ಕೊಪ್ಪಳದಲ್ಲಿ ಗೊಬ್ಬರ ಖರೀದಿಗೆ ರೈತರ ‘ಕ್ಯೂ’

KannadaprabhaNewsNetwork |  
Published : May 26, 2026, 02:00 AM ISTUpdated : May 26, 2026, 08:57 AM IST
Fertilizer

ಸಾರಾಂಶ

ಕೊಪ್ಪಳ ಜಿಲ್ಲೆಯಾದ್ಯಂತ ಉತ್ತಮ ಮಳೆ ಸುರಿದ ಹಿನ್ನೆಲೆಯಲ್ಲಿ ರೈತರು ಬಿತ್ತನೆಗೂ ಮೊದಲೆ ಗೊಬ್ಬರ ಖರೀದಿಸಲು ಮುಂದಾಗಿದ್ದಾರೆ. ನಗರದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಮುಂದೆ ರೈತರು ಸೋಮವಾರ ಅಧಿಕ ಸಂಖ್ಯೆಯಲ್ಲಿ ನಿಂತಿದ್ದರಿಂದ ಪೊಲೀಸರು ಬಿಗಿ ಭದ್ರತೆ ಕಲ್ಪಿಸಬೇಕಾಯಿತು.

 ಕೊಪ್ಪಳ :  ಕೊಪ್ಪಳ ಜಿಲ್ಲೆಯಾದ್ಯಂತ ಉತ್ತಮ ಮಳೆ ಸುರಿದ ಹಿನ್ನೆಲೆಯಲ್ಲಿ ರೈತರು ಬಿತ್ತನೆಗೂ ಮೊದಲೆ ಗೊಬ್ಬರ ಖರೀದಿಸಲು ಮುಂದಾಗಿದ್ದಾರೆ. ನಗರದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಮುಂದೆ ರೈತರು ಸೋಮವಾರ ಅಧಿಕ ಸಂಖ್ಯೆಯಲ್ಲಿ ನಿಂತಿದ್ದರಿಂದ ಪೊಲೀಸರು ಬಿಗಿ ಭದ್ರತೆ ಕಲ್ಪಿಸಬೇಕಾಯಿತು.

ಗೊಬ್ಬರಕ್ಕಾಗಿ ಪರದಾಡಿದ ರೈತರು

ಕಳೆದ ವರ್ಷ ಗೊಬ್ಬರಕ್ಕಾಗಿ ಪರದಾಡಿದ ರೈತರು ಈಗ ಆ ವರ್ಷದ ಘಟನೆ ಮರುಕಳಿಸಬಾರದೆಂಬ ಕಾರಣಕ್ಕೆ ಮುಂಚಿತವಾಗಿಯೇ ಯೂರಿಯಾ, ಡಿಎಪಿಗಾಗಿ ಬೆಳಗ್ಗೆ 7 ಗಂಟೆಯಿಂದ ಸಂಘದ ಮುಂದೆ ಜಮಾಯಿಸಿದ್ದರು. ಗ್ರಾಮೀಣ ಪ್ರದೇಶದಿಂದ ಆಗಮಿಸಿದ್ದ ರೈತರು, ಆಧಾರ್ ಕಾರ್ಡ್‌ ಮತ್ತು ಕೃಷಿ ಚೀಟಿಯೊಂದಿಗೆ ಸರತಿಯಲ್ಲಿ ನಿಂತಿರುವುದು ಕಂಡು ಬಂತು.

ಲೆಕ್ಕಾಚಾರ ಇಟ್ಟುಕೊಂಡು ಗೊಬ್ಬರ ನೀಡಬೇಡಿ

ಎಕರೆ ಲೆಕ್ಕಾಚಾರ ಇಟ್ಟುಕೊಂಡು ಗೊಬ್ಬರ ನೀಡಬೇಡಿ, ನಮಗೆ ಅವಶ್ಯ ಇದ್ದಷ್ಟು ಗೊಬ್ಬರ ನೀಡಿ ಎಂದು ರೈತರು ಒತ್ತಾಯಿಸಿದ್ದಾರೆ. ಈ ಹಿಂದೆ ಗೊಬ್ಬರ ನೀಡಿ ಎಂದು ಧ್ವನಿ ಎತ್ತಿದ್ದರೂ ಸಮರ್ಪವಾಗಿ ಪೂರೈಸದ ಕಾರಣ ಖಾಸಗಿ ಅಂಗಡಿಗಳಲ್ಲಿ ಸಾಕಷ್ಟು ಹಣ ನೀಡಿ ಖರೀದಿಸಬೇಕಾಯಿತು. ಗೊಬ್ಬರಕ್ಕೆ ಖರ್ಚು ಮಾಡಿದಷ್ಟು ಬೆಳೆ ಬಾರದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ, ಈಗ ಒಂದು ಚೀಲ ಗೊಬ್ಬರ ನೀಡಿದರೆ ಸಾಲದು, ನಮಗೆ 4ರಿಂದ 5 ಚೀಲ ಗೊಬ್ಬರ ನೀಡಬೇಕು ಎಂದು ಒತ್ತಾಯಿಸಿದರು.

ರೈತರಿಗೆ ಸಮರ್ಪಕವಾಗಿ ಗೊಬ್ಬರ ವಿತರಿಸಲು 200 ಟನ್ ಯೂರಿಯಾ ಮತ್ತು 60 ಟನ್ ಕಾಂಪ್ಲೆಕ್ಸ್ ದಾಸ್ತಾನು ಇದೆ. ಆದರೆ, ಎಫ್ಐಡಿ ಪ್ರಕಾರ ಎಕರೆಗೆ ಒಂದು ಚೀಲ ಗೊಬ್ಬರ ನೀಡುವುದಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಗಂಡಗೆ ಅನಸ್ತೇಶಿಯಾ ನೀಡಿ, 10 ಸಲ ಚುಚ್ಚಿ ಕೊಂದು, ರೀಲ್ಸ್‌ ನೋಡ್ತಿದ್ದ ಪತ್ನಿ!
ಕಾಮನ್ವೆಲ್ತ್‌, ಏಷ್ಯಾಡ್‌: ರಾಜ್ಯ ಕ್ರೀಡಾಳುಗಳಿಗೆ ತಲಾ ₹5 ಲಕ್ಷ