- ದಾವಣಗೆರೆಯ ದೃಶ್ಯಕಲಾ ಕಾಲೇಜು ಆವರಣದಲ್ಲಿ ಪಾರಂಪರಿಕ ಬೀಜೋತ್ಸವ ಮೇಳಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ದಾವಣಗೆರೆ ರೈತರು ಮತ್ತು ನಾಗರೀಕರು ದೇಶಿ ಬೀಜ ಸಂರಕ್ಷಣೆಯನ್ನು ಪ್ರಧಾನ ಉದ್ದೇಶವನ್ನಾಗಿ ಮಾಡಿಕೊಂಡು ಇಂಥ ಮೇಳ ಆಯೋಜಿಸುವ ಮೂಲಕ ದೇಶಿ ಬೀಜ ಬ್ಯಾಂಕ್ ಸ್ಥಾಪನೆಗೆ ಪ್ರೋತ್ಸಾಹ ದೊರಕುವಂತೆ ಆಗಿದೆ. ಅದರಲ್ಲೂ ಮುಖ್ಯವಾಗಿ ರೈತರು ಮಿಶ್ರಬೆಳೆಯ ವಿಧಾನ ಅನುಸರಿಸಬೇಕು ಎಂದು ಬೀಜ ಸಂರಕ್ಷಕಿ ಬೀಬಿ ಜಾನ್ ಹೇಳಿದರು.
ನಗರದ ದೃಶ್ಯಕಲಾ ಕಾಲೇಜು ಆವರಣದಲ್ಲಿ ಐಕಾಂತಿಕ ಜಾಗತಿಕ ಪಂಗಡದ ವತಿಯಿಂದ ಹಮ್ಮಿಕೊಂಡಿದ್ದ 2 ದಿನಗಳ ಪಾರಂಪರಿಕ ಬೀಜೋತ್ಸವ ಮೇಳಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ದೇಶಿ ಬೀಜ ಸಂರಕ್ಷಣೆ ವಿಚಾರದಲ್ಲಿ ಸರ್ಕಾರವು ಸಹಕಾರ ನೀಡಿದರೆ, ಸಾವಯವ ಕೃಷಿ ಮತ್ತು ಬೀಜ ಸಂರಕ್ಷಣೆಗೆ ಹೆಚ್ಚಿನ ಉತ್ತೇಜನ ಸಿಗಲಿದೆ ಎಂದರು.ಪ್ರತಿ ಎಕರೆ ಭೂಮಿಯಲ್ಲಿ ವಿವಿಧ ಧಾನ್ಯಗಳನ್ನು ಬೆಳೆಸಿ ಭೂಮಿಯ ಫಲವತ್ತತೆ ಮತ್ತು ಆಹಾರದ ಆರೋಗ್ಯವನ್ನು ಕಾಪಾಡುವ ಕೆಲಸ ಮಾಡಲಾವುದು. ನಾವೇ ಬೆಳೆಯುವ ಸಿರಿಧಾನ್ಯಗಳನ್ನು ಖರೀದಿ ಮಾಡಿ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವ ದೇವಧಾನ್ಯ ರೈತ ಉತ್ಪಾದಕರ ಕಂಪನಿಯನ್ನು 2023ರ ಕೊನೆಯಲ್ಲಿ ಸ್ಥಾಪಿಸಿದ್ದೇವೆ. ಈಗ ಅದು ಒಂದೂವರೆ ಕೋಟಿ ರು. ವಹಿವಾಟು ನಡೆಸಿ ಯಶಸ್ಸನ್ನು ಕಂಡಿದೆ ಎಂದು ತಿಳಿಸಿದರು.
ಸೃಜನಶೀಲ, ಪರಿಸರಸ್ನೇಹಿ ಮತ್ತು ಸಮುದಾಯಮುಖಿ ಜೀವನಶೈಲಿಯನ್ನು ಈ ಕಾರ್ಯಕ್ರಮ ಉತ್ತೇಜಿಸುತ್ತವೆ ಅನ್ನುವುದನ್ನು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ ಎಂದು ಹೇಳಿದರು.
- - -
ದಾವಣಗೆರೆಯಲ್ಲಿ ಐಕಾಂತಿಕ ಜಾಗತಿಕ ಪಂಗಡದ ವತಿಯಿಂದ ಆಯೋಜಿಸಿದ 2 ದಿನಗಳ ಪಾರಂಪರಿಕ ಬೀಜೋತ್ಸವ ಮೇಳಕ್ಕೆ ಬೀಜ ಸಂರಕ್ಷಕಿ ಬೀಬಿ ಜಾನ್ ಚಾಲನೆ ನೀಡಿದರು.