ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡದ ಜೆಸ್ಕಾಂ ಅಧಿಕಾರಿಗಳ ವಿರುದ್ಧ ತಾಲೂಕಿನ ಬ್ಯಾಲಾಳು, ದಶಮಾಪುರ ವಿದ್ಯುತ್ ಉಪಕೇಂದ್ರ ವ್ಯಾಪ್ತಿಯ ರೈತರು ಜೆಸ್ಕಾಂ ಕಚೇರಿ ಮುಂಭಾಗ ಧರಣಿ ನಡೆಸಿದರು.
ಹಗರಿಬೊಮ್ಮನಹಳ್ಳಿ: ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡದ ಜೆಸ್ಕಾಂ ಅಧಿಕಾರಿಗಳ ವಿರುದ್ಧ ತಾಲೂಕಿನ ಬ್ಯಾಲಾಳು, ದಶಮಾಪುರ ವಿದ್ಯುತ್ ಉಪಕೇಂದ್ರ ವ್ಯಾಪ್ತಿಯ ರೈತರು ಜೆಸ್ಕಾಂ ಕಚೇರಿ ಮುಂಭಾಗ ಧರಣಿ ನಡೆಸಿದರು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕೆ. ಸಿದ್ದನಗೌಡ ಮಾತನಾಡಿ, ರೈತರ ಬೆಳೆ ನಷ್ಟವಾದರೆ ಜೆಸ್ಕಾಂ ಇಲಾಖೆ ಪರಿಹಾರ ಭರಿಸಬೇಕಾಗುತ್ತದೆ. ಕಳೆದ 20 ದಿನಗಳಿಂದಲೂ ತಾಲೂಕಿನ ಕೆಚ್ಚಿನಬಂಡಿ, ಬ್ಯಾಲಾಳು, ಆನಂದೇವನಹಳ್ಳಿ, ಓಬಳಾಪುರ, ಕಾತ್ಯಾಯಿನಿಮರಡಿ ಗ್ರಾಮಗಳಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿದೆ. ತ್ವರಿತವಾಗಿ ಅಗತ್ಯ ಪರಿಹಾರ ಕ್ರಮ ಕೈಗೊಳ್ಳುವ ಅಧಿಕಾರಗಳ ಭರವಸೆ ಹುಸಿಯಾಗಿದೆ. 7 ತಾಸು ವಿದ್ಯುತ್‌ನಲ್ಲಿ ಕೇವಲ 5 ತಾಸು ವಿದ್ಯುತ್ ಮಾತ್ರ ಪೂರೈಕೆಯಾಗುತ್ತಿದೆ. ಇದರಿಂದ ರೈತರ ಬೆಳೆಗಳು ಒಣಗಲು ಆರಂಭಿಸಿವೆ. ಕೂಡಲೇ ಅಗತ್ಯ ಕ್ರಮವಹಿಸಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಕುರಿತು ಜೆಸ್ಕಾಂ ಎಇಇ ನಾಗರಾಜ ಕುರೆಕೊಪ್ಪ ಪ್ರತಿಕ್ರಿಯಿಸಿ, ದಶಮಾಪುರ ವಿದ್ಯುತ್ ಉಪಕೇಂದ್ರದಲ್ಲಿನ ಸಮಸ್ಯೆಯನ್ನು ರೈತರ ಬೆಳೆ ತೆರವುಗೊಂಡ ಬಳಿಕ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ಇಟಿಗಿ 220 ಕೆ.ವಿ. ಕೇಂದ್ರದಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಓವರ್ ಲೋಡ್‌ನಿಂದಾಗಿ ಸಮಸ್ಯೆಯಾಗಿದ್ದು, ಪರಿಹಾರಕ್ಕೆ ಪೂರಕ ಕ್ರಮ ಕೈಗೆತ್ತಿಕೊಳ್ಳಲಾಗಿದೆ. ನಿತ್ಯವೂ ಕನಿಷ್ಠ 7 ತಾಸು ವಿದ್ಯುತ್ ಪೂರೈಸಲಾಗುವುದು.
ರೈತರ ಬೆಳೆ ರಾಜ್ಯ ರೈತ ಸಂಘದ ಎಂ. ಕೊಟ್ರಗೌಡ, ಮಂಜುನಾಥಗೌಡ, ಬಸವನಗೌಡ, ವೀರಣ್ಣ, ಬಿ.ಮಂಜುನಾಥಗೌಡ, ಕೊಟ್ರದೇವ್ರು, ಎಂ. ಚನ್ನಪ್ಪ, ದಿವಾಕರಗೌಡ, ನಾಗರಾಜ, ಗಡಿಹಳ್ಳಿ ಚನ್ನಪ್ಪ, ಎ. ಹನುಮಂತಪ್ಪ, ಕೋಡಿಹಳ್ಳಿ ಮಂಜುನಾಥ, ಕೆಂಚಪ್ಪ, ಹುಲಿಗೇಶ, ರಮೇಶ್, ಕೆ.ಮಂಜುನಾಥ, ಪ್ರಕಾಶ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.