ಕನ್ನಡಪ್ರಭ ವಾರ್ತೆ ಮೂಡಲಗಿ
ಶನಿವಾರ ತಾಲೂಕಿನ ಗುಜನಟ್ಟಿ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಗ್ರಾಮೀಣ ಭಾಗದ ಜನರ ಬದುಕು ಉಜ್ವಲವಾಗಲೆಂದು ಪ್ರತಿ ಕುಟುಂಬಕ್ಕೆ ತಲಾ 5 ಕೆ.ಜಿ ಉಚಿತ ಅಕ್ಕಿ, ಜಲ ಜೀವನ ಮಷಿನ್ ಯೋಜನೆ ಅಡಿ ಮನೆ ಬಾಗಿಲಗೆ ನೀರು, ಉತ್ತಮ ಆರೋಗ್ಯಕ್ಕಾಗಿ ಆಯುಷ್ಮಾನ ಭಾರತ ಯೋಜನೆಯಡಿ ₹5 ಲಕ್ಷದವರಿಗೆ ಉಚಿತ ಚಿಕಿತ್ಸೆ ನೀಡುತ್ತದೆ. ಉಜ್ವಲ ಗ್ಯಾಸ್ ಯೋಜನೆಯಲ್ಲಿ ಉಚಿತ್ ಗ್ಯಾಸ್ ಮತ್ತು ರಿಯಾಯತಿ ದರದಲ್ಲಿ ಗ್ಯಾಸ್ ವಿತರಣೆ ಮಾಡುತ್ತಿದೆ. ಎಲ್ಲರೂ ಸರ್ಕಾರದ ಯೋಜನೆಗಳನ್ನು ಸದ್ಭಳಿಕೆ ಮಾಡಿಕೊಳ್ಳಬೇಕು ಎಂದರು.
ಮೋದಿ ಅವರು ಬೆಳಗಾವಿ ವಿಮಾನ ನಿಲ್ದಾಣ ಅಭಿವೃದ್ಧಿಗೆ ₹360 ಕೋಟಿ ಬಿಡುಗಡೆ ಮಾಡಿದ್ದಾರೆ. ಹಾಗೂ ಎಲ್ಲ ವರ್ಗದವರು ವಿಮಾನದಲ್ಲಿ ಪ್ರಯಾಣ ಮಾಡಲೆಂದು ವಿಮಾನ ಪ್ರಯಾಣ ದರ ಕಡಿಮೆ ಮಾಡಿದ್ದಾರೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದ ಅರ್ಥಿಕತೆ ಸುಧಾರಿಸಿದೆ. ಮುಂದಿನ ಕೆಲವೆ ವರ್ಷಗಳಲ್ಲಿ ಅಮೆರಿಕ , ಚೀನಾಗಳನ್ನು ಹಿಂದಿಕ್ಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ವಿಕಸಿತ ಭಾರತ ಸಂಕಲ್ಪ ಯಾತ್ರೆ ಪ್ರತಿ ಗ್ರಾಪಂ ಮಟ್ಟದಲ್ಲೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು. ಈ ಸಮಯದಲ್ಲಿ ಸಂಸದ ಈರಣ್ಣಾ ಕಡಾಡಿ ಅವರು ಫಲಾನುಭವಿಗಳಿಗೆ ಗ್ಯಾಸ್ ಮತ್ತು ಸಾಲದ ಚೇಕ್ ವಿತರಿಸಿದರು. ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಕಂಬಳಿ, ಸದಸ್ಯ ಮತ್ತೇಶ ಗುಜನಟ್ಟಿ, ಕೆನರಾ ಬ್ಯಾಂಕ ವ್ಯವಸ್ಥಾಪಕ ಬುರಾನ ಜಮಖಂಡಿ, ವಿವಿಧ ಇಲಾಖೆಯ ಅಧಿಕಾರಿಗಳಾದ ರಮೇಶ ಹಿಪ್ಪರಗಿ, ಬಸು ಬೇವಿನಗಿಡ್ಡದ, ವಿಜಯ ವಡೇನಿ, ಅಭಿನವಕುಮಾರ, ಯಲ್ಲೇಶಕುಮಾರ ಹುಕ್ಕೇರಿ, ಪಿಡಿಒ ರವಿ ಮರೆನ್ನವರ, ಗ್ಯಾಸ ವಿತರಕ ಅನೀಲ ಸುಣಧೋಳಿ, ಪ್ರಮುಖ ಬಸವರಾಜ ಕತ್ತಿ, ಉಮೇಶ ಜಡಗಪ್ಪಗೋಳ, ಗುರು ಗಂಗಣ್ಣವರ, ಶಂಭುಲಿಂಗ ಮುಕ್ಕನ್ನವರ, ಮುತೆಪ್ಪ ಗುಜನಟ್ಟಿ, ಚಿದಾನಂದ ತೆಗ್ಗಿ ಸೇರಿ ರೈತರು, ಮಹಿಳೆಯರು, ಕಾರ್ಯಕರ್ತರು ಇದ್ದರು.ಮೂಡಲಗಿ, ಕಡಾಡಿ, ವಿಕಸಿತ ಭಾರತ,ಮೂಡಲಗಿ, ಕಡಾಡಿ, ವಿಕಸಿತ ಭಾರತ,