ಡಂಬಳ: ಹುಲಿಗುಡ್ಡ ಏತ ನೀರಾವರಿಯ ಪೈಪ್‌ಲೈನ್ ಮೂಲಕ ಪೇಠಾಆಲೂರ ಕೆರೆಗೆ ನೀರು ತುಂಬಿಸಲಾಗಿದೆ. ₹2 ಕೋಟಿ ಅನುದಾನದಡಿ ಕಾಲುವೆಗಳ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ಇದರ ಸದುಪಯೋಗ ಪಡಿಸಿಕೊಂಡು ಉತ್ತಮ ಬೆಳೆ ಹೊಂದುವುದರ ಮೂಲಕ ಆರ್ಥಿಕವಾಗಿ ಸಬಲರಾಗಿ ಎಂದು ರೈತರಿಗೆ ಶಾಸಕ ಜಿ.ಎಸ್. ಪಾಟೀಲ ಹೇಳಿದರು.ಡಂಬಳ ಹೋಬಳಿಯ ಪೇಠಾ ಆಲೂರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಪವರ್ ಗ್ರಿಡ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿ. ಕಂಪನಿ ವತಿಯಿಂದ ಕೆ.ಸಿ.ಎಸ್.ಆರ್. ವಂತಿಗೆ ಹಣದಲ್ಲಿ ಮಂಜೂರಾದ ₹9 ಕೋಟಿ ಅನುದಾನದಲ್ಲಿ ಮೇವುಂಡಿ-ಪೇಠಾಆಲೂರ-ಹಳ್ಳಿಗುಡಿ ರಸ್ತೆ ಕಾಮಗಾರಿ ಭೂಮಿಪೂಜೆ ನೇರವೇರಿಸಿ ಮಾತನಾಡಿದರು.
ದೇಶಾದ್ಯಂತ ಮಹಾತ್ಮಾ ಗಾಂಧೀಜಿ ಹೆಸರು ತೆಗೆದು ಕೇಂದ್ರ ಸರ್ಕಾರ ವಿಬಿ ಜಿರಾಮಜೀ ಯೋಜನೆ ಜಾರಿ ಮಾಡಿದ್ದು, ಇದರ ವಿರುದ್ಧ ಜನತೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಡಿ.ಡಿ. ಮೋರನಾಳ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವುದರಿಂದ ಹಿಡಿದು, ಹಲವಾರು ಡ್ಯಾಮ್‌ಗಳ ನಿರ್ಮಾಣ, ಸರಕಾರಿ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದು ಕಾಂಗ್ರೆಸ್ ಪಕ್ಷವಾಗಿದೆ. ಸರ್ವರ ಹಿತ ಕಾಪಾಡಿ ದೇಶದ ಅಖಂಡತೆಗೆ ಆಧ್ಯತೆ ನೀಡುವ ಪಕ್ಷ ಕಾಂಗ್ರೆಸ್ ಎಂದು ಹೇಳಿದರು.ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಯಲ್ಲಪ್ಪಗೌಡ ಕರಮಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಂಡರಗಿ ತಾಲೂಕು ಯುತ ಕಾಂಗ್ರೆಸ್ ಅಧ್ಯಕ್ಷ ಶರಣು ಬಂಡಿಹಾಳ, ಗದಗ ಜಿಲ್ಲಾ ಕಾರ್ಯನಿರ್ವಾಹಕ ಅಭಿಯಂತ ಉಮೇಶ ನಾಯಕ, ಎಡಬ್ಲೂ ಎಸ್.ಎಂ. ನಾಯಕ, ಸಂತೋಷ ಹಿರೇಮಠ, ಎಂ.ಎನ್. ದಾಯಮ್ಮನವರ, ತಾಲೂಕು ಇಒ ವಿಶ್ವನಾಥ ಹೊಸಮನಿ, ತೋಟಗಾರಿಕಾ ಅಧಿಕಾರಿ ಮಹಮ್ಮದರಫೀಕ್ ತಾಂಬೋಟಿ, ಹಾಲಪ್ಪ ಕಬ್ಬೇರಳ್ಳಿ, ಶ್ರೀಶೈಲಪ್ಪ ನಾಗನೂರ, ಹನಮಪ್ಪ ಹ್ಯಾಟಿ, ವಿಶ್ವನಾಥ ಪಾಟೀಲ, ಮಹಾದೇವಪ್ಪ ಹೂಗಾರ, ರಾಮಣ್ಣ ಹನವಾಳ, ದೇವೇಂದ್ರಪ್ಪ ಹನವಾಳ, ಅಶೋಕ ಸಿಂದೋಗಿ, ಬಸವರಡ್ಡಿ ಬಂಡಿಹಾಳ, ಸೋಮು ಹೈತಾಪುರ, ಬಾಬುಸಾಬ ಮೂಲಿಮನಿ, ಜಿಲ್ಲಾ ಉಪಾಧ್ಯಕ್ಷ ಡಾ. ಬಿ.ಎಸ್. ಮೇಟಿ, ಅಶೋಕ ಕಬ್ಬೇರಳ್ಳಿ,