-ಶಾಸಕ ಶರತ್ ನೇತೃತ್ವದಲ್ಲಿ ಸಭೆ -ನಂದಗುಡಿ ಮತ್ತು ಸೂಲಿಬೆಲೆ ಹೋಬಳಿಯ 18,500 ಎಕರೆ ಪ್ರದೇಶಕ್ಕೆ ಟೌನ್‌ಶಿಪ್ ಯೋಜನೆ ಸಿದ್ಧತೆಕನ್ನಡಪ್ರಭ ವಾರ್ತೆ ಹೊಸಕೋಟೆ
ವೃಷಭಾವತಿ ಯೋಜನೆ: ನಂದಗುಡಿ ಹಾಗೂ ಸೂಲಿಬೆಲೆ ಹೋಬಳಿ ಕೆರೆಗಳಗೆ ನೀರು ತುಂಬಿಸುವ ಉದ್ದೇಶದಿಂದ 60 ಎಂಎಲ್‌ಡಿ ನೀರನ್ನು ಹೊರಮಾವು ಬಳಿಯಿಂದ ಬೆಟ್ಟಕೋಟೆ ಮಾರ್ಗವಾಗಿ ನಂದಗುಡಿ ಹಾಗೂ ಸೂಲಿಬೆಲೆ ಭಾಗದ ೫೯ ಕೆರೆಗೆ ನೀರು ಹರಿಸಲು ಡಿಪಿಆರ್ ತಯಾರಾಗಿದೆ. ೧೫೦ ಕೋಟಿ ವೆಚ್ಚದಲ್ಲಿ ವೃಷಭಾವತಿ ಯೋಜನೆಯಿಂದ ನೀರು ತುಂಬಿಸಲು ಯೋಜನೆ ಸಿದ್ದಪಡಿಸಲಾಗಿದೆ ಎಂದರು.
ಮಾಜಿ ತಾಪಂ ಅಧ್ಯಕ್ಷ ಕೆಂಚೇಗೌಡ ಮಾತನಾಡಿ, 2006ರಲ್ಲಿ ಕೇಂದ್ರ ಸರ್ಕಾರದಿಂದ ನಂದಗುಡಿಯಲ್ಲಿ ವಿಶೇಷ ವಿತ್ತ ವಲಯ ಮಾಡಲು 36 ಹಳ್ಳಿಗಳ ವ್ಯಾಪ್ತಿಯಲ್ಲಿ 12 ಸಾವಿರ ಎಕರೆ ಪ್ರದೇಶದ ಭೂಸ್ವಾಧೀನಕ್ಕೆ ಮುಂದಾಗಿದ್ದ ವೇಳೆ ರಾಜಭವನ ಚಲೋ ಮೂಲಕ ತಡೆ ಹಿಡಿದಿದ್ದೆವು. ಈಗ ಕೂಡ ಅದೇ ಪರಿಸ್ಥಿತಿ ಬಂದಿದೆ ಎಂದರು.ರಾಜ್ಯ ಒಕ್ಕಲಿಗರ ಸಂಘದ ಕಾರ್ಯದರ್ಶಿ ರಾಜಶೇಖರಗೌಡ, ಟಿಎಪಿಸಿಎಂಎಸ್ ಉಪಾಧ್ಯಕ್ಷ ರವೀಂದ್ರ, ಜಿಪಂ ಮಾಜಿ ಸದಸ್ಯ ಕಲ್ಲಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಧರ್ಮೇಶ್, ತಾಪಂ ಮಾಜಿ ಸದಸ್ಯರಾದ ಬೀರಪ್ಪ, ರುದ್ರೇಗೌಡ, ಎಸ್‌ಎಫ್ ಸಿಎಸ್ ಅಧ್ಯಕ್ಷ ಕೆ.ಮಂಜುನಾಥ್, ಸಮಾಜ ಸೇವಕರಾದ ಕಲ್ಕೆರೆ ಕೆ.ಎಸ್.ಮಹದೇವಯ್ಯ, ಎಂ.ಮಂದೀಪ್‌ಗೌಡ ಇತರರಿದ್ದರು.
ನಂದಗುಡಿ ಹೋಬಳಿಯಲ್ಲಿ ಹೈನುಗಾರಿಕೆ, ತರಕಾರಿ, ಹೂವು, ರೇಷ್ಮೆ ಬೆಳೆಯುತ್ತಾರೆ. ಟೌನ್ ಶಿಪ್‌ನಿಂದ ರೈತರು ಭೂಮಿ ಕಳೆದುಕೊಂಡು, ಬರುವ ಹಣವನ್ನೂ ಖರ್ಚು ಮಾಡಿಕೊಂಡು ಬರಿಗೈಯಲ್ಲಿ ಕೂರಬೇಕಾಗುತ್ತದೆ. ಆದ್ದರಿಂದ ನಾವು ನಮ್ಮ ಭೂಮಿಯಲ್ಲಿ ಏನೇ ಬೆಳೆದರೂ, ಯಾವುದೇ ಸಾಲ ಮಾಡಿಕೊಂಡರೂ ನಾವು ಮಾತ್ರ ನಮ್ಮ ಭೂಮಿ ಬಿಡೋಲ್ಲ.
ಸಾಕಷ್ಟು ರೈತರಿಗೆ ಜಮೀನು ಕೊಡುವ ಇಂಗಿತ ಇರಬಹುದು. ಆದರೆ, ಮುಂದಿನ ಪೀಳಿಗೆಗೆ ಜಮೀನನ್ನು ಕಾಪಾಡಿಕೊಂಡು ಒಕ್ಕಲುತನ ಮುಂದುವರೆಸಬೇಕು. ಆದ್ದರಿಂದ ಶಾಸಕರು ಕೆರೆಗಳಿಗೆ ನೀರು ತುಂಬಿಸುವ ಮೂಲಕ ಕೃಷಿ ಚಟುವಟಿಕೆ ಮಾಡಲು ಸಹಕಾರ ನೀಡಬೇಕು. ಹೀಗೆ ಭೂಸ್ವಾಧಿನಕ್ಕೆ ಭೂಮಿ ಬಿಟ್ಟುಕೊಡಬಾರದು.
-ಅಕ್ಲೇಗೌಡ, ಅಧ್ಯಕ್ಷ, ತಾಲೂಕು ಘಟಕದ ರೈತ ಸಂಘ, ಹಸಿರು ಸೇನೆ
ಈಗಾಗಲೆ ಪಿಲ್ಲಗುಂಪೆ, ಕೈವಾರ, ನರಸಾಪುರ, ವೇಮಗಲ್ ಭಾಗಗಳಲ್ಲಿ ಕೈಗಾರಿಕಾ ಪ್ರದೇಶಗಳಿವೆ. ಇದರ ನಡುವೆ ನಂದಗುಡಿಗೆ ಟೌನ್ ಶಿಪ್ ಅಗತ್ಯವಿಲ್ಲ. ನಮ್ಮ ಗ್ರಾಮಗಳಿಗೆ ಅಗತ್ಯವಾದ ಉತ್ತಮ ರಸ್ತೆ, ನೀರು ಕೊಡಿ, ಈಗಾಗಲೆ ದವಸ ಧಾನ್ಯಗಳ ಬೆಲೆ ಗಗನಕ್ಕೇರಿದೆ. ಕೃಷಿಗೆ ಉತ್ತೇಜನ ನೀಡುವ ಕೆಲಸ ಮಾಡಿ.
-ಅನಂತನಾರಾಯಣ್, ಮಾಜಿ ಅಧ್ಯಕ್ಷ, ಕುರಿ ಮತ್ತು ಉಣ್ಣೆ ಸಂಘಹೋರಾಟಕ್ಕೂ ಸಿದ್ದರಿರಬೇಕು: ಶಾಸಕ