ಕನ್ನಡಪ್ರಭ ವಾರ್ತೆ ಮುಂಡಗೋಡ
ಬೆಕ್ಕೋಡ್-ಜಳಗೇರಿ ರಸ್ತೆ ಗುದ್ದಲಿ ಪೂಜೆ ನೆರವೇರಿಸಿ ೬ ತಿಂಗಳು ಕಳೆದರೂ ಕೆಲಸ ಪ್ರಾರಂಭಿಸಿಲ್ಲ. ಇದರಿಂದ ಸಾರ್ವಜನಿಕರು ಮತ್ತು ವಾಹನ ಸಂಚಾರಕ್ಕೆ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಸಂಬಂಧಿಸಿದವರಿಗೆ ತಿಳಿಸಿದರೂ ಏನು ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ತಕ್ಷಣ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಬೇಕೆಂದು ಪಟ್ಟುಹಿಡಿದರು. ಬಳಿಕ ಸ್ಥಳಕ್ಕಾಗಮಿಸಿದ ಮುಂಡಗೋಡ ತಹಸೀಲ್ದಾರ ಶಂಕರ ಗೌಡಿ ಹಾಗೂ ಜಿಪಂ ಎಂಜಿನಿಯರ್ ಗುತ್ತಿಗೆದಾರರು ಒಂದು ವಾರದೊಳಗಾಗಿ ಕಾಮಗಾರಿ ಪ್ರಾರಂಭಿಸಿ ಶೀಘ್ರವಾಗಿ ಮುಗಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಬಗ್ಗೆ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.ರೈತರಿಂದ ಮನವಿ:
ಗೊಬ್ಬರ ಪಡೆಯಲು ರೈತರಿಗೆ ಎಪ್.ಐ.ಡಿ ಕಡ್ಡಾಯ ಮಾಡಲಾಗಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಇದನ್ನು ತಕ್ಷಣ ರದ್ದು ಮಾಡಬೇಕಲ್ಲದೇ, ಖಾಸಗಿ ಕಂಪನಿಗಳಿಗೆ ಉತ್ತರಕನ್ನಡ ಸೇರಿದಂತೆ ೧೫ ಜಿಲ್ಲೆಗಳ ವಿದ್ಯುತ್ ಗುತ್ತಿಗೆ ನೀಡಲಾಗುತ್ತಿದೆ ಇದನ್ನು ಕೂಡ ರದ್ದುಪಡಿಸಬೇಕೆಂದು ಇದೇ ಸಂದರ್ಭ ರೈತರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಶಂಕ್ರಪ್ಪ ಗಾಣಿಗ, ಪ್ರಮೋದ ಜಕ್ಲಣ್ಣನವರ, ನಾಗರಾಜ ಡಾಂಗೆ, ನೆಹರು ನಾಯ್ಕ, ರಾಮು ನಾಯ್ಕ, ಜಯದೇವ ನಾಯ್ಕ, ವಿಜಯ ನಾಯ್ಕ, ಶಿವಾಜಿ ನಾಯ್ಕ ಮುಂತಾದವರಿದ್ದರು.