ಕನ್ನಡಪ್ರಭ ವಾರ್ತೆ ಕಲಾದಗಿ
ಕಳಸಕೊಪ್ಪ ಕೆರೆ ಸೇರಿ, ಬಾದಾಮಿ ತಾಲೂಕಿನ 7 ಕೆರೆ ತುಬಿಸಲು ಪ್ರಸಕ್ತವರ್ಷ ನೀರು ತುಂಬಲು ಇನ್ನೂ ಚಾಲನೆ ನೀಡದೆ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ರೈತರು ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿ ಪ್ರತಿಭಟಿಸಿದರು.
ಕೆ.ಬಿ.ಜಿ.ಎಲ್.ಎಲ್ ಎಇಇ ವಿಶ್ವನಾಥ ನೀಲನ್ನವರ್ ಮಾತನಾಡಿ, ಹೇರಕಲ್ ದಕ್ಷಿಣ ವಿಸ್ತøತ ಯೋಜನೆ ಕಾಮಗಾರಿ ವಿಳಂಭಗೊಳ್ಳಲು ಯೊಜನೆಗೆ ಅಗತ್ಯ ಭೂಮಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದೇ ಇರುವುದರಿಂದ ಕಾಮಗಾರಿ ವಿಳಂಭವಾಗಿದೆ. ಪರಿಹಾರ ಮೊತ್ತಕ್ಕೆ ರೈತರು ಒಪ್ಪದೇ ಇರುವುದರಿಂದ ರೈತರ ಭೂಮಿಯಲ್ಲಿ ಕಾಮಗಾರಿ ಆರಂಭಿಸಲು ಸಾಧ್ಯವಾಗಿಲ್ಲ ಮೇಲಧಿಕಾರಿಗಳ ಗಮನಕ್ಕೆ ತಂದು ರೈತರ ಜತೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು, ವಿದ್ಯುತ್ ಟ್ರಾನ್ಸಫಾರ್ಮರ್ ರಿಪೇರಿ ಇದ್ದ ಕಾರಣ ಕರೆಗೆ ನೀರು ತುಂಬಿಸಲು ಚಾಲನೆ ನೀಡಲು ಸಾಧ್ಯವಾಗಿಲ್ಲ. ಬೇರೆ ವಿದ್ಯುತ್ ಟ್ರಾನ್ಸ ಫಾರ್ಮರ್ ತರಿಲಾಗಿದ್ದು, ಅದನ್ನೂ ಜೋಡಿಸುವ ಕಾರ್ಯ ನಡೆದಿದೆ. ಟೆಕ್ನಿಕಲ್ ಸಮಸ್ಯೆ ಕಣಿಸಿಕೊಂಡಿದ್ದು, ಬೆಂಗಳೂರಿನಿಂದ ತಂಡ ಕರೆಯಿಸಿ ಕೂಡಿಸುವ ಕಾರ್ಯ ಮಾಡಿ ಬುಧವಾರ ಸಂಜೆಯೊಳಗೆ ಮಾಡಲಾಗುವುದು. ತಕ್ಷಣ ಕೆರೆಗೆ ನೀರು ತುಂಬಲು ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದಬಳಿಕ ರೈತರು ತಮ್ಮ ಪ್ರತಿಭಟನೆ ಹಿಂಪಡೆದರು.ಬಾಗಲಕೋಟೆ ಜಿಪಂ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೊಮಾರ ಮಾತನಾಡಿ, ಅಧಿಕಾರಿಗಳು ಯಾವುದೇ ಯೋಜನೆ ಪೂರ್ಣಗೊಳಿಸಲು ಇಚ್ಛಾಶಕ್ತಿ ತೋರಬೇಕು. ಇದರಿಂದ ನಿಮಗೂ ಹೆಸರು ಬರುತ್ತೆ ಮತ್ತು ರೈತರಿಗೂ ಅನುಕೂಲವಾಗುತ್ತದೆ, ವಿಸ್ತ್ರತ ಯೋಜನೆ ಪೂರ್ಣಗೊಳ್ಳಲು ರೈತರು ಸಹಕಾರ ನೀಡಬೇಕು ಮತ್ತು ರೈತರು ಸಹ ಅಧಿಕಾರಿಗಳ ಜತೆ ನಿಲ್ಲಬೇಕು ಎಂದರು.