಾಗಲಿದೆ. ಇದನ್ನು ಅಧಿಕಾರಿಗಳು ಅರಿತುಕೊಳ್ಳಬೇಕಿದೆ. ಬರಕ್ಕೆ ಕಂಗೆಟ್ಟು ಹೋಗಿದ್ದೇವೆ. ನಮ್ಮ ನೋವನ್ನು ಆಲಿಸುವವರಿಲ್ಲ, ಭತ್ತ ಬೆಳೆಯದಂತೆ ಆದೇಶ ಎಲ್ಲ ಕಡೆಗೂ ಆಗಬೇಕು ಇಲ್ಲದಿದ್ದರೇ ನಾವು ಹೋರಾಟ ಹಮ್ಮಿಕೊಳ್ಳುತ್ತೇವೆಂದು ಎಚ್ಚರಿಕೆ ನೀಡಿದರು.
ಕೃಷಿ ಕ್ಷೇತ್ರಕ್ಕೆ ನದಿ ನೀರನ್ನು ರೈತರಿಗೆ ನೀಡುತ್ತಿಲ್ಲ, ಇದರ ಜತೆಗೆ ಕೈಗಾರಿಕೆಗಳಿಗೂ ನದಿ ನೀರು ಕೊಡಬಾರದು, ಹಾವೇರಿ, ಗದಗ ಜಿಲ್ಲೆಯ ಜಿಲ್ಲಾಧಿಕಾರಿಗಳು ಕೂಡಲೇ ನದಿ ನೀರಿನ ಬಳಕೆ ಬಗ್ಗೆ ಸ್ಪಷ್ಟನೆ ನೀಡಿ ಆದೇಶ ಹೊರಡಿಸಬೇಕು, ಇಲ್ಲವಾದರೇ ವಾರದೊಳಗೆ ವಿಜಯನಗರ ಜಿಲ್ಲೆಯಲ್ಲಿ ಭತ್ತದ ನಾಟಿ ಮಾಡುತ್ತೇವೆ ಎಂದು ಮಕರಬ್ಬಿ ಗ್ರಾಮಸ್ಥರು ಹೇಳಿದರು.ಈ ವೇಳೆ ತಾಪಂ ಇಒ ಜಿ. ಪರಮೇಶ್ವರ, ಪಿಡಿಒ ಬಸಲಿಂಗಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.