ಅವೈಜ್ಞಾನಿಕ ಬೆಳೆ ಸಮೀಕ್ಷೆ ಖಂಡಿಸಿ ಇಂದು ರೈತರ ಪ್ರತಿಭಟನೆ

KannadaprabhaNewsNetwork |  
Published : Oct 10, 2025, 01:01 AM IST
ಪೊಟೋ ಪೈಲ್ ನೇಮ್ ೯ಎಸ್‌ಜಿವಿ೨  ಪಟ್ಟಣದಲ್ಲಿ ಆಯೋಜಿಸಿರುವ ರೈತರ ಬೃಹತ್ ಪ್ರತಿಭಟನೆಯ ಆಹ್ವಾನ ಪತ್ರಿಕೆಯನ್ನು ರೈತ ಮುಖಂಡರು ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ರೈತರಿಗೆ ಬೆಳೆ ವಿಮೆ ಮತ್ತು ಬೆಳೆ ಹಾನಿ ಪರಿಹಾರವನ್ನು ವಂಚಿಸಲು ರಾಜ್ಯ ಸರ್ಕಾರ ಅವೈಜ್ಞಾನಿಕ ಬೆಳೆ ಸಮೀಕ್ಷೆ ಮಾಡಿಸಿದೆ ಎಂದು ಆಪಾದಿಸುತ್ತಿರುವ ತಾಲೂಕಿನ ರೈತರು ಶುಕ್ರವಾರ (ಅ.10) ಹಮ್ಮಿಕೊಂಡಿರುವ ಬೃಹತ್ ತಾಲೂಕು ಮಟ್ಟದ ರೈತರ ಪ್ರತಿಭಟನೆಯ ಆಮಂತ್ರಣ ಪತ್ರವನ್ನು ಬಿಡುಗಡೆ ಮಾಡಿದರು.

ಶಿಗ್ಗಾಂವಿ: ರೈತರಿಗೆ ಬೆಳೆ ವಿಮೆ ಮತ್ತು ಬೆಳೆ ಹಾನಿ ಪರಿಹಾರವನ್ನು ವಂಚಿಸಲು ರಾಜ್ಯ ಸರ್ಕಾರ ಅವೈಜ್ಞಾನಿಕ ಬೆಳೆ ಸಮೀಕ್ಷೆ ಮಾಡಿಸಿದೆ ಎಂದು ಆಪಾದಿಸುತ್ತಿರುವ ತಾಲೂಕಿನ ರೈತರು ಶುಕ್ರವಾರ (ಅ.10) ಹಮ್ಮಿಕೊಂಡಿರುವ ಬೃಹತ್ ತಾಲೂಕು ಮಟ್ಟದ ರೈತರ ಪ್ರತಿಭಟನೆಯ ಆಮಂತ್ರಣ ಪತ್ರವನ್ನು ಬಿಡುಗಡೆ ಮಾಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತರು ಶುಕ್ರವಾರ ಪಟ್ಟಣದಲ್ಲಿ ನಡೆಯಲಿರುವ ಬೃಹತ್ ರೈತ ಪ್ರತಿಭಟನೆಯ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ನಾರಾಯಣಪುರದ ರೈತ ಮುಖಂಡ ಶಶಿಧರ ಹೊನ್ನಣ್ಣನವರ ಮಾತನಾಡಿ, ಈಗಾಗಲೇ ಬೆಳೆ ಸಮೀಕ್ಷೆಯ ವರದಿಯನ್ನು ತಾಲೂಕು ಜಂಟಿ ಸಮೀಕ್ಷಾ ಇಲಾಖೆಗಳು ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ. ಈ ವರದಿಯಲ್ಲಿ ಕೇವಲ ಮೆಕ್ಕೆಜೋಳವನ್ನು ಮಾತ್ರ ಸಮೀಕ್ಷೆ ಮಾಡಲಾಗಿದೆ. ಈ ವರದಿಯ ಪ್ರಕಾರ ರೈತರ ಕೆಲವು ಗುಂಟೆ ಫಸಲು ಮಾತ್ರ ಹಾನಿಯಾಗಿದೆ ಎಂದು ವರದಿ ಮಾಡಿದೆ. ಮುಗ್ಧ ರೈತರಿಗೆ ಈ ವರದಿಯ ಹಿನ್ನೆಲೆಯ ಮೋಸ ಅರ್ಥವಾಗುತ್ತಿಲ್ಲ. ರೈತರ ಒಟ್ಟು ಜಮೀನಿನಲ್ಲಿ ಶೇ. ೩೩ ಬೆಳೆಹಾನಿಯಾದರೆ ಮಾತ್ರ ಅವರು ಪರಿಹಾರ ಮತ್ತು ಇನ್ಸುರೆನ್ಸ ಪಡೆಯಲು ಅರ್ಹರಾಗುತ್ತಾರೆ. ಆದರೆ ಈ ಬೆಳೆ ಸಮೀಕ್ಷೆಯ ವರದಿ ಬೆಳೆಹಾನಿಯನ್ನು ಕಡಿಮೆ ಪ್ರಮಾಣವನ್ನು ತೋರಿಸುತ್ತಿದೆ. ಇದರಿಂದ ೫ ಎಕರೆ ಬೆಳೆಹಾನಿಯಾದ ರೈತನ ಜಮೀನಿನಲ್ಲಿ ಕೆಲವೆ ಗುಂಟೆಯಷ್ಟು ಹಾನಿಯನ್ನು ತೋರಿಸಿದರೆ ಅಂತಹ ರೈತರಿಗೆ ಯಾವುದೇ ಪರಿಹಾರ ಸಿಗುವುದಿಲ್ಲ. ಈ ಮೋಸದ ಸಮೀಕ್ಷೆಯನ್ನು ತಾಲೂಕಿನ ರೈತರು ಅರ್ಥಮಾಡಿಕೊಂಡು ಶುಕ್ರವಾರ ಶಿಗ್ಗಾಂವಿ ಪಟ್ಟಣದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಪ್ರತಿಯೊಂದು ಗ್ರಾಮಗಳ ರೈತರು ಭಾಗವಹಿಸಿ ಈ ಸಮೀಕ್ಷಾ ವರದಿಯನ್ನು ತಿರಸ್ಕರಿಸುವ ಮೂಲಕ ಮರು ಸಮೀಕ್ಷೆಗೆ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಪರಶುರಾಮ ಹುಲಸೋಗಿ, ಉಮೇಶ ಅಂಗಡಿ, ವಿರೂಪಾಕ್ಷಪ್ಪ ಆಡಿನ, ಶಿದ್ದಪ್ಪ ಶ್ಯಾಬಾಳ, ಗದಿಗಯ್ಯಾ ಹಿರೇಮಠ, ಸಂತೋಷ ದೊಡ್ಡಮನಿ, ರೆವಪ್ಪ ಕುಬಸದ, ಬಸವರಾಜ ನಾರಾಯಣಪುರ, ಪ್ರವೀಣ ಗೂಳೆಣ್ಣವರ, ಜಗದೀಶ ಶಿದ್ದಪ್ಪನವರ, ಬಸವಣ್ಯಪ್ಪ ಗುಳೇದಕೆರಿ, ಮುತ್ತಣ್ಣ ಗುಡಗೇರ, ಆನಂದ ಬಾರ್ಕೇರ, ಮಾಲತೇಶ ಕಮ್ಮಾರ, ಪ್ರವೀಣ ಹಾವಣಗಿ ಇತರರಿದ್ದರು.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ