ಕನ್ನಡಪ್ರಭ ವಾರ್ತೆ ಆನಂದಪುರ ಅನಿಯಮಿತ ವಿದ್ಯುತ್ ಪೂರೈಕೆಯಿಂದಾಗಿ ಕೊಳವೆಬಾವಿ ಮತ್ತು ತೆರೆದ ಬಾವಿಗಳನ್ನು ಅವಲಂಬಿಸಿರುವ ರೈತರು ಸಮರ್ಪಕವಾಗಿ ಬಳಸಿ ನೀರು ತೆಗೆಯಲು ಹರಸಾಹಸ ಪಡುತ್ತಿದ್ದಾರೆ ಎಂದು ರೈತ ಸಂಘದ ಅಧ್ಯಕ್ಷ ಎಚ್.ಕೃಷ್ಣಮೂರ್ತಿ ದಾಸನ್ ತಿಳಿಸಿದರು.
ಈ ಬಾರಿ ಮಳೆ ಇಲ್ಲದೆ ರೈತರು ಸಂಕಷ್ಟ ಪಡುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಅಡಿಕೆ, ತೆಂಗು, ಬಾಳೆ, ಶುಂಠಿ, ಜೋಳ ಸೇರಿದಂತೆ ಅನೇಕ ಬೆಳೆಗಳಿಗೆ ನಷ್ಟ ಅನುಭವಿ ಸುವ ಸ್ಥಿತಿ ನಿರ್ಮಾಣವಾಗಿದೆ. ಮೆಸ್ಕಾಂ ಅಧಿಕಾರಿಗಳು ಗೌತಮಪುರ, ಜಂಬೂರ್ ಮನೆ, ಚನ್ನಶೆಟ್ಟಿ ಕೊಪ್ಪ ಗ್ರಾಮದ ರೈತರಿಗೆ ಪ್ರತಿದಿನ 7 ತಾಸು 3 ಫೇಸ್ ವಿದ್ಯುತ್ ನೀಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮೆಸ್ಕಾಂ ಜೂನಿಯರ್ ಎಂಜಿನಿಯರ್ ಯೋಗೇಂದ್ರಪ್ಪ ಇದ್ದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಪ್ರಕಾಶ್ ಹುಗಳಿಮಕ್ಕಿ, ಕಾರ್ಯದರ್ಶಿ ಸಂತೋಷ್, ವಾಸು, ಸುರೇಶ್ ಟಾಕಪ್ಪ, ಮಂಜಪ್ಪ, ಹೊಳೆಯಪ್ಪ ಮತ್ತಿತರರು ಇದ್ದರು.ಆನಂದಪುರ ಮೆಸ್ಕಾಂ ಕಚೇರಿಯ ಎದುರು ಮಂಗಳವಾರ ಸರ್ಕಾರ ನೀಡುತ್ತಿರುವ ಅಸಮರ್ಪಕ ವಿದ್ಯುತ್ ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದರು.