ಕನ್ನಡಪ್ರಭ ವಾರ್ತೆ, ಹಿರಿಯೂರು
ಧರಣಿ ನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮದು ನ್ಯಾಯಯುತ ಬೇಡಿಕೆಯಾಗಿದೆ. ನಾನು ಕೂಡಲೇ ಮುಖ್ಯಮಂತ್ರಿಗಳಿಗೆ, ನೀರಾವರಿ ಮಂತ್ರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆಯುತ್ತೇನೆ. ಶೀಘ್ರದಲ್ಲೇ ಈ ಭಾಗದ ಕೆರೆಗಳಿಗೆ ನೀರು ತುಂಬಿಸುವ ಬಗ್ಗೆ ರೈತರೊಂದಿಗೆ ಸಭೆ ನಡೆಸಲಾಗುವುದು. ಕೇಂದ್ರ ಸರ್ಕಾರದಿಂದ ಶೇ 50 ಮತ್ತು ರಾಜ್ಯ ಸರ್ಕಾರದಿಂದ ಶೇ 50 ರಷ್ಟು ಅನುದಾನ ಬಳಸಿ ಈ ಭಾಗಕ್ಕೆ ನೀರು ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮಾತನಾಡಿ, ಈ ಭಾಗದ ಕೆರೆಗಳ ಮಾಹಿತಿ ಪಡೆದು ನೀರಿನ ಪ್ರಮಾಣ ಎಷ್ಟು ಬೇಕಾಗಬಹುದು ಎಂಬ ನಿಖರ ಮಾಹಿತಿ ಪಡೆದು ಮುಂದುವರೆಯಲಾಗುವುದು ಎಂದರು.
ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಕೆಟಿ ತಿಪ್ಪೇಸ್ವಾಮಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ಜಯಣ್ಣ,ಡಿ. ಯಶೋಧರ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಪಾಪಣ್ಣ, ಮಂಜುನಾಥ್, ರಂಗೇನಹಳ್ಳಿ ಶಂಕರಮೂರ್ತಿ, ಜಯರಾಮಪ್ಪ, ಜಗದಾಂಬಿಕ, ವಿಶ್ವನಾಥ್,ಎಂ ಆರ್ ಈರಣ್ಣ, ನಟರಾಜ್,ಈರಣ್ಣ,ಕನ್ಯಪ್ಪ,ಚಿತ್ರ ಲಿಂಗಪ್ಪ ಮುಂತಾದವರು ಹಾಜರಿದ್ದರು.------