ಹೊಳೆಹೊನ್ನೂರು: ರೈತರು ವಿಷಯುಕ್ತ ಆಹಾರದಿಂದ ಮುಕ್ತವಾದರೆ ಆರೋಗ್ಯಯುತ ಜೀವನ ನಡೆಸಬಹುದು ಎಂದು ರೈತ ಸಂಘ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಹೇಳಿದರು.
ಇಲ್ಲಿಗೆ ಸಮೀಪದ ಹನುಮಂತಾಪುರದ ಸರ್ಕಾರಿ ಆಯುರ್ವೇ ಆಸ್ಪತ್ರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ 8ನೇ ರಾಷ್ಟ್ರೀಯ ಆಯುರ್ವೇದ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಕೊಟ್ಟಿಗೆ ಗೊಬ್ಬರ ಮಾರಾಟ ಮಾಡಿ, ರಾಸಾಯನಿಕ ಗೊಬ್ಬರ ಬಳಸುವ ಸ್ಥಿತಿಗೆ ರೈತರು ತಲುಪಿದ್ದೆವೆ. ಹಣದಾಸೆಗೆ ಬಲಿಯಾಗಿ ಸತ್ವಯುತ ಮೊಸರು, ಮಜ್ಜಿಗೆಯನ್ನು ಕೊಂಡು ಬಳಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದೇವೆ. ದೈಹಿಕ ಶ್ರಮದ ಕೆಲಸಗಳು ಇಲ್ಲವಾಗಿ, ಆನಾರೋಗ್ಯ ಸಮಸ್ಯೆಗಳು ಕಾಡುತ್ತಿವೆ ಎಂದರು.
ರಾಸಾಯನಿಕ ಗೊಬ್ಬರ ಬೇಡುವ ಹೈಬ್ರೆಡ್ ತಳಿಗಳ ಬೆನ್ನುಬಿದ್ದು ಸಾವಯವದಿಂದ ದೂರಾಗಿ ರೋಗಗಳಿಗೆ ಆಹ್ವಾನ ನೀಡುತ್ತಿದ್ದೇವೆ. ರಾಸಾಯನಿಕ ಬಳಸಿ ಹೆಚ್ಚು ಬೆಳೆಯಿರಿ ಎನ್ನುತ್ತಿದ ಸರ್ಕಾರಗಳು ಈಗ ಸಾವಯವ ಕೃಷಿ ಮಾಡಿ ಎಂದು ದುಂಬಾಲು ಬೀಳುತ್ತಿವೆ. ಅತಿ ಹೆಚ್ಚು ರಾಸಾಯನಿಕ ಬಳಕೆ ಮಾಡಿದ ಕಾರಣ ಭೂಮಿ ಸತ್ವ ಕಳೆದುಕೊಳ್ಳುತ್ತಿದೆ. ನಮ್ಮ ಆಹಾರ ಪದ್ಧತಿ ಸರಿಯಾದರೆ ರೋಗಗಳಿಂದ ಮುಕ್ತವಾಗಬಹುದು. ಆಯುರ್ವೇದದಲ್ಲಿ ದೀರ್ಘಕಾಲದ ಕಾಯಿಲೆಗಳನ್ನು ಶಾಶ್ವತವಾಗಿ ಗುಣಪಡಿಸಿಕೊಳ್ಳಬಹುದು ಎಂದರು.ವೈದ್ಯ ಡಾ. ಅನಿಲ್‍ಕುಮಾರ್ ಮಾತನಾಡಿ, ಆರ್ಯುರ್ವೇದ 6000 ವರ್ಷಗಳ ಹಿಂದೆಯೇ ಆಚರಣೆಗೆ ಬಂದಿದೆ. ಈ ಬಾರಿ 8ನೇ ವರ್ಷದ ಆಯುರ್ವೇದ ದಿನ ಪ್ರಯುಕ್ತ ಪ್ರತಿದಿನ ಪ್ರತಿಯೊಬ್ಬರಿಗೂ ಆಯುರ್ವೇದ ಆಚರಣೆ ಮಾಡಲಾಗುತ್ತಿದೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ. ರೈತರಿಗೆ ಆಯುರ್ವೆದದ ಅನುಕೂಲಗಳನ್ನು ಮನವರಿಕೆ ಮಾಡಲಾಗುತ್ತಿದೆ. ರೈತರಲ್ಲಿ ಆಯುರ್ವೇದ ಬಗ್ಗೆ ತಿಳಿವಳಿಕೆ ಮೂಡಿದರೆ ಸಣ್ಣಪುಟ್ಟ ಕಾಯಿಲೆಗಳಿಗೆ ಪರವಲಂಬನೆ ದೂರಾಗುತ್ತದೆ. ಪತ್ರಿಯೊಬ್ಬರಿಗೂ ಆಯುರ್ವೆದದ ಮಹತ್ವ ಅರಿವಿಗೆ ಬರಬೇಕಾಗಿದೆ ಎಂದರು.
ತೋಟಗಾರಿಕೆ ಅಧಿಕಾರಿ ಧನುಷ್, ವೈದ್ಯ ರವಿಶಂಕರ್, ಡಾ. ಸುರೇಂದ್ರ, ಚಂದ್ರಪ್ಪ, ಸಿದ್ದೋಜಿರಾವ್, ಚಂದ್ರೋಜಿರಾವ್, ಗೀತಮ್ಮ ಇತರರಿದ್ದರು.- - - (** ಈ ಫೋಟೋ-ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಬಹುದು)
-4ಎಚ್‍ಎಚ್‍ಆರ್‌ಪಿ05:ಹೊಳೆಹೊನ್ನೂರು ಸಮೀಪದ ಹನುಮಂತಾಪುರದ ಸರ್ಕಾರಿ ಆರ್ಯುವೇದ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ ಆಯುರ್ವೇದ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಮಾತನಾಡಿದರು. ವೈದ್ಯ ಡಾ. ಅನಿಲ್‍ಕುಮಾರ್, ಧನುಷ್, ರವಿಶಂಕರ್, ಡಾ.ಸುರೇಂದ್ರ ಇತರರು ಇದ್ದರು.